ಮುನಿರಾಬಾದ್ (ಕೊಪ್ಪಳ ಜಿಲ್ಲೆ): ತುಂಗಭದ್ರಾ ಜಲಾಶಯಕ್ಕೆ 19ನೇ ಗೇಟ್ ಮರಳಿ ಅಳವಡಿಸಲು ಈಗಾಗಲೇ ಸಿದ್ಧತೆ ಆರಂಭವಾಗಿದ್ದು, ನಾಲ್ಕು ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಮುನಿರಾಬಾದ್ ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಕಾಡಾ) ಅಧ್ಯಕ್ಷ ಹಸನಸಾಬ್ ದೋಟಿಹಾಳ್ ಹೇಳಿದರು.

ಇಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಗೇಟ್ ತಯಾರಿಸಲು ಆದೇಶ ನೀಡಲಾಗಿದೆ. ನಾಲ್ಕು ದಿನಗಳಲ್ಲಿ ಸಿದ್ಧವಾಗಲಿದೆ. ಮುಂಬೈ ಮೂಲದ ಕಂಪನಿಗೆ ಗೇಟ್ ಮಾಡಲು ತಿಳಿಸಲಾಗಿದೆ. ಆದಷ್ಟು ಬೇಗನೆ ಹೊಸ ಗೇಟ್ ಅಳವಡಿಸುವ ಕೆಲಸ ಮಾಡಲಾಗುತ್ತದೆ. ಹೈದರಾಬಾದ್ ಸೇರಿದಂತೆ ಅನೇಕ ಕಡೆಯಿಂದ ತಜ್ಞರು ಕೂಡ ಬರುತ್ತಿದ್ದಾರೆ ಎಂದರು.

ಘಟನೆಗೆ ಕಾರಣವೇನು, ಯಾರ ತಪ್ಪಿನಿಂದ ಆಗಿದೆ ಅನ್ನೋದನ್ನು ಅನಂತರ ತನಿಖೆ ಮಾಡಿಸಲಾಗುವುದು.

ಸದ್ಯ ನೀರು ಖಾಲಿಯಾಗದಂತೆ ಗೇಟ್ ಅಳವಡಿಸುವ ಕೆಲಸ ಆರಂಭಿಸಲಾಗುತ್ತಿದೆ. ಒಂದನೇ ಬೆಳೆಗೆ ಬೇಕಾದ ನೀರು ಕೊಡಲಾಗುತ್ತದೆ. ಮುಂದಿನ ದಿನದಲ್ಲಿ ಮಲೆನಾಡಿನಲ್ಲಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದರು.
.ತುಂಗಭದ್ರಾ ಜಲಾಶಯ: ನದಿಪಾತ್ರದ ಜನ ಎಚ್ಚರದಿಂದ ಇರಲು ಸೂಚನೆ.ತುಂಗಭದ್ರಾ ಜಲಾಶಯಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ.ತುಂಗಭದ್ರಾ ಜಲಾಶಯ: 60 ಟಿಎಂಸಿ ಅಡಿ ನೀರು ಖಾಲಿಮಾಡಿದರಷ್ಟೇ ದುರಸ್ತಿಗೆ ಅವಕಾಶ.ತುಂಗಭದ್ರಾ | ಚೈನ್ ಲಿಂಕ್ ಬೆಸುಗೆ ಬಿಟ್ಟದ್ದೇ ಗೇಟ್ ಕುಸಿಯಲು ಕಾರಣ: ಮಂಡಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.