ಕೆ.ಆರ್.ಪೇಟೆ: ಕೊರೊನಾ ದೃಢಪ ಟ್ಟಿರುವ ವರದಿ ಇದ್ದರೂ ಶಬರಿಮಲೆಗೆ ಭಾನುವಾರ ತೆರಳುತ್ತಿದ್ದ ತಾಲ್ಲೂಕಿನ ಮಂಚೀಬೀಡು ಗ್ರಾಮದ ಅಯ್ಯಪ್ಪ ಭಕ್ತರಿದ್ದ ಬಸ್ ಅನ್ನು ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಬಳಿಯ ಮಾದಾಪುರದಲ್ಲಿ ತಡೆದಿರುವ ಕೆ.ಆರ್.ಪೇಟೆ ಪೊಲೀಸರು ಅವರನ್ನು ವಾಪಸ್ ಕರೆತಂದು ಕ್ವಾರಂಟೈನ್ ಮಾಡಿದ್ದಾರೆ.

ಗ್ರಾಮದಿಂದ ಸುಮಾರು 35 ಅಧಿಕ ಮಂದಿ ಶಬರಿಮಲೆಗೆ ಹೊರಟಿದ್ದರು. ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರ ಪೈಕಿ 14 ಮಂದಿಗೆ ಸೋಂಕು ದೃಢಪಟ್ಟಿತ್ತು. ಅವರನ್ನು ಶನಿವಾರ ಗ್ರಾಮದಲ್ಲೇ ಕ್ವಾರಂಟೈನ್ ಮಾಡಲಾಗಿತ್ತು.

ಐಸೋಲೇಷನ್ನಲ್ಲಿದ್ದ ಮಾಲಧಾರಿ ಗಳೆಲ್ಲರೂ ಭಾನುವಾರ ಮುಂಜಾನೆ ಇತರರೊಂದಿಗೆ ಹೊರಟಿ ದ್ದರು. ಈ ಬಗ್ಗೆ ಆರೋಗ್ಯ ಇಲಾಖೆ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದರು.

ಇನ್ಸ್ಪೆಕ್ಟರ್ ದೀಪಕ್ ಮತ್ತು ನಿರಂಜನ್ ನೇತೃತ್ವದಲ್ಲಿ ಅಪರಾಧ ವಿಭಾಗದ ಎಸ್.ಐ.ಪ್ರಮೋದ್ ಮತ್ತು ಪೊಲೀಸರ ತಂಡ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರಿನ ಮಾದಾಪುರ ಬಳಿ ಬಸ್ ಅನ್ನು ಪತ್ತೆ ಹಚ್ಚಿ ಬಸ್ನಲ್ಲಿದ್ದ ಎಲ್ಲರನ್ನೂ ಕರೆತಂದು ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಇನ್ಸ್ಪೆಕ್ಟರ್ ದೀಪಕ್, ಶಬರಿಮಲೆಗೆ ತೆರಳಿದ್ದ ಭಕ್ತರನ್ನು ವಾಪಸ್ ಕರೆತಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿ ಸಾರಂಗಿಯಲ್ಲಿರುವ ಕೋವಿಡ್ ಕೇರ್ ಕೇಂದ್ರದಲ್ಲಿ ಐಸೊ ಲೇಷನ್ ಮಾಡಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.