ಗೋಣಿಕೊಪ್ಪಲು: ಪೊನ್ನಂಪೇಟೆ ತಾಲ್ಲೂಕಿನ ಹರಿಹರದಲ್ಲಿ ಬೆಟ್ಟಚಿಕ್ಕಮ್ಮ ದೇವರ ವಾರ್ಷಿಕ ಉತ್ಸವ ಒಂದು ವಾರ ಶ್ರದ್ಧಾಭಕ್ತಿಯಿಂದ ಜರುಗಿತು.

ದಕ್ಷಿಣ ಕೊಡಗಿನ ಶ್ರೀಮಂಗಲ ಬಳಿ ಇರುವ ಹರಿಹರದ ಪರಿವಾರ ಸಮುದಾಯಕ್ಕೆ ಸೇರಿದ ಕುಟುಂಬಸ್ಥರ ಅರ್ಚಕ ಲೋಕೇಶ್ , ಬೆಟ್ಟಚಿಕ್ಕಮ್ಮ ದೇವರಿಗೆ ನ.1 ರಂದು ಅಭ್ಯಂಜನ, ಪೂಜೆ ನೆರವೇರಿಸಿ, ಉತ್ಸವಕ್ಕೆ ಚಾಲನೆ ನೀಡಿದರು. ದೇವಿ ಮೂರ್ತಿಗೆ ಹೂವುಗಳಿಂದ ಅಲಂಕಾರ ಮಾಡಿ ತಲೆಯಲ್ಲಿ ಹೊತ್ತು ಲೋಕೇಶ್ ಅವರು ಮಂಗಳವಾದ್ಯದೊಂದಿಗೆ ಹೆಜ್ಜೆ ಹಾಕಿದರು. ಭಕ್ತರು ದೇವಿಗೆ ನಮನ ಸಲ್ಲಿಸಿದರು.

ಪ್ರತಿ ವರ್ಷ ತುಲಾ ಸಂಕ್ರಮಣ ದಂದು (ಕಾವೇರಿ ತೀರ್ಥೋದ್ಭವ) ದೇವರ ಕುಟುಂಬದವರು (ಪರಿವಾರ ಕುಟುಂಬಸ್ಥರು)ಮತ್ತು ಊರಿನವರು ಕಟ್ಟು ಹಾಕುವಂತೆ ಈ ಬಾರಿಯೂ ವಿಧಿ ನೆರವೇರಿಸಿದರು. 15 ದಿನಗಳ ಬಳಿಕ ಸಂಪ್ರದಾಯದಂತೆ ನವೆಂಬರ್ ಮೊದಲ ಮಂಗಳವಾರದಂದು ದೇವರ ಅವಭೃತ ಸ್ನಾನ ಹಾಗೂ ಅನ್ನ ಸಂತರ್ಪಣೆಯೊಂದಿಗೆ ಉತ್ಸವ ಆರಂಭಗೊಳ್ಳವುದು ವಾಡಿಕೆ. ನ. 5 ರ ಮಂಗಳವಾರದಂದು ಜಾತ್ರೆ ಮತ್ತು ವಿಶೇಷ ಉತ್ಸವ ಅದ್ಧೂರಿಯಾಗಿ ನಡೆಯಿತು. ಅಂದು ಬಲಿಪೂಜೆ ಜರುಗಿತು.

ದೇವರ ವಾರ್ಷಿಕೋತ್ಸವದ ಸಂದರ್ಭದಲ್ಲಿ ದೇವಸ್ಥಾನದ ಸುತ್ತ ಸ್ವಚ್ಚಮಾಡಿ ಚಪ್ಪರ ಹಾಕಿ ಬಾಳೆ ಕಂಬ ಕಟ್ಟಿ, ಮಾವಿನ ಸೊಪ್ಪಿನ ತಳಿರು ತೋರಣ ಹಾಕಿ ಶೃಂಗಾರ ಮಾಡಿದ್ದರು. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಮಂಗಳವಾದ್ಯದೊಂದಿಗೆ ದೇವಿಯ ಆರಾಧನೆ ಜರುಗಿತು. ಭಕ್ತರು ಶ್ರದ್ಧಾಭಕ್ತಿಯಿಂದ ಹರಕೆ ತೀರಿಸಿದರು.

ಪರಿವಾರದವರೇ ಪೂಜಾರಿ: ಆದಿ ಕಾಲದಿಂದಲೂ ಪರಿವಾರ ಸಮುದಾಯದ ಕುಟುಂಬಸ್ಥರು ವಂಶಪಾರಂಪರ್ಯವಾಗಿ ದೇವಿ ಕಾರ್ಯ ನಡೆಸುತ್ತಿದ್ದಾರೆ. ಪರಿವಾರ ಕುಟುಂಬದ ವೆಂಕಪ್ಪ 50 ವರ್ಷ ಅರ್ಚಕರಾಗಿದ್ದರು. ಇದೀಗ ಅವರ ಮಗ ಹಾಗೂ ಪೊನ್ನಂಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಲೋಕೇಶ್ ಈ ಕಾರ್ಯ ನೆರವೇರಿಸುತ್ತಿದ್ದಾರೆ.

ದೇವಿಯ ಇತಿಹಾಸ

ಶ್ರೀಮಂಗಲ ಹೋಬಳಿಯ ಹರಿಹರದ ಬೆಟ್ಟದ ತಪ್ಪಲಿನಲ್ಲಿ ನೆಲೆಸಿರುವ ಬೆಟ್ಟಚಿಕ್ಕಮ್ಮ ದೇವರಿಗೆ 300 ರಿಂದ 400 ವರ್ಷಗಳ ಇತಿಹಾಸವಿದೆ. ಬೆಟ್ಟಚಿಕ್ಕಮ್ಮ ದೇವಿ ಮೈಸೂರಿನ ಚಾಮುಂಡೇಶ್ವರಿಯ ತಂಗಿಯಂತೆ. ಇದರ ಮೂಲ ಸ್ಥಾನ ಎಚ್.ಡಿ.ಕೋಟೆ ತಾಲ್ಲೂಕಿನ ಸರಗೂರು ಎಂದು ಹೇಳಲಾಗುತ್ತಿದೆ. ಬೆಟ್ಟದ ತಪ್ಪಲಿನಲ್ಲಿ ಶಾಂತವಾಗಿ ಹರಿಯುವ ಪ್ರಕೃತಿ ಸೊಬಗಿನ ಕಪಿಲಾ ನದಿ ತೀರದಲ್ಲಿ ಬೆಟ್ಟಚಿಕ್ಕಮ್ಮ ನೆಲೆಸಿದ್ದಳಂತೆ.

ಅಕ್ಕ ಚಾಮುಂಡಿ ದೇವಿಯಂತೆ ರಾಕ್ಷಸ ಸಂಹಾರಕ್ಕಾಗಿ ಅವೀರ್ಭವಿಸಿದ ಬೆಟ್ಟಚಿಕ್ಕಮ್ಮ ಮೈಸೂರು ಅರಸರ ಆರಾಧ್ಯ ದೇವತೆಯಾಗಿದ್ದಳು ಎಂಬದು ಹಿರಿಯರು ಹೇಳಿಕೆ. 400 ವರ್ಷಗಳ ಹಿಂದೆ ಬೆಟ್ಟಚಿಕ್ಕಮ್ಮನನ್ನು ಆರಾಧಿಸುತ್ತಿದ್ದ ಕುಟುಂಬಸ್ಥರು ಅಂದು ಸಂಭವಿಸಿದ ಬರಗಾಲವನ್ನು ಸಹಿಸಲಾಗದೆ ಎಚ್.ಡಿ.ಕೋಟೆಯನ್ನು ಬಿಟ್ಟು ಕೊಡಗಿನ ಹರಿಹರಕ್ಕೆ ವಲಸೆ ಬಂದರಂತೆ. ಬಳಿಕ ಹರಿಹರದಲ್ಲಿ ನೆಲೆನಿಂತ ಕುಟುಂಬದವರು ದೇವಿಯ ತಾಲಿ ತಂದು ಪೂಜಿಸ ತೊಡಗಿದರು.

ಕ್ರಮೇಣ ಬೆಟ್ಟಚಿಕ್ಕಮ್ಮ ಮೂರ್ತರೂಪ ತಳೆದು ಪೂಜೆಗಳು ಆರಂಭಗೊಂಡವು ಎಂನ್ನುತ್ತಾರೆ ಸ್ಥಳೀಯರು. ಬೆಟ್ಟಚಿಕ್ಕಮ್ಮ ದೇವಸ್ಥಾನದ ಆವರಣದಲ್ಲಿ ಲಕ್ಷ್ಮಿದೇವಿ ಕನ್ನಂಬಾಡಮ್ಮ ಭೈರವೇಶ್ವರ ಗುಡಿಗಳಿವೆ. ಬೆಟ್ಟಚಿಕ್ಕಮ್ಮನೇ ಶಕ್ತಿದೇವತೆ. ಮುತ್ತೈದೆ ಭಾಗ್ಯ ಸಂತಾನ ಭಾಗ್ಯ ಕರುಣಿಸುತ್ತದೆ ಎಂಬ ಅಚಲ ನಂಬಿಕೆ ಭಕ್ತರಲ್ಲಿದೆ. ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಲಾಗಿದೆ. ಟೈಲ್ಸ್ ಹಾಕಿ ಅಂದಗೊಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.