ಕೊಪ್ಪಳ: ಜಿಲ್ಲೆಯಾದ್ಯಂತ ಪದವಿಪೂರ್ವ ಕಾಲೇಜುಗಳ ದ್ವಿತೀಯ ವರ್ಷದ ಪರೀಕ್ಷೆಗಳು ನಡೆಯುತ್ತಿದ್ದು, ಗುರುವಾರ ನಡೆದ ಪರೀಕ್ಷಾ ಕೇಂದ್ರವೊಂದರಲ್ಲಿ ಮೂವರು ವಿದ್ಯಾರ್ಥಿಗಳಿಗೆ 20 ಜನ ಸಿಬ್ಬಂದಿ ಕೆಲಸ ಮಾಡಿದರು.

ಇಲ್ಲಿರುವ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉರ್ದು ಮತ್ತು ಸಂಸ್ಕೃತ ವಿಷಯಗಳ ಪರೀಕ್ಷೆಯಿತ್ತು. ಈ ಪರೀಕ್ಷೆಗೆ ಹೆಸರು ನೋಂದಾಯಿಸಿದ್ದ ಎಲ್ಲ ಮೂವರು ವಿದ್ಯಾರ್ಥಿಗಳು ಹಾಜರಾಗಿದ್ದರು. ಕೇಂದ್ರದ ಮುಖ್ಯ ಪಾಲಕ, ಜಂಟಿ ಅಧೀಕ್ಷಕ, ಕಚೇರಿ ಸೂಪರಿಟೆಂಡೆಂಟ್, ಉತ್ತರ ಪತ್ರಿಕೆ ಪಾಲಕರು, ಕಚೇರಿ ಸಹಾಯಕ, ಟೈಪಿಸ್ಟ್, ಜಾಗೃತದಳ ಸಿಬ್ಬಂದಿ, ಗ್ರೂಪ್ ಡಿ ಹೀಗೆ ಒಟ್ಟು 20 ಜನ ಕೆಲಸ ನಿರ್ವಹಿಸಿದರು.

‘ಪರೀಕ್ಷಾ ಕೇಂದ್ರದಲ್ಲಿ ಎಷ್ಟೇ ಕಡಿಮೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದರೂ ನಿಯೋಜಿತ ಪೂರ್ಣ ಸಿಬ್ಬಂದಿ ಕೆಲಸ ಮಾಡಬೇಕು ಎನ್ನುವ ನಿಯಮವಿದೆ. ಹೀಗಾಗಿ ಅಷ್ಟೊಂದು ಸಂಖ್ಯೆಯಲ್ಲಿ ಸಿಬ್ಬಂದಿ ಕೆಲಸ ಮಾಡಿದ್ದಾರೆ’ ಎಂದು ಡಿಡಿಪಿಯು ಜಗದೀಶ್ ಎಚ್.ಎಸ್. ಹೇಳಿದರು. ಸಂಸ್ಕೃತ ಮತ್ತು ಉರ್ದು ಪರೀಕ್ಷೆಗೆ 561 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು. ಇಬ್ಬರು ಮಾತ್ರ ಗೈರಾಗಿದ್ದರು. ಶುಕ್ರವಾರ ಹಿಂದಿ ವಿಷಯದ ಪರೀಕ್ಷೆ ಜರುಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.