ಶ್ರೀರಂಗಪಟ್ಟಣ: ಕಾರ್ತಿಕ ಮಾಸದ ಕಡೇ ಸೋಮವಾರದ ನಿಮಿತ್ತ ಪಟ್ಟಣದ ಐತಿಹಾಸಿಕ ಜ್ಯೋತಿರ್ ಮಹೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆದವು.

ದೇವಾಲಯದ ಅರ್ಚಕ ರಾಘವೇಂದ್ರ ಅವರ ನೇತೃತ್ವದಲ್ಲಿ ಮೂಲ ದೇವರಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಬಿಲ್ವಾರ್ಚನೆ ಇತರ ವಿಧಿ, ವಿಧಾನಗಳು ಜರುಗಿದವು. ಪಟ್ಟಣ ಮಾತ್ರವಲ್ಲದೆ ಆಸುಪಾಸಿನ ಗ್ರಾಮಗಳ ನೂರಾರು ಭಕ್ತರು ದೇವರ ದರ್ಶನ ಪಡೆದರು. ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಪಟ್ಟಣದ ಐತಿಹಾಸಿಕ ಗಂಗಾಧರೇಶ್ವರಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಮಾಸದ ಕಡೇ ಸೋಮವಾರದ ನಿಮಿತ್ತ ಗಂಗಾಧರನಿಗೆ ವಿಶೇಷ ಅಲಂಕಾರ ಮಾಡಿ ಪೂಜಿಸಲಾಯಿತು. ದೇವಾಲಯದ ಅರ್ಚಕ ವಿದ್ಯಾಶಂಕರ್ ಅವರ ನೇತೃತ್ವದಲ್ಲಿ ಅಭಿಷೇಕ, ಅರ್ಚನೆಗಳು ನಡೆದವು. ಪ್ರಸಾದ ವಿತರಣೆ ನಡೆಯಿತು.

ಪಟ್ಟಣದ ಕಾಳಿಕಾಂಬ ಕಮಠೇಶ್ವರ ದೇವಾಲಯ, ದೊಡ್ಡ ಗೋಸಾಯಿಘಾಟ್ನ ಕಾಶಿ ವಿಶ್ವನಾಥ, ಅರಕೆರೆಯ ಮಣಲೇಶ್ವರ, ಮಂಡ್ಯಕೊಪ್ಪಲು ಬಳಿಯ ಕಾವೇರಿ ಬೋರೇದೇವರು, ಗಣಂಗೂರಿನ ಬಸವೇಶ್ವರ, ಮಹದೇವಪುರದ ಕಾಶಿ ವಿಶ್ವನಾಥ, ಕೆಆರ್ಎಸ್ನ ಚಂದ್ರಮೌಳೇಶ್ವರ, ಚಂದ್ರವನದ ಕಾಶಿ ಚಂದ್ರಮೌಳೇಶ್ವರ ಚಿನ್ನೇನಹಳ್ಳಿಯ ಬಸವೇಶ್ವರ ಇತರ ದೇವಾಲಯಗಳಿಗೆ ಹೆಚ್ಚಿನ ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.