ಗಂಗಾವತಿ: ತಾಲ್ಲೂಕಿನ ಆನೆಗೊಂದಿ ಗ್ರಾಮದಲ್ಲಿ ಮಾರ್ಚ್ 11 ಮತ್ತು 12ರಂದು ಅದ್ದೂರಿಯಾಗಿ ಆನೆಗೊಂದಿ ಉತ್ಸವ ನಡೆಸಲು ನಿರ್ಧರಿಸಿದ್ದು, ಇದರ ಭಾಗವಾಗಿ ಉತ್ಸವದ ಮುಖ್ಯವೇದಿಕೆ, ಎರಡನೇ ವೇದಿಕೆ, ಕ್ರೀಡಾಕೂಟಗಳಿಗೆ ಅಂಕಣಗಳ, ಸ್ವಚ್ಚತೆ ಸೇರಿ ಹಲವು ಕಾರ್ಯಗಳ ತಯಾರಿ ಭರದಿಂದ ಸಾಗಿದೆ.

ಕನಕಗಿರಿ ಉತ್ಸವದ ಮುಗಿದ 10 ದಿನಗಳೊಳಗೆ ಆನೆಗೊಂದಿ ಉತ್ಸವ ಆಚರಿಸಲು ನಿರ್ಧರಿಸಿದ್ದು, ಒಂದಡೆ ಸಿದ್ದತೆ ಅವಧಿ ಕಡಿಮೆ. ಇನ್ನೊಂದಡೆ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿ ಭಯದ ನಡುವೆ ಕ್ಷೇತ್ರದ ಶಾಸಕ ಜಿ.ಜನಾರ್ದನರೆಡ್ಡಿ ಸೂಚನೆಯಂತೆ ಉತ್ಸವದ ಸಿದ್ಧತೆಗಳನ್ನು ವೇಗವಾಗಿ ಮಾಡಲಾಗುತ್ತಿದೆ.

ಮುಖ್ಯವೇದಿಕೆ ನಿರ್ಮಾಣದಲ್ಲಿ ವಿಶೇಷವಾಗಿ ಎಡಬದಿ ರಾಮಾಯಣ ಕಾಲದ ರಾಮ, ಲಕ್ಷ್ಮಣ, ಸೀತೆ ಚಿತ್ರಗಳು ಅಳವಡಿಸಿದರೆ, ಬಲಬದಿ ಹಕ್ಕಬುಕ್ಕರ ಕಾಲ ಮತ್ತು ಅವರ ಚಿತ್ರಗಳ ಅಳವಡಿಕೆ ಕಾರ್ಯ ವೇಗವಾಗಿ ನಡೆಯುತ್ತಿದೆ. ಕಾರ್ಮಿಕರು ಹಗಲು-ರಾತ್ರಿಯೆನ್ನದೇ ಕೆಲಸ ಮಾಡುತ್ತಿದ್ದಾರೆ.

ಇನ್ನೂ ಜಿಲ್ಲಾಡಳಿತ ಉತ್ಸವ ಯಶಸ್ವಿಗೆ ಅಧಿಕಾರಿಗಳನ್ನು ಒಳಗೊಂಡ ವಸತಿ, ಭದ್ರತಾ, ಸಾಂಸ್ಕೃತಿಕ, ಸ್ವಾಗತ, ವೇದಿಕೆ, ಆಹಾರ, ಕ್ರೀಡಾ, ವಸತಿ, ಸಾರಿಗೆ, ಮೆರವಣಿಗೆ, ಆರೋಗ್ಯ, ಪ್ರಚಾರ, ಮೂಲಭೂತ ಸೌಕರ್ಯ, ವಿದ್ಯುತ್, ಅಮಂತ್ರಣ, ವಸ್ತುಪ್ರದರ್ಶನ, ಪ್ರವಾಸೋದ್ಯಮ, ಸ್ವಚ್ಛತೆ ಸಮಿತಿ ರಚಿಸಿ ಜವಾಬ್ದಾರಿ ನೀಡಿದ್ದು, ಅದರಂತೆ ಕೆಲಸ ಮಾಡುತ್ತಿದ್ದಾರೆ.

ಇನ್ನೂ ಶಾಸಕ ಜಿ.ಜನಾರ್ದನರೆಡ್ಡಿ, ಎ.ಸಿ ಕ್ಯಾಪ್ಟನ್ ಮಹಾಂತೇಶ ಮಾಲಗಿತ್ತಿ, ತಹಶೀಲ್ದಾರ್ ಯು.ನಾಗರಾಜ ಅವರು ಉತ್ಸವದ ಸಿದ್ಧತೆಗಳು ಪರಿಶೀಲಿಸಿದರು.

ಇಂದಿನಿಂದ ಕ್ರೀಡಾಕೂಟ: ಆನೆಗೊಂದಿ ಉತ್ಸವದ ನಿಮಿತ್ತ ಆನೆಗೊಂದಿ ಗ್ರಾಮದ ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಹಿರಿಯ ಪ್ರಾಥಮಿ ಕ ಶಾಲೆ ಸೇರಿ ಇತರೆ ಮೈದಾನದಲ್ಲಿ ಮಾರ್ಚ್ 8 ರಿಂದ 10 ರವರೆಗೆ 9 ಕ್ರೀಡೆಗಳು ನಡೆಯಲಿವೆ.

ಮಾರ್ಚ್ 8 ಸಂಜೆ 4ಕ್ಕೆ ರಾಜ್ಯಮಟ್ಟದ ಮುಕ್ತ ವಾಲಿಬಾಲ್ (ಹೊನಲು ಬೆಳಕು) ಪಂದ್ಯಾವಳಿಗಳು ಜರುಗಲಿವೆ. ಮಾ.9 ಬೆಳಿಗ್ಗೆ 10ಕ್ಕೆ ಪುರುಷರ ಬಾಲ್ ಬ್ಯಾಡ್ಮಿಂಟನ್, ಹಗ್ಗಜ ಗ್ಗಾಟ, ಸಂಜೆ 5ಕ್ಕೆ ವಿಶೇಷಚೇತನರ ಕಬಡ್ಡಿ, 5:30ಕ್ಕೆ ಪುರುಷರ ಮತ್ತು ಮಹಿಳೆಯರ ಮುಕ್ತ ಕಬಡ್ಡಿ, ಕೊಕ್ಕೊ,(ಹೊನಲು ಬೆಳಕು) ಪಂದ್ಯಗಳು ನಡೆಯಲಿವೆ.

ಮಾ.10 ಬೆಳಿಗ್ಗೆ 6.30ಕ್ಕೆ ಪುರುಷರಿಗೆ, ಮಹಿಳೆಯರಿಗೆ ಮ್ಯಾರಥಾನ್, 8 ಗಂಟಗೆ ಆನೆಗೊಂದಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, 12 ಗಂಟಗೆ ಪುರುಷರಿಗೆ ಮತ್ತು ಮಹಿಳೆಯರಿಗೆ ಕುಸ್ತಿ ಪಂದ್ಯಗಳು ಜರುಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.