ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ: ಒಂದೇ ದಿನ 9 ಸೆಂಟಿ ಮೀಟರ್‌ ಮಳೆ; ಹಲವು ಮನೆಗಳಿಗೆ ನಿಗ್ಗಿದ ನೀರು

Published 13 ಜೂನ್ 2024, 4:24 IST
Last Updated 13 ಜೂನ್ 2024, 4:24 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯಲ್ಲಿ ಬುಧವಾರ ಸುರಿದ ಮಳೆಯಿಂದಾಗಿ ಹಲವು ಕಡೆ ಮನೆಗಳಿಗೆ ನೀರು ನುಗ್ಗಿದ್ದು ಆಹಾರ ಸಾಮಗ್ರಿಗಳು ನೀರು ಪಾಲಾಗಿವೆ. ಕಾರಟಗಿ ವ್ಯಾಪ‍್ತಿಯಲ್ಲಿ ಒಂದೇ ದಿನದಲ್ಲಿ ಒಂಬತ್ತು ಸೆಂ.ಮೀ. ಮಳೆಯಾಗಿದೆ.

ಕೊಪ್ಪಳ ನಗರದಲ್ಲಿ 8.62 ಸೆಂ.ಮೀ., ಕನಕಗಿರಿ ತಾಲ್ಲೂಕು ನವಲಿ ಹೋಬಳಿ ವ್ಯಾಪ್ತಿಯಲ್ಲಿ 5 ಸೆಂ.ಮೀ., ಕುಷ್ಟಗಿ 5.92 ಸೆಂ.ಮೀ. ಹಾಗೂ ತಾವರಗೇರಾದಲ್ಲಿ 3.40 ಸೆಂ.ಮೀ., ಮಳೆಯಾಗಿದೆ. ರಾಜಕಾಲುವೆಗಳ ಒತ್ತುವರಿ ಮತ್ತು ಚರಂಡಿಯಲ್ಲಿ ತುಂಬಿಕೊಂಡಿದ್ದ ತ್ಯಾಜ್ಯ ಮಳೆಯಿಂದಾಗಿ ರಸ್ತೆಯ ಮೇಲೆ ಹರಿದಾಡಿದ್ದು, ಇದೇ ನೀರಿನಲ್ಲಿಯೂ ಜನ ಓಡಾಡುವಂತಾಯಿತು. ಗುರುವಾರವೂ ಮೋಡಕವಿದ ವಾತಾವರಣವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT