ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ | ಮಳೆಗೆ ಏಕಾಏಕಿ ಕುಸಿದ ಮನೆ: ಮಣ್ಣಿನಡಿ ಸಿಲುಕಿದ ವ್ಯಕ್ತಿಯ ರಕ್ಷಣೆ

Published : 5 ಅಕ್ಟೋಬರ್ 2024, 3:51 IST
Last Updated : 5 ಅಕ್ಟೋಬರ್ 2024, 3:51 IST
ಫಾಲೋ ಮಾಡಿ
Comments

ಕೊಪ್ಪಳ: ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಹಾಗೂ ಶನಿವಾರ ಬೆಳಗಿನ ಜಾವ ವ್ಯಾಪಕ ಮಳೆ ಸುರಿದಿದ್ದು, ಗಂಗಾವತಿ ತಾಲ್ಲೂಕಿನ ಢಾಣಾಪುರ ಗ್ರಾಮದಲ್ಲಿ ಮಣ್ಣಿನ ಮನೆ ಏಕಾಏಕಿ ಕುಸಿದು ಅದರ ಅಡಿಯಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ.

ಢಾಣಾಪುರ ಗ್ರಾಮದ ಕುಸಿದ ಮಣ್ಣಿನ ಮನೆಯಲ್ಲಿ ಅಕ್ಕ ಹಾಗೂ ತಮ್ಮ ಮಾತ್ರ ವಾಸವಿದ್ದರು. ಘಟನೆ ನಡೆದಾಗ ಬೆಳಗಿನ ಜಾವವಾಗಿದ್ದರಿಂದ ಅಕ್ಕ ಮನೆಯಿಂದ ಹೊರಬಂದು ಕೆಲಸ ಮಾಡುತ್ತಿದ್ದರು. ತಮ್ಮ 45 ವರ್ಷದ ಪ್ರಕಾಶ ಎಂಬುವರು ಮನೆಯೊಳಗೆ ಚಾರ್ಜ್‌ ಇಟ್ಟಿದ್ದ ಮೊಬೈಲ್‌ ತರಲು ಒಳಗಡೆ ಹೋದಾಗ ಮನೆ ಕುಸಿದು ಅವರ ಮೇಲೆ ಬಿದ್ದಿದ್ದರಿಂದ ದೇಹದ ಮುಕ್ಕಾಲು ಭಾಗ ಮಣ್ಣಿನಲ್ಲಿ ಹೂತು ಹೋಗಿತ್ತು.

ತಕ್ಷಣವೇ ಅಕ್ಕಪಕ್ಕದವರು ಬಂದು ರಕ್ಷಿಸಿದ್ದು ಗಂಗಾವತಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕಾಶ ಅವರ ಬೆನ್ನು, ಕಾಲಿನ ಭಾಗಕ್ಕೆ ಸಾಕಷ್ಟು ಪೆಟ್ಟಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಗಂಗಾವತಿಯಲ್ಲಿ 5.74 ಸೆಂ.ಮೀ., ತಾಲ್ಲೂಕಿನ ಪ್ರಗತಿ ನಗರದಲ್ಲಿ 4.92 ಸೆಂ.ಮೀ., ಕಾರಟಗಿಯಲ್ಲಿ 8.56 ಸೆಂ.ಮೀ., ಕಿಲ್ಲಾರಹಟ್ಟಿಯಲ್ಲಿ 2.54 ಸೆಂ.ಮೀ. ಹಾಗೂ ತಾವರಗೇರಾದಲ್ಲಿ 3.5 ಸೆಂ.ಮೀ. ಮಳೆಯಾಗಿದೆ. ಎರಡು ದಿನಗಳ ಹಿಂದೆ ಸುರಿದ ಮಳೆಗೆ ಗಂಗಾವತಿ ಹಾಗೂ ಕನಕಗಿರಿ ಭಾಗದಲ್ಲಿ ಭತ್ತ ನೆಲಕ್ಕಚ್ಚಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT