ಗಂಗಾವತಿ: ಇಲ್ಲಿನ 27ನೇ ವಾರ್ಡಿನ ಹರಿಜನ ಕಾಲೊನಿಯಲ್ಲಿನ ಸಾರ್ವಜನಿಕ ಶೌಚಾಲಯ ಸ್ಥಳ ತಮ್ಮದೆಂದು ವ್ಯಕ್ತಿಯೊಬ್ಬರು ಜೆಸಿಬಿ ಮೂಲಕ ಶೌಚಾಲಯ ನೆಲಸಮಗೊಳಿಸಿದ್ದನ್ನು ಖಂಡಿಸಿ ಸೋಮವಾರ ವಾರ್ಡಿನ ಮಹಿಳೆಯರು ಶೌಚಾಲಯ ಎದುರು ಚಂಬು ಹಿಡಿದು ಪ್ರತಿಭಟನೆ ನಡೆಸಿದರು.

ವಾರ್ಡಿನ ನಿವಾಸಿ ಹುಲಿಗೆಮ್ಮ ಮಾತನಾಡಿ, ಹಲವು ವರ್ಷಗಳ ಹಿಂದೆ ಈ ವಾರ್ಡಿನ ಮಹಿಳೆಯರ ಅನುಕೂಲಕ್ಕಾಗಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಆಡಳಿತ ಅವಧಿಯಲ್ಲಿ ನಗರಸಭೆ ವತಿಯಿಂದ ಶೌಚಾಲಯ ನಿರ್ಮಿಸಲಾಗಿತ್ತು. ಈ ವಾರ್ಡಿನ ಮಹಿಳೆಯರಿಗೆ ಇದ್ದ ಏಕೈಕ ಶೌಚಾಲಯದ ಸ್ಥಳವು ತಮಗೆ ಸೇರಿದೆ ಎಂದು ವ್ಯಕ್ತಿಯೊಬ್ಬರು ಏಕಾಏಕಿ ಸೋಮವಾರ ಜೆಸಿಬಿ ಮೂಲಕ ತೆರವುಗೊಳಿಸಿದ್ದಾರೆ. ಈ ಕುರಿತು ದಾಖಲೆಗಳನ್ನು ಪೌರಾಯುಕ್ತರ ಮತ್ತು ವಾರ್ಡಿನ ಸದಸ್ಯರ ಎದುರು ತೋರಿಸಿ ತೆರವಿಗೆ ಮುಂದಾಗುವಂತೆ ತಿಳಿಸಿದರೂ ಕೇಳದೆ ನೆಲಸಮ ಮಾಡಿದ್ದಾರೆ. ಇದರಿಂದ ಮಹಿಳೆಯರ ಶೌಚಕ್ಕೆ ಪರದಾಡು ಪರಿಸ್ಥಿತಿ ಎದುರಾಗಿದೆ ಎಂದು ದೂರಿದರು.

ವಾರ್ಡಿನ ನಿವಾಸಿ ಮುತ್ತಮ್ಮ ಜೇಕಿನ್ ಮಾತನಾಡಿ, ವಾರ್ಡಿನಲ್ಲಿ ಮಹಿಳೆಯರಿಗೆ ಇದೊಂದೆ ಸಾರ್ವಜನಿಕ ಶೌಚಾಲಯ. ಮಹಿಳೆಯರು ಈಗ ಎಲ್ಲಿಗೆ ಶೌಚಕ್ಕೆ ಹೋಗಬೇಕು. ವ್ಯಕ್ತಿಯೊಬ್ಬರು 6 ವರ್ಷದ ಹಿಂದೆ ಸ್ಥಳ ಖರೀದಿ ಮಾಡಿದ್ದೇನೆ ಎನ್ನುತ್ತಿದ್ದಾರೆ. ಕೂಡಲೇ ಅಧಿಕಾರಿಗಳ ಈ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದರು.

ವಾರ್ಡಿನ ನಿವಾಸಿಗಳಾದ ಕಲ್ಗುಡಿ ದುರಗಮ್ಮ, ಇಂದ್ರಮ್ಮ, ಮುಖಂಡರಾದ ಹುಲಿಗೇಶ ದೇವರಮನಿ, ಹೊಸಪೇಟೆ ಹನುಮಂತಪ್ಪ, ಮುದುಕಪ್ಪ, ಪಂಪಾಪತಿ, ರವಿ ಹೆಗಡೆ, ಮಾರುತಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.