ವೇಮಗಲ್: ಸೀತಿ ಬೆಟ್ಟದ ತಪ್ಪಲಿನಲ್ಲಿರುವ ಪುರಾಣ ಪ್ರಸಿದ್ಧ ಸೀತಿ ಬೈರವೇಶ್ವರ ಮತ್ತು ಪತೇಶ್ವರ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ ಕೈಗೊಳ್ಳಲಾಗಿತ್ತು. ದೇವಾಲಯದಲ್ಲಿ 3 ತಿಂಗಳಿಗೊಮ್ಮೆ ಹುಂಡಿಯಲ್ಲಿ ಭಕ್ತರು ಹಾಕಿದ ಹಣವನ್ನು ತೆಗೆದು, ಎಣಿಕೆ ಮಾಡಿ ದೇವಾಲಯಕ್ಕೆ ಸಂಬಂಧಿಸಿದ ಮುಜುರಾಯಿ ಇಲಾಖೆಗೆ ಸೇರಿದ ಮದ್ದೇರಿ ಕೆನರಾ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ಅದೇ ರೀತಿ ಗುರುವಾರ ಮುಜುರಾಯಿ ತಹಶೀಲ್ದಾರ್ ಸುಜಾತಾ ಅವರ ನೇತೃತ್ವದಲ್ಲಿ ಹುಂಡಿ ಎಣಿಕೆ ಕಾರ್ಯ ಹಮ್ಮಿಕೊಳ್ಳಲಾಗಿದ್ದು, ಒಟ್ಟು ₹ 27,44,015 ಕ್ರೂಢೀಕರಣವಾಗಿದೆ.

ಮುಜುರಾಯಿ ತಹಶೀಲ್ದಾರ್ ಸುಜಾತಾ, ವೇಮಗಲ್ ಹೋಬಳಿಯ ರಾಜಸ್ವಾ ನಿರೀಕ್ಷಕ ಬಿ. ಮಂಜುನಾಥ್, ಹೋಬಳಿಯ ಎಲ್ಲಾ ಆಡಳಿತಧಿಕಾರಿಗಳು, ಗ್ರಾಮಸಹಾಯಕರು, ದೇವಾಲಯದ ಪಾರು ಪತ್ತೇದಾರ ವೆಂಕಟೇಶ್, ಪೊಲೀಸ್ ಮುಖ್ಯ ಪೇದೆ ರಾಮಚಂದ್ರಯ್ಯ, ಮದ್ದೇರಿ ಕೆನರಾ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಇಂದ್ರಜಿತ್ ಸಿಂಗ್, ಬ್ಯಾಂಕ್ ಸಿಬ್ಬಂದಿ ಮಂಜುನಾಥ್, ಮಲ್ಲಿಕಾರ್ಜುನ್ , ರಾಜೇಶ್ ಬಾಬು, ಬಿಜಿಎಸ್ ಶಾಲಾ ಸಿಬ್ಬಂದಿ ಮತ್ತು ದೇವಾಲಯ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.