ಕೊಪ್ಪಳ: ಜಮಾತೆ-ಎ- ಇಸ್ಲಾಮೀ ಹಿಂದ್ ಜಿಲ್ಲಾ ಘಟಕದ ವತಿಯಿಂದ ಸ್ಟೇಷನ್ ರಸ್ತೆಯರುವಮಸ್ಜೀದ್-ಎ-ಅಲಾದಲ್ಲಿ ಡಿ.8ರಂದು ಬೆಳಿಗ್ಗೆ 11ರಿಂದ ಸಂಜೆ 5 ಗಂಟೆವರೆಗೆ ಮಸೀದಿ ಸಂದರ್ಶನ ಮತ್ತು ಸಂಜೆ ತಾಲ್ಲೂಕು ಕ್ರೀಡಾಂಗಣದಲ್ಲಿ ಬಹಿರಂಗ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯಧಾರವಾಡ ವಲಯ ಸಂಚಾಲಕ ಕೆ.ಐ.ಶೇಕ್‌ಸಾಬ್ ಹೇಳಿದರು.

ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ಮಸೀದಿ ಸಂದರ್ಶನ ಕಾರ್ಯಕ್ರಮದಲ್ಲಿ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಪಾಲ್ಗೊಳ್ಳುವರು. ನಂತರ ನಡೆಯುವ ಮಧ್ಯಾಹ್ನ ಹಾಗೂ ಸಂಜೆಯ ನಮಾಜ್ ಅನ್ನು ಎಲ್ಲ ಸಮಾಜದ ಜನರು ವೀಕ್ಷಣೆ ಮಾಡಬಹುದು. ಇಸ್ಲಾಂ ಧರ್ಮದ ಧಾರ್ಮಿಕ ಪ್ರಕ್ರಿಯೆ, ಪ್ರಾರ್ಥನೆಯನ್ನು ದರ್ಶನ ಮಾಡಬಹುದು ಎಂದು ಹೇಳಿದರು.

ಯಾವುದೇ ಜಾತಿ, ಜನಾಂಗ, ಧರ್ಮ, ಮಹಿಳೆ, ಪುರುಷ ಎಂಬ ಬೇಧವಿಲ್ಲದೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು ಪರಸ್ಪರರನ್ನು ಅರಿಯೋಣ, ಸೌಹಾರ್ದ ಸಮಾಜ ಕಟ್ಟೋಣ' ಎಂಬ ಆಶಯದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಪ್ರಯುಕ್ತ ಪ್ರವಾದಿ ಮಹಮ್ಮದ್ (ಸ) ಎಲ್ಲರಿಗಾಗಿ ಬಹಿರಂಗ ಸಭೆ ಹಾಗೂ ಪುರಸ್ಕಾರ ವಿತರಣಾ ಸಮಾರಂಭ ನಡೆಯಲಿದೆ ಎಂದು ಹೇಳಿದರು.

ಸಂಜೆ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆಯುವ ಬಹಿರಂಗ ಸಭೆ ಕಾರ್ಯಕ್ರಮಕ್ಕೆ ಇಳಕಲ್ ವಿಜಯಮಹಾಂತೇಶ್ವರ ಮಠದ ಗುರುಮಹಾಂತ ಸ್ವಾಮೀಜಿ ಚಾಲನೆ ನೀಡುವರು. ಬಳ್ಳಾರಿ ವಲಯ ಐಜಿಪಿ ಎಂ.ನಂಜುಂಡಸ್ವಾಮಿ ಅಧ್ಯಕ್ಷತೆ ವಹಿಸುವರು. ಶಾಂತಿ ಪ್ರಕಾಶನದ ಮಹಮ್ಮದ್ ಕುಂಇ ಉಪನ್ಯಾಸ ನೀಡುವರು ಎಂದು ಹೇಳಿದರು.

ಪ್ರವಾದಿ ಮಹ್ಮದ್ ಪೈಗಂಬರರ ಜನ್ಮದಿನದ ನಿಮಿತ್ತವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅವರು ಮೂಢನಂಬಿಕೆ, ಜಾತಿ, ವರ್ಣಬೇಧ, ಗುಲಾಮಿ ಪದ್ಧತಿ ಸೇರಿದಂತೆ ಸಮಾಜದಲ್ಲಿದ್ದ ವಿವಿಧ ಅನಿಷ್ಠ ಪದ್ಧತಿಗಳನ್ನು ಹೋಗಲಾಡಿಸಿದ್ದಾರೆ. ಅವರು ಸರಳ ಜೀವನ ಮಾದರಿಯಾಗಿದ್ದು, ಅವರ ಆದರ್ಶ ಪಾಲಿಸುವಂತೆ ಮಾನವ ಕುಲಕ್ಕೆ ತಿಳಿಸುವ ಸಲುವಾಗಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಹಿಂದ್‌ನ ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುರ್ ಶುಕುರ್‌ಸಾಬ್, ದಾಮುದ್ದೀನ್ ದೋಟಿಹಾಳ, ಎಂ.ಮೈನುದ್ದೀನ್, ಆದೀಲ್ ಪಟೇಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.