ಮಕ್ಕಳ ಮೇಲೆ ದಾಳಿ ಅವ್ಯಾಹತ, ಕ್ರಮ ಕೈಗೊಳ್ಳಬೇಕಾದ ಸ್ಥಳೀಯ ಆಡಳಿತ ಮೌನ, ಪೋಷಕರಲ್ಲಿ ಆತಂಕ
ಪ್ರಮೋದ ಕುಲಕರ್ಣಿ
Published : 21 ಅಕ್ಟೋಬರ್ 2024, 5:24 IST
Last Updated : 21 ಅಕ್ಟೋಬರ್ 2024, 5:24 IST
ಫಾಲೋ ಮಾಡಿ
Comments
ಕೊಪ್ಪಳದಲ್ಲಿ ನಾಯಿಗಳು ಒಂದೆಡೆ ಸೇರಿರುವುದು
ಕನಕಗಿರಿಯ ಲಿಂಗಸಗೂರಿನ ರಸ್ತೆಯಲ್ಲಿ ಬೀದಿ ನಾಯಿಗಳು ಒಂದೆಡೆ ಸೇರಿರುವುದು
ಬೀದಿನಾಯಿಗಳನ್ನು ಹಿಡಿದು ಸಂತಾನ ಶಕ್ತಿ ಹರಣ ಚಿಕಿತ್ಸೆ ನಡೆಸಲು ಟೆಂಡರ್ ಕರೆಯಲಾಗಿದ್ದು ಈಗ ಆ ಪ್ರಕ್ರಿಯೆ ಪೂರ್ಣಗೊಂಡಿದೆ. ಇನ್ನು ಮುಂದೆ ನಾಯಿಗಳಿಗೆ ಕಡಿವಾಣ ಹಾಕಲಾಗುವುದು
ಗಣಪತಿ ಪಾಟೀಲ ಕೊಪ್ಪಳ ನಗರಸಭೆ ಪೌರಾಯುಕ್ತ
ಕೊಪ್ಪಳದಲ್ಲಿ ನಾಯಿಗಳ ಹಾವಳಿ ವ್ಯಾಪಕವಾಗಿದ್ದು ಸಣ್ಣ ಸಣ್ಣ ಮಕ್ಕಳು ಸ್ವತಂತ್ರವಾಗಿ ಬಡಾವಣೆಗಳಲ್ಲಿ ಓಡಾಡುವುದೇ ಕಷ್ಟವಾಗಿದೆ. ಇವುಗಳ ಉಪಟಳಕ್ಕೆ ಕಡಿವಾಣ ಹಾಕಬೇಕು
ನಾಗರಾಜ ನಾಯಕ ಕೊಪ್ಪಳ ನಿವಾಸಿ
ಕನಕಗಿರಿಯಲ್ಲಿಯೂ ತಪ್ಪಿಲ್ಲ ಶ್ವಾನಗಳ ಕಾಟ
ಕನಕಗಿರಿ ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಳವಾಗಿದೆ ಇಲ್ಲಿನ ವಾಲ್ಮೀಕಿ ಮಡಿವಾಳ ಮಾಚಿದೇವ ವೃತ್ತ ಇತರೆ ಸ್ಥಳದಲ್ಲಿ ನಾಯಿಗಳ ದಂಡೆ ಕಾಣಸಿಗುತ್ತದೆ. ಇಡೀ ದಿನ ನಾಯಿಗಳು ಇಲ್ಲಿಯೇ ತಂಗುತ್ತಿದ್ದು ಸಣ್ಣ ಮಕ್ಕಳು ಓಡಾಡದ ಪರಿಸ್ಥಿತಿ ಇದೆ. ಹಿಂಡು ಹಿಂಡಾಗಿ ಓಡಾಡಿ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿವೆ. ಸಸ್ಯಹಾರಿ ಮಾಂಸಾಹಾರಿ ಹೋಟೆಲ್‌ಗಳು ಮಾಂಸ ಮಾರಾಟ ಮಾಡುವ ಅಂಗಡಿಗಳ ಮುಂದೆ ನಾಯಿಗಳು ನಿಂತು ಮಾಂಸದ ತುಂಡುಗಳಿಗೆ ಜೋತು ಬಿದ್ದ ದೃಶ್ಯಗಳು ಸಾಮಾನ್ಯವಾಗಿದೆ. ನಾಯಿ ಕಡಿತದಿಂದ ರೇಬಿಸ್ ರೋಗ ಬರುತ್ತದೆ ಎಂಬ ಕಾರಣಕ್ಕೆ ಈಗ ಪಶುಪಾಲನಾ ವೈದ್ಯ ಸೇವಾ ಇಲಾಖೆ ರೇಬಿಸ್ ಬಾರದಂತೆ ನಡೆಯಲು ಲಸಿಕೆ ಕಾರ್ಯಕ್ರಮ ನಡೆಸುತ್ತಿದೆ. ಇದು ಸಾಕು ನಾಯಿಗಳಿಗೆ ಮಾತ್ರ! ಸ್ಥಳೀಯ ಗ್ರಾಮ ಹಾಗೂ ಪಟ್ಟಣ ಪಂಚಾಯಿತಿಗಳು ತಮ್ಮ ವ್ಯಾಪ್ತಿಯ ಬೀದಿ ನಾಯಿಗಳಿಗೆ ಲಸಿಕೆ ಹಾಕಿಸಬೇಕೆಂಬ ನಿಯಮ ಇದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಸ್ಥಳೀಯ ಆಯಾ ಪಂಚಾಯಿತಿಗಳು ಬೀದಿನಾಯಿಗಳನ್ನು ಹಿಡಿಯಲು ನಿಯಮಾನುಸಾರವಾಗಿ ಟೆಂಡರ್ ಪ್ರಕ್ರಿಯೆ ನಡೆಸಬೇಕು ಬೆಂಗಳೂರು ವಿಜಯಪುರ ಇತರೆ ಜಿಲ್ಲೆಯಲ್ಲಿರುವ ನಾಯಿ ಹಿಡಿಯುವವರ ತಂಡದವರು ಟೆಂಡರ್ ಪಡೆದು ನಾಯಿಗಳನ್ನು ಹಿಡಿದು ಲಸಿಕೆ ಹಾಕುತ್ತಾರೆ.