ಕೊಪ್ಪಳ: ನಗರದಲ್ಲಿ ಭಾನುವಾರ ನಡೆದ ಕವಿ ದಿ. ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಆರ್ಎಸ್ಎಸ್ ಕುರಿತು ಮಾಡಿದ ಟೀಕೆಗೆ ಆಕ್ಷೇಪ ವ್ಯಕ್ತವಾಗಿದ್ದು, ಇದು ವಾಗ್ವಾದಕ್ಕೂ ಕಾರಣವಾಯಿತು.

ಸಾಹಿತ್ಯೋತ್ಸವದಲ್ಲಿ ಬಿಳಿಮಲೆಯವರು ‘1924ರಲ್ಲಿ ಮಹಾತ್ಮ ಗಾಂಧೀಜಿ ಬೆಳಗಾವಿನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. ಅವರು ಅಧ್ಯಕ್ಷತೆ ವಹಿಸಿದ್ದ ಏಕೈಕ ಕಾಂಗ್ರೆಸ್ ಅಧಿವೇಶನಕ್ಕೆ ಈಗ 100 ವರ್ಷಗಳಾಗಿವೆ. ಕರ್ನಾಟಕ ಏಕೀಕರಣವೂ ನಮ್ಮಲ್ಲಿ ಮಹತ್ವದ ಘಟ್ಟವಾಗಿದೆ. ಇಂಥ ಪ್ರಮುಖ ವಿಷಯಗಳನ್ನೆಲ್ಲ ಸರ್ಕಾರವೇ ದಾಖಲಿಸಿ ಪುಸ್ತಕ ರೂಪದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಜನರಿಗೆ ಕೊಡಬೇಕು. ಈ ಮೂಲಕ ಇತಿಹಾಸ ಉಳಿಸುವ ಕೆಲಸ ಮಾಡಬೇಕು. ಆದರೆ ವೈಭವೀಕರಿಸುವುದು ಬೇಡ. ವೈಭವೀಕರಿಸುವ ಕೆಲಸವನ್ನು ಆರ್ಎಸ್ಎಸ್ನವರು ಮಾಡುತ್ತಾರೆ’ ಎಂದರು. ಇದಕ್ಕೂ ಮೊದಲು ಬೇರೆ ಬೇರೆ ಘಟನೆಗಳನ್ನು ಪ್ರಸ್ತಾಪಿಸಿ ಅವರು ಆರ್ಎಸ್ಎಸ್ ಬಗ್ಗೆ ಟೀಕೆ ಮಾಡಿದ್ದರು.

ಇದಕ್ಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೆಲ ಸಾಹಿತ್ಯಾಸಕ್ತರು ವಿರೋಧ ವ್ಯಕ್ತಪಡಿಸಿ ‘ಮೊದಲು ಆರ್ಎಸ್ಎಸ್ ಅನ್ನು ಟೀಕಿಸುವುದು ಬಿಡಿ, ವಕ್ಫ್ ಬಗ್ಗೆ ಯಾಕೆ ಮಾತನಾಡುವುದಿಲ್ಲ? ಯಾರ ಬಗ್ಗೆ ಕಾರ್ಯಕ್ರಮ ಆಯೋಜಿಸಿದ್ದಾರೊ ಅವರ ಬಗ್ಗೆ ಮಾತನಾಡಿ’ ಎಂದು ಏರುಧ್ವನಿಯಲ್ಲಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬಿಳಿಮಲೆ ‘ಆರ್ಆರ್ಎಸ್ ಬಗ್ಗೆ ಮಾತನಾಡಲೇಬಾರದೆಂದು ಎಲ್ಲಿಯಾದರೂ ಕಾನೂನು ಇದೆಯೇ? ನನಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಕಷ್ಟಪಟ್ಟಾದರೂ ಈ ಸ್ವಾತಂತ್ರ್ಯ ಉಳಿಸಿಕೊಳ್ಳೋಣ’ ಎಂದರು.

ಇನ್ನು ಕೆಲವರು ಆಕ್ಷೇಪ ವ್ಯಕ್ತಪಡಿಸಿದವರನ್ನು ಸಮಾಧಾನಪಡಿಸಲು ಯತ್ನಿಸಿದರೆ, ಇನ್ನಷ್ಟು ಜನ ಕಾರ್ಯಕ್ರಮದಲ್ಲಿ ಇರುವುದಾದರೆ ಇರಿ; ಇಲ್ಲವಾದರೆ ಹೊರಗಡೆ ನಡೆಯಿರಿ ಎಂದಾಗ ಆಕ್ಷೇಪ ವ್ಯಕ್ತಪಡಿಸಿದವರ ಹೊರನಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.