ಪಾಂಡವಪುರ: ಪೌರ ಕಾರ್ಮಿಕರು ಹಿಂಜರಿಕೆ ಸ್ವಭಾವ ಬಿಟ್ಟು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್ ಹೇಳಿದರು.

ಪುರಸಭೆ ಸಭಾಂಗಣದಲ್ಲಿ ಜ್ಯೋತಿಲಕ್ಷ್ಮಿ ಬಾಬು ಅವರ ಅಧ್ಯಕ್ಷತೆಯಲ್ಲಿ ನಡೆದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಅವರು ಮಾತನಾಡಿ, ‘ಪೌರಕಾರ್ಮಿಕರ ಕುಂದು–ಕೊರತೆ ಆಲಿಸಲು ಪ್ರತಿ ವಾರ ಅರ್ಧ ಗಂಟೆ ನಿಗದಿಪಡಿಸಲಾಗುವುದು’ ಎಂದರು.

ಪುರಸಭೆ ಸದಸ್ಯ ಪಾರ್ಥಸಾರಥಿ ಮಾತನಾಡಿ, ‘ದೇಶಕ್ಕೆ ಅನ್ನ ಕೊಡುವ ರೈತ, ರಕ್ಷಣೆ ನೀಡುವ ಯೋಧ ಎಷ್ಟು ಮುಖ್ಯವೋ ಸ್ವಚ್ಛತೆಯ ಕಾಯಕ ಮಾಡುವ ಪೌರಕಾರ್ಮಿಕರೂ ಮುಖ್ಯ. ಆರೋಗ್ಯದ ಕಡೆ ಗಮನಹರಿಸಬೇಕು. ಸಾಧ್ಯವಾದಷ್ಟು ರಕ್ಷಣಾ ಕವಚಗಳನ್ನು ಬಳಸಿಕೊಂಡು ಸ್ವಚ್ಛ ಮಾಡಬೇಕು. ಈ ವಿಚಾರದಲ್ಲಿ ಉದಾಸೀನ ತೋರಬಾರದು. ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು’ ಎಂದರು ಹೇಳಿದರು.

ಸದಸ್ಯ ಚಂದ್ರು ಮಾತನಾಡಿದರು. ಪುರಸಭೆ ಉಪಾಧ್ಯಕ್ಷ ಎಲ್.ಅಶೋಕ, ಸದಸ್ಯರಾದ ಆರ್.ಸೋಮಶೇಖರ್, ಉಮಾಶಂಕರ್, ಯಶವಂತ್ಕುಮಾರ್, ಜಯಲಕ್ಷ್ಮಮ್ಮ, ಧನಲಕ್ಷ್ಮಿ, ಎಂಜಿನಿಯರ್ಗಳಾದ ಚೌಡಪ್ಪ, ಯಶಸ್ವಿನಿ, ಪರಿಸರ ಅಧೀಕ್ಷಕಿ ಶಫೀನಾಜ್, ಅಧಿಕಾರಿಗಳಾದ ಮಣಿಪ್ರಸಾದ್, ನಾಗೇಶ್, ಮಹೇಶ್, ಶ್ರೀನಾಥ್, ನರಸಿಂಹ, ಕೃಷ್ಣ, ಮಧು, ವನಿತಾ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.