ಬುಧವಾರ, 26 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಟೊಮೆಟೊ, ಶುಂಠಿ, ಮೆಣಸಿನಕಾಯಿ ಬೆಲೆ ಇಳಿಕೆ

ನಿಯಂತ್ರಣಕ್ಕೆ ಬಂದ ತರಕಾರಿ, ಹಣ್ಣು, ಸೊಪ್ಪುಗಳ ದರ, ಕೈಗೆಟುಕುವ ಬೆಲೆಯಲ್ಲಿ ಮಾರಾಟ
Published 29 ಆಗಸ್ಟ್ 2023, 14:17 IST
Last Updated 29 ಆಗಸ್ಟ್ 2023, 14:17 IST
ಅಕ್ಷರ ಗಾತ್ರ

ಮಂಡ್ಯ: ಕಳೆದ ತಿಂಗಳು ಟೊಮೆಟೊ ಬೆಲೆ ಏರಿಕೆಯಿಂದ ಹಸಿ ಶುಂಠಿ, ಹುಣಸೆ ಹಣ್ಣು ಸೇರಿದಂತೆ ಹಲವು ವಸ್ತುಗಳ ಬೆಲೆಯೂ ಏರುಗತಿಯಲ್ಲಿ ಸಾಗಿತ್ತು. ಈಗ ಟೊಮೆಟೊ ಬೆಲೆಯೂ ಇಳಿಕೆಯಾಗಿದ್ದು ಇತರ ವಸ್ತುಗಳ ಬೆಲೆಯೂ ಇಳಿಕೆಯಾಗಿದ್ದು ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದಾರೆ.

ಟೊಮೆಟೊ ಬೆಲೆ ಈಗ ಪ್ರತಿ ಕೆ.ಜಿಗೆ ₹ 20ರಂತೆ ಮಾರಾಟವಾಗುತ್ತಿದ್ದು ಹಸಿ ಶುಂಠಿ ₹ 120ಕ್ಕೆ ಇಳಿದಿದೆ, ಹುಣಸೆ ಹಣ್ಣು ಕೂಡ ₹ 150ಕ್ಕೆ ಇಳಿಕೆಯಾಗಿದೆ. ಕಳೆದ ತಿಂಗಳು ಮಾರುಕಟ್ಟೆಯಲ್ಲಿ ಹಸಿ ಶುಂಠಿ ಬೆಲೆ ಕೇಳಿದರೆ ಗ್ರಾಹಕರು ಕುಸಿದು ಬೀಳುವಂತೆ ಏರಿಕೆ ಕಂಡಿತ್ತು, ಪ್ರತಿ ಕೆ.ಜಿ ₹ 300ಕ್ಕೆ ಮಾರಾಟವಾಗುತ್ತಿತ್ತು, ಹುಣಸೆ ಹಣ್ಣು ಕೂಡ ₹ 300 ದಾಟಿತ್ತು. ಈಗ ಇವುಗಳ ಬೆಲೆ ಇಳಿಕೆಯಾಗಿರುವುದು ಸಾಮಾಧಾನ ತಂದಿದೆ.

₹ 100 ದಾಟಿದ್ದ ಹಸಿರು ಮೆಣಸಿನಕಾಯಿ ದರ ಕೂಡ ಈಗ ₹ 60– 80ಕ್ಕೆ ಇಳಿದಿದೆ. ಇತರ ತರಕಾರಿ ಬೆಲೆಗಳೂ ನಿಯಂತ್ರಣಕ್ಕೆ ಬಂದಿದ್ದು ಗ್ರಾಹಕರಿಗೆ ನೆಮ್ಮದಿ ತರಿಸಿದೆ. ಈರುಳ್ಳಿ ಬೆಲೆ ಹೆಚ್ಚಳವಾಗುತ್ತದೆ ಎಂಬ ಭಯ ಸದ್ಯಕ್ಕೆ ದೂರಾಗಿದ್ದು, ಸಾಧಾರಣವಾಗಿಯೇ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಪ್ರಸ್ತುತದಲ್ಲಿ ಕೆ.ಜಿಗೆ ಈರುಳ್ಳಿಯು ₹20– ₹25 ರವರೆಗೆ ಮಾರಾಟವಾಗುತ್ತಿದೆ. ₹100ಕ್ಕೆ 3–4 ಕೆ.ಜಿಯಂತೆ ಮಾರಾಟ ಮಾಡಲಾಗುತ್ತಿದೆ.

ಇತರ ತರಕಾರಿಗಳ ಬೆಲೆ ಕೂಡ ನಿಯಂತ್ರಣಕ್ಕೆ ಬಂದಿವೆ. ಸೌತೆಕಾಯಿ ₹10, ಸೋರೆಕಾಯಿ ₹16, ಗೆಡ್ಡೆಕೋಸು, ಎಲೆಕೋಸು, ಮೂಲಂಗಿ, ಬೆಂಡೆಕಾಯಿ, ಮಂಗಳೂರುಸೌತೆ, ಬದನೆಕಾಯಿ, ಪಡವಲಕಾಯಿ ₹20, ಈರುಳ್ಳಿ ₹25, ಬೂದುಗುಂಬಳ, ಸಿಹಿಗುಂಬಳ, ಆಲೂಗೆಡ್ಡೆ, ಫಾರಂಬೀನ್ಸ್‌, ಹೂಕೋಸು, ತೊಂಡೆಕಾಯಿ, ಸಿಹಿಗೆಣಸು ₹30ರಂತೆ ಮಾರಾಟವಾಗುತ್ತಿವೆ.

ನಾಟಿಬೀನ್ಸ್‌, ಕ್ಯಾರೆಟ್‌, ದಪ್ಪಮೆಣಸಿನಕಾಯಿ, ಹಾಗಲಕಾಯಿ, ನುಗ್ಗೇಕಾಯಿ, ಅವರೆಕಾಯಿ, ಬೀಟ್‌ರೂಟ್‌, ತಗಣಿಕಾಯಿ ₹40, ಭಜಿ ಮೆಣಸಿನಕಾಯಿ, ಸುವರ್ಣಗೆಡ್ಡೆ, ಗೋರಿಕಾಯಿ ₹60, ಹಸಿರು ಮೆಣಸಿನಕಾಯಿ, ಶುಂಠಿ ₹80, ಫಾರಂ ಬೆಳ್ಳುಳ್ಳಿ ₹140, ರಾಜ್‌ಈರುಳ್ಳಿ, ನಾಟಿಬೆಳ್ಳುಳ್ಳಿ ₹160ರಂತೆ ಪ್ರತಿ ಕೆ.ಜಿಗೆ ಮಾರಾಟವಾಗುತ್ತಿವೆ. ಒಂದು ನಿಂಬೆಹಣ್ಣಿಗೆ ₹2 – ₹5 ಬೆಲೆ ಇದೆ.

ಸೊಪ್ಪುಗಳ ಬೆಲೆ ಕೂಡ ನಿಯಂತ್ರಣಕ್ಕೆ ಬಂದಿದ್ದು ಕೈಗೆಟುಕುವ ಬೆಲೆಯಲ್ಲಿಯೇ ಮಾರಾಟವಾಗುತ್ತಿವೆ. ಅವುಗಳಲ್ಲಿ ಕೀರೆ ₹5, ಫಾರಂ ಕೊತ್ತಂಬರಿ ₹8, ದಂಟು, ಸಬ್ಬಸಿಗೆ, ಕರಿಬೇವು, ಪಾಲಾಕ್, ಪುದಿನಾ, ಕಿಲ್‌ಕೀರೆ, ಚಿಕ್ಕಿಸೊಪ್ಪು ₹10ರಂತೆ ಪ್ರತಿ ಕಟ್ಟು ಮಾರಾಟವಾಗುತ್ತಿವೆ.

ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಕನಕಾಂಬರ ಹೂ, ಮಲ್ಲಿಗೆ, ಕಾಕಡ, ಮರಳೆ ಹೂಗಳ ಬೆಲೆ ಗಗನಕ್ಕೇರಿತ್ತು. ಸದ್ಯ ಬೆಲೆ ಇಳಿಕೆಯಾಗಿದ್ದು ಸಾಧಾರಣ ಬೆಲೆಗೆ ಮಾರಾಟವಾಗುತ್ತಿವೆ. ಕೆ.ಜಿ ಕೆಂಪು ಚೆಂಡು ಹೂ ₹50, ಹಳದಿ ಚೆಂಡುಹೂ ₹60, ಸಣ್ಣಗುಲಾಬಿ, ಸೇವಂತಿಗೆ ₹100, ಬಟನ್ಸ್‌, ಬಿಳಿಸೇವಂತಿ ₹120, ಕಲ್ಕತ್ತಾ ಮಲ್ಲಿಗೆ, ಸುಗಂಧರಾಜ ₹150, ಗಣಗಲೆ ₹200, ಮರಳೆ, ಕಾಕಡ ₹250, ಕನಕಾಂಬರ ₹500ರಂತೆ ಮಾರಾಟವಾಗುತ್ತಿವೆ.

ಮಾರು ತುಳಸಿ, ಕಾಕಡ ₹30, ಕೆಂಪು ಚೆಂಡುಹೂ, ಹಳದಿ ಚೆಂಡುಹೂ ₹40, ಮರಳೆ, ಮಲ್ಲಿಗೆ, ಬಟನ್ಸ್‌, ಬಿಳಿಸೇವಂತಿಗೆ, ಗಣಗಲೆ ₹50, ಕನಕಾಂಬರ ₹60ರಂತೆ ಮಾರಾಟವಾಗುತ್ತಿವೆ.

ಹಣ್ಣುಗಳಲ್ಲಿ ಸೇಬಿನ ಬೆಲೆ ಮಾತ್ರ ದುಬಾರಿಯಾಗಿಯೇ ಮುಂದುವರಿಯುತ್ತಿದೆ. ಪಪ್ಪಾಯ ₹30, ಕಲ್ಲಂಗಡಿ ₹25, ಕರ್ಬೂಜ, ಪಚ್ಚಬಾಳೆ, ಸೀಬೆ ₹40, ಅನಾನಸ್‌, ಮೂಸಂಬಿ ₹70, ಮರಸೇಬು ₹130, ಕವಿಹಣ್ಣು (ಬಾಕ್ಸ್‌) ₹150, ಸಣ್ಣದ್ರಾಕ್ಷಿ ₹180, ದಾಳಿಂಬೆ ₹190, ಆಸ್ಟ್ರೇಲಿಯಾ ಕಿತ್ತಳೆ ₹210, ಸೇಬು ₹180– ₹230ರಂತೆ ಮಾರಾಟವಾಗುತ್ತಿವೆ.

ಏಲಕ್ಕಿ ಬಾಳೆಹಣ್ಣು ದುಬಾರಿ

ಏಲಕ್ಕಿಬಾಳೆ ಹಣ್ಣಿನ ಬೆಲೆ ಏರಿಕೆಯಾಗಿದ್ದು ₹110 – ₹120ವರೆಗೂ ಕೆ.ಜಿ ಮಾರಾಟವಾಗುತ್ತಿದೆ. ತಮಿಳುನಾಡು ಬಾಳೆಹಣ್ಣು ಮಾರುಕಟ್ಟೆಗೆ ಬಾರದಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ. ಅಲ್ಲಿ ಬಾಳೆಹಣ್ಣು ಕಟಾವು ಕಾಲ ಮುಕ್ತಾಯವಾಗಿದ್ದು ಮಾರುಕಟ್ಟೆಯಲ್ಲಿ ಕೊರತೆಯಾಗಿದೆ. ಕೇವಲ ಸ್ಥಳೀಯ ಹಣ್ಣುಗಳು ಮಾರಾಟವಾಗುತ್ತಿದ್ದು ಬೆಲೆ ಏರಿಕೆಯಾಗಿದೆ. ಬೆಂಗಳೂರು ಸೇರಿದಂತೆ ಹೊರರಾಜ್ಯಗಳ ಏಲಕ್ಕಿ ಬಾಳೆಹಣ್ಣು ಬರುವವರೆಗೂ ಬೆಲೆ ಏರಿಕೆ ಮುಂದುವರಿಯಲಿದೆ ಎಂದು ವ್ಯಾಪಾರಿಗಳು ತಿಳಿಸುತ್ತಾರೆ.

ತರಕಾರಿ ಹಣ್ಣು ದರ ಪಟ್ಟಿ (₹ಪ್ರತಿ ಕೆ.ಜಿ)

ನಾಟಿ ಬೀನ್ಸ್‌; 30ನುಗ್ಗೇಕಾಯಿ; 40ಹಸಿರು ಮೆಣಸಿನಕಾಯಿ; 80ಕ್ಯಾರೆಟ್‌; 40ಗೆಡ್ಡೆಕೋಸು; 20ಟೊಮೆಟೊ; 15ರಾಜ್‌ ಈರುಳ್ಳಿ; 160ನಾಟಿ ಬೆಳ್ಳುಳ್ಳಿ; 160ಸೇಬು; 230ಕಪ್ಪು ದ್ರಾಕ್ಷಿ 120ಕಿತ್ತಳೆ; 210ಪಚ್ಚಬಾಳೆ; 40ಏಲಕ್ಕಿಬಾಳೆ; 120ದಾಳಿಂಬೆ; 190

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT