ಕೊಪ್ಪಳ: ಜಿಲ್ಲೆಯ ಎಲ್ಲಾ ಜಾನುವಾರುಗಳಿಗೆ ಕಾಲುಬಾಯಿ ರೋಗ ಲಸಿಕೆ ಹಾಕಿಸಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ನಲಿನ್ ಅತುಲ್ ಅವರು ಪಶು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ (ಎನ್‌ಎಡಿಸಿಪಿ) ಕಾರ್ಯಕ್ರಮದಡಿ 5ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನದ ಪೂರ್ವ ಸಿದ್ಧತೆಗಳ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ನಿರ್ವಹಣಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

‘ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಲಸಿಕಾ ಕಾರ್ಯಕ್ರಮವು ಏಪ್ರಿಲ್ 1ರಿಂದ ಏ.30ರ ವರೆಗೆ ನಡೆಯಲಿದೆ. ಲಸಿಕೆಯ ಬಗ್ಗೆ ಜಿಲ್ಲೆಯ ಎಲ್ಲಾ ರೈತರಿಗೆ ಜಾಗೃತಿ ಮೂಡಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು, ಲಸಿಕಾ ತಂಡದ ಮುಖ್ಯಸ್ಥರು ಹಾಗೂ ಎಲ್ಲಾ ಲಸಿಕಾದಾರರು ತಮ್ಮ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಬೇಕು. ಲಸಿಕೆಯ ಬಳಿಕ ಜಾನುವಾರುಗಳ ಉಪಚಾರ ಬಗ್ಗೆಯೂ ರೈತರಿಗೆ ತಿಳುವಳಿಕೆ ನೀಡಿ’ ಎಂದರು.

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಪಿ.ಎಂ.ಮಲ್ಲಯ್ಯ ಲಸಿಕಾ ಅಭಿಯಾನದ ಬಗ್ಗೆ ಮಾಹಿತಿ ನೀಡಿ ‘ಜಿಲ್ಲೆಯಲ್ಲಿರುವ ಒಟ್ಟು 2,72,467 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಲಸಿಕೆ ಮತ್ತು ಸಿರಿಂಜ್-ನೀಡಲ್ಸ್‌ಗಳ ಶೇಖರಣೆ, ಲಸಿಕಾದಾರರ ವ್ಯವಸ್ಥೆ, ಲಸಿಕಾದಾರರಿಗೆ ಪ್ರವಾಸ ಭತ್ಯೆ ಮತ್ತು ಪ್ರೋತ್ಸಾಹ ಧನ, ಆನ್‌ಲೈನ್ ವರದಿ ನಿರ್ವಹಣೆ, ಮಾನಿಟರಿಂಗ್ ವ್ಯವಸ್ಥೆ, ಲಸಿಕಾ ಪ್ರತಿಕೂಲ ಪರಿಣಾಮ ಮತ್ತು ನಿರ್ವಹಣೆಗಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಡಿ.ಮಂಜುನಾಥ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಕೊಪ್ಪಳ ಘಟಕದ ಸಹಾಯಕ ನಿರ್ದೇಶಕ ಡಾ.ಯಮನಪ್ಪ ಬಿ.ಎಚ್. ಸೇರಿದಂತೆ ಪಶು ಇಲಾಖೆಯ ವಿವಿಧ ತಾಲ್ಲೂಕುಗಳ ಸಹಾಯಕ ನಿರ್ದೇಶಕರು, ಪಶು ವೈದ್ಯಾಧಿಕಾರಿಗಳು ಪಾಲ್ಗೊಂಡಿದ್ದರು.

ಪೋರ್ಟಲ್‌ನಲ್ಲಿ ನೋಂದಾಯಿಸಲು ಮನವಿ

ಕೊಪ್ಪಳ: ಜಿಲ್ಲೆಯ ಅಕ್ಕಿ ಮಿಲ್ ಮಾಲೀಕರು ಪೋರ್ಟಲ್‌ನಲ್ಲಿ ತಮ್ಮ ಮಾಹಿತಿ ನೋಂದಾಯಿಸುವಂತೆ ಕೊಪ್ಪಳ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

ರಾಜ್ಯದ ಎಲ್ಲಾ ಟ್ರೇಡರ್ಸ್, ಹೋಲ್‌ಸೇಲರ್ಸ್, ರಿಟೇಲರ್ಸ್, ಬಿಗ್ ಚೈನ್ ರಿಟೇಲರ್ಸ್, ಮಿಲ್ಲರ್ಸ್ ನೋಂದಾಯಿಸಿಕೊಂಡು ಅಕ್ಕಿ, ಭತ್ತದ ದಾಸ್ತಾನು ವಿವರವನ್ನು ಬ್ರೋಕನ್ ರೈಸ್ (ಅಕ್ಕಿನುಚ್ಚು), ಭಾಸುಮತಿ ಹೊರತುಪಡಿಸಿ ಅಕ್ಕಿ, ಕುಚಲಕ್ಕಿ, ಭಾಸುಮತಿ ರೈಸ್, ಭತ್ತಗಳ ವಿವರಗಳನ್ನು ಪೋರ್ಟಲ್ https://evegoils.nic. in/login.html ನಲ್ಲಿ ಪ್ರತಿ ಶುಕ್ರವಾರ ಘೋಷಿಸಬೇಕು ಎಂದು ಪ್ರಕಟಣೆ ಕೋರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.