ಬಂಗಾರಪೇಟೆ: ತಾಲ್ಲೂಕಿನ ಬೂದಿಕೋಟೆ ಹೋಬಳಿಯ ಯಳೇಸಂದ್ರದ ಗ್ರಾಮ ಪಂಚಾಯಿತಿಯಲ್ಲಿ ಇತ್ತೀಚೆಗೆ ಗ್ರಾಮ ಪಂಚಾಯಿತಿ ಆರೋಗ್ಯ ಅಭಿಯಾನ ಹಮ್ಮಿಕೊಳ್ಳಲಾಯಿತು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮುನಿರಾಜು ಮಾತನಾಡಿ, ‘ಆರೋಗ್ಯವೇ ಭಾಗ್ಯ ಎನ್ನುವ ನಾಣ್ನುಡಿಯಿದೆ. ಆರೋಗ್ಯವಿದ್ದರೆ, ಜೀವನದಲ್ಲಿ ಏನು ಬೇಕಾದರೂ ಸಾಧನೆ ಮಾಡಬಹುದು’ ಎಂದರು.

ಉತ್ತಮ ಆರೋಗ್ಯಕ್ಕೆ ಆಹಾರ ಸೇವನೆ ಮುಖ್ಯ. ಇಂದಿನ ಬದಲಾದ ಜೀವನಶೈಲಿಯಿಂದ ಮಧುಮೇಹ ರೋಗಕ್ಕೆ ತುತ್ತಾಗುತ್ತಿದ್ದೇವೆ. ಅಕ್ಕಿ, ಸಕ್ಕರೆ, ಮೈದಾದಂತಹ ಪದಾರ್ಥಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುತ್ತಿರುವುದರಿಂದ ಸಕ್ಕರೆ ಕಾಯಿಲೆ ಬರುತ್ತದೆ. ನಿತ್ಯ ವ್ಯಾಯಾಮ, ವಾಕಿಂಗ್ ಇತ್ಯಾದಿ ಮಾಡುವುದರಿಂದ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸಬಹುದು. ಆರು ತಿಂಗಳಿಗೊಮ್ಮೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು ಎಂದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅನಿತಾ ಮಾತನಾಡಿ, ‘ಒಂದು ವಾರಕ್ಕಿಂತ ಹೆಚ್ಚು ಕೆಮ್ಮು ಕಂಡು ಬಂದರೆ ಅದು ಕ್ಷಯ ರೋಗಕ್ಕೆ ತಲುಪುವ ಸಾಧ್ಯತೆ ಇದ್ದು, ಅಂಥವರು ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಒಂದು ವೇಳೆ ಕ್ಷಯ ರೋಗ ಕಂಡುಬಂದರೆ ಸರ್ಕಾರವು 6 ತಿಂಗಳು ಉಚಿತ ಚಿಕಿತ್ಸೆ ನೀಡಲಿದೆ. ಪೌಷ್ಟಿಕ ಆಹಾರ ಸೇವನೆಗೆ ಮಾಸಿಕ ₹500 ಸಹಾಯ ಧನ ನೀಡಲಿದೆ. 6 ತಿಂಗಳು ಚಿಕಿತ್ಸೆ ಪಡೆದಲ್ಲಿ, ಕ್ಷಯ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದು’ ಎಂದರು.

ಈ ವೇಳೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ನಾರಾಯಣಸ್ವಾಮಿ, ಪ್ರೇಮ್ ಕುಮಾರ್, ಗಿರಿ ಮತ್ತು ಗ್ರಾಮ ಆರೋಗ್ಯ ಸಮಿತಿಯ ಸದಸ್ಯರು ಹಾಜರಿದ್ದರು.

ಸಮತೋಲಿತ ಆಹಾರ ಎಂದರೆ ನಮ್ಮ ದೇಹಕ್ಕೆ ಅಗತ್ಯವಾದ ಎಲ್ಲ ಪೌಷ್ಟಿಕಾಂಶ ಒದಗಿಸುವುದು. ಪ್ರೋಟಿನ್, ಕಾರ್ಬೋಹೈಡ್ರೇಟ್ ಹಾಗೂ ಕೊಬ್ಬಿನಂಥ ದೊಡ್ಡ ಪ್ರಮಾಣದ ಪೋಷಕಾಂಶಗಳಿಂದ ಹಿಡಿದು, ಸೂಕ್ಷ್ಮ ಪೋಷಕಾಂಶಗಳಾದ ವಿಟಮಿನ್ ಮತ್ತು ಖನಿಜಾಂಶಗಳನ್ನು ಒಳಗೊಂಡಿರುತ್ತದೆ. ಈ ಪೋಷಕಾಂಶಗಳನ್ನು ಹಣ್ಣು ಮತ್ತು ತರಕಾರಿ, ಆಹಾರಧಾನ್ಯ ಹಾಗೂ ಬೇಳೆಕಾಳು, ಮಾಂಸ ಮತ್ತು ಹಾಲಿನ ಉತ್ಪನ್ನಗಳು ಹಾಗೂ ಕೊಬ್ಬು ಮತ್ತು ಎಣ್ಣೆಯಿಂದ ಪಡೆಯಬಹುದು.

ಆದರೆ ನಿತ್ಯ ಎಷ್ಟು ಹಾಗೂ ಯಾವ ವೇಳೆ ಸೂಕ್ತ ಎಂಬುದು ಮುಖ್ಯ. ಗೃಹ ಆರೋಗ್ಯದ ಯೋಜನೆಯ ಮೂಲಕ ಕೋಲಾರ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿದ್ದು, ಇದರ ಮೂಲಕ 60 ವರ್ಷ ಮೇಲ್ಪಟ್ಟವರಿಗೆ ಮನೆ ಬಾಗಿಲಿಗೆ ಬಂದು ಬಿಪಿ ಮತ್ತು ಶುಗರ್ ಪರೀಕ್ಷೆಯನ್ನು ನಡೆಸುತ್ತಾರೆ. ಯಾರಿಗಾದರೂ ಬಿಪಿ ಮತ್ತು ಶುಗರ್ ಕಂಡು ಬಂದರೆ ಚಿಕಿತ್ಸೆಯನ್ನು ಮನೆ ಬಾಗಿಲಿಗೇ ತಲುಪಿಸುತ್ತಾರೆ ಎಂದರು.

ಬಾಲ್ಯ ವಿವಾಹ ನಿಷೇದ ಕಾಯ್ದೆ 2006 ಪ್ರಕಾರ 18 ವರ್ಷದ ಒಳಗಿನ ಹೆಣ್ಣು ಮಗುವಿಗೆ ಮತ್ತು 21 ವರ್ಷದ ಒಳಗಿನ ಗಂಡು ಮಗುವಿಗೆ ವಿವಾಹ ಮಾಡಿದರೆ ಕಾನೂನು ಬಾಹಿರವಾಗಿದ್ದು, ಬಾಲ್ಯ ವಿವಾಹ ನಡೆದರೆ ಒಂದು ವರ್ಷ ಜೈಲುವಾಸ ಮತ್ತು ದಂಡವನ್ನು ಕಟ್ಟಬೇಕಾಗುತ್ತದೆ.

ಸಮತೋಲಿತ ಆಹಾರವು ನಿರಂತರ ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಕ್ಯಾಲೋರಿ ಅವಶ್ಯಕತೆಗಳು ವಯಸ್ಸು, ದೈಹಿಕ ಚಟುವಟಿಕೆಯ ಮಟ್ಟ ಮತ್ತು ತೂಕದ ಗುರಿಗಳನ್ನು ಅವಲಂಬಿಸಿರುತ್ತದೆ. ಸೂಕ್ತವಾದ ಸಮತೋಲಿತ ಆಹಾರವು ಕಡಿಮೆ ಕ್ಯಾಲೋರಿ, ಪೌಷ್ಠಿಕಾಂಶದ ದಟ್ಟವಾದ ಧಾನ್ಯಗಳು, ನೇರ ಪ್ರೋಟೀನ್, ಹಣ್ಣುಗಳು ಮತ್ತು ತರಕಾರಿಗಳನ್ನು ಒಳಗೊಂಡಿರುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.