ಮಂಡ್ಯ: ‘ಶಾಸಕ ಜಮೀರ್ ಅಹಮದ್ ಖಾನ್ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಅವಹೇಳನಾಕಾರಿಯಾಗಿ ಮಾತನಾಡಿರುವುದನ್ನು ಸಹಿಸುವುದಿಲ್ಲ. ಅವರು ಮಂಡ್ಯ ಜಿಲ್ಲೆಗೆ ಬಂದರೆ ಅವರಿಗೆ ಪ್ರವೇಶ ನೀಡದೇ ಪ್ರತಿಭಟಿಸುತ್ತೇವೆ’ ಎಂದು ಜಿ.ಪಂ ಸದಸ್ಯ ಸಿ.ಅಶೋಕ್ ಹೇಳಿದರು.

‘ಹಣದ ವ್ಯವಹಾರವಿದ್ದರೆ ಪಕ್ಷದಲ್ಲೇ ಇದ್ದಾಗ ಮಾಡಬೇಕಾಗಿತ್ತು. ಜೆಡಿಎಸ್ ಪಕ್ಷ ಬಿಟ್ಟು ಏಳೆಂಟು ವರ್ಷಗಳಾದ ನಂತರ ಇಲ್ಲಸಲ್ಲದ ಆರೋಪ ಮಾಡಿ ದರೆ ಅದನ್ನು ನಂಬಲಾಗದು. ಕೂಡಲೇ ಅವರು ನಮ್ಮ ವರಿಷ್ಠರ ಕ್ಷಮೆ ಯಾಚನೆ ಮಾಡಬೇಕು. ಇಲ್ಲದಿದ್ದರೆ ಅವರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು’ ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

'ಜಮೀರ್ ಸುಂದರನಲ್ಲ, ವಂಡರಗಪ್ಪೆಯಂತಿದ್ದಾರೆ...'

ಜಿ.ಪಂ ಸದಸ್ಯ ರವಿ ಮಾತನಾಡಿ ‘ಜಮೀರ್ ಅಹಮದ್ ಖಾನ್ ನಮ್ಮ ನಾಯಕರಾದ ಕುಮಾರಸ್ವಾಮಿ ಅವ ರನ್ನು ಕರಿಯ ಎಂದು ಜರಿದಿದ್ದಾರೆ. ಅವರೇನೂ ಸುಂದರನಲ್ಲ, ವಂಡರಗಪ್ಪೆ ಯಂತಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಸದಸ್ಯ ಎಚ್.ಎನ್.ಯೋಗೇಶ್ ಮಾತನಾಡಿ ‘ಜಮೀರ್ ಅಹಮದ್ ಸಾಲ ನೀಡಿದ್ದರೆ, ಅದನ್ನು ದಾಖಲೆ ಸಮೇತ ಸಾಬೀತು ಮಾಡಲಿ. ನಮ್ಮ ಕಾರ್ಯಕರ್ತರೇ ಅದನ್ನು ಪಾವತಿ ಸುತ್ತಾರೆ. ಅದನ್ನು ಬಿಟ್ಟು ಈ ರೀತಿ ಮಾತ ನಾಡುವುದು ಸರಿಯಲ್ಲ’ ಎಂದರು. ಜಿಪಂ ಉಪಾಧ್ಯಕ್ಷೆ ಗಾಯಿತ್ರಿ ರೇವಣ್ಣ, ಸದಸ್ಯ ಎಚ್.ಟಿ.ಮಂಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.