ಪ್ರತಿಪಕ್ಷದಂತೆ ಕಾಂಗ್ರೆಸ್ ನಡೆ: ಟೀಕೆ
ಮಂಡ್ಯ: ‘ಆಡಳಿತ ಪಕ್ಷದ ಭ್ರಷ್ಟಾಚಾರ, ಸ್ವಜನ ಪಕ್ಷಪಾತವನ್ನು ಜನರ ಮುಂದಿಡಲು ಪಾದಯಾತ್ರೆ ನಡೆಸುವುದು ಪ್ರತಿಪಕ್ಷದ ಹಕ್ಕು. ಆದರೆ, ಆಡಳಿತಾರೂಢ ಕಾಂಗ್ರೆಸ್ ಕೂಡ ಬೀದಿಗಿಳಿದಿರುವುದು ವಿಪರ್ಯಾಸ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಟೀಕಿಸಿದರು.
ಕಾಂಗ್ರೆಸ್ ಸರ್ಕಾರದ 14 ತಿಂಗಳ ದುರಾಡಳಿತ ಮತ್ತು ಹಗರಣಗಳ
ನ್ನೊಳಗೊಂಡ ‘ಜನವಿರೋಧಿ ಕಾಂಗ್ರೆಸ್’ ಕೈಪಿಡಿಯನ್ನು ನಗರದಲ್ಲಿ ಶುಕ್ರವಾರ ಬಿಡುಗಡೆ ಮಾಡಿದ ಅವರು, ‘ತಪ್ಪು ಮಾಡಿಲ್ಲದಿದ್ದರೆ, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಜನಾಂದೋಲನ ಮಾಡುವ ಅವಶ್ಯಕತೆ ಏನಿತ್ತು? ನ್ಯಾಯಯುತವಾಗಿ ಸೈಟ್ ತೆಗೆದುಕೊಂಡಿದ್ದರೆ, ಈಗ ಏಕೆ ವಾಪಸ್ ಕೊಡು
ತ್ತೇನೆನ್ನುತ್ತಿದ್ದಾರೆ’ ಎಂದರು.
‘ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ನಿಲುವಳಿ ಸೂಚನೆ ತಂದು, 50 ಪುಟಗಳ ದಾಖಲೆ ಕೊಟ್ಟರೂ, ಸಿದ್ದರಾಮಯ್ಯ ಮುಚ್ಚಿಡಲು ಯತ್ನಿಸಿದರು. ಚರ್ಚೆಗೆ ತಯಾರಿರಲಿಲ್ಲ. ಡಿನೋಟಿಫಿಕೇಷನ್ ಪ್ರಕರಣದಲ್ಲಿ ಬಿ.ಎಸ್.ಯಡಿಯೂರಪ್ಪ ಎಷ್ಟು ಕಷ್ಟ ಅನುಭವಿಸಿದರು. ಸಿದ್ದರಾಮಯ್ಯ ತಾವು ಸ್ವಚ್ಛ ಎನ್ನುತ್ತಾರೆ. ಅವರ ಬಟ್ಟೆಗಳನ್ನು ಲ್ಯಾಂಡ್ರಿಗೆ ಕೊಟ್ಟರೆ ಸ್ವಚ್ಛವಾಗುತ್ತವೆ’ ಎಂದು ವ್ಯಂಗ್ಯವಾಡಿದರು.