ಮೈಸೂರು: ‘ಮೀನುಗಾರರ ಆರ್ಥಿಕ ಮತ್ತು ಸಾಮಾಜಿಕ ಬಲವರ್ಧನೆಗಾಗಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಮೀನುಗಾರರ ನೀತಿ ಜಾರಿಗೊಳಿಸಬೇಕು’ ಎಂದು ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್ಕುಮಾರ್ ಆಗ್ರಹಿಸಿದರು.

ಇಲ್ಲಿನ ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮೀನುಗಾರರ ವಿಭಾಗದಿಂದ ಶುಕ್ರವಾರ ಆಯೋಜಿಸಿದ್ದ ಸಂವಾದ ಹಾಗೂ ಜಿಲ್ಲಾ ಪದಾಧಿಕಾರಿಗಳು, ಬ್ಲಾಕ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ತಳ ಹಾಗೂ ವಂಚಿತ ಸಮುದಾಯಗಳಿಗೆ ಅಧಿಕಾರ ಸಿಕ್ಕಾಗ ಮಾತ್ರ ಸಂವಿಧಾನದ ಆಶಯಗಳು ಈಡೇರಲು ಸಾಧ್ಯವಾಗುತ್ತದೆ. ಹಿಂದುಳಿದ ಮತ್ತು ಅತಿ ಹಿಂದುಳಿದ ಸಮುದಾಯಗಳು ಸಮಾಜದ ಮುನ್ನೆಲೆಗೆ ಬಂದು ಜೀವನ ನಡೆಸಬೇಕು ಎಂಬುದು ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು ಅವರ ಆಸೆಯಾಗಿತ್ತು. ಈ ನಿಟ್ಟಿನಲ್ಲಿ ಸೂಕ್ಷ್ಮಾತಿ ಸೂಕ್ಷ್ಮ ಜಾತಿಗಳನ್ನು ಗುರುತಿಸುವ ಕೆಲಸವನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಮಾಡುತ್ತಿದೆ’ ಎಂದು ಹೇಳಿದರು.

‘ನಮ್ಮ ಸರ್ಕಾರವು ಕಳೆದ ವರ್ಷದ ಬಜೆಟ್ನಲ್ಲಿ ಮೀನುಗಾರರಿಗೆ ಹಲವು ಕೊಡುಗೆಗಳನ್ನು ನೀಡಿದೆ. ನಮ್ಮ ಪಕ್ಷ ಮೀನುಗಾರರಿಗೆ ನೀಡಿದ್ದಷ್ಟು ಉತ್ತೇಜನವನ್ನು ಯಾವ ಪಕ್ಷವೂ ಕೊಟ್ಟಿಲ್ಲ. ನಾವು ಮೀನುಗಾರರ ವಿಭಾಗವನ್ನೇ ಆರಂಭಿಸಿದ್ದು, ಇದು ಬೇರಾವ ಪಕ್ಷದಲ್ಲೂ ಕಾಣಸಿಗುವುದಿಲ್ಲ’ ಎಂದರು.

ಸಮಸ್ಯೆ ಬಗೆಹರಿಸಿ: ಒಳನಾಡು ಮೀನುಗಾರರ ಸಂಘದ ಮಾಜಿ ಅಧ್ಯಕ್ಷ ಸಿದ್ದಲಿಂಗರಾಜು ಮಾತನಾಡಿ, ‘ಮೀನುಗಾರರ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರಗಳು ಹೆಚ್ಚಿನ ಗಮನಹರಿಸಬೇಕು’ ಎಂದು ಒತ್ತಾಯಿಸಿದರು.

‘ಮೀನುಗಾರಿಕೆ ಮಾಡಲು ಯಾವುದೇ ನಿರ್ದಿಷ್ಟ ಜಾತಿಯವರೇ ಆಗಬೇಕೆಂದೇನಿಲ್ಲ. ಯಾರು ಬೇಕಾದರೂ ಮಾಡಲು ಮುಕ್ತ ಅವಕಾಶವಿದೆ. ಇತ್ತೀಚೆಗೆ, ಬಂಡವಾಳಶಾಹಿಗಳ ಆರ್ಭಟದಿಂದ ಬಡ ಮೀನುಗಾರರು ಸಂಕಷ್ಟಕ್ಕೀಡಾಗಿದ್ದಾರೆ. ಸರ್ಕಾರದ ಯೋಜನೆಗಳ ದುರುಪಯೋಗ ಆಗುತ್ತಿದ್ದು, ಸಹಕಾರ ಸಂಘಗಳ ಅವ್ಯವಹಾರ ಕಂಡುಬರುತ್ತಿದೆ. ಒಬ್ಬರ ಹಿತಕ್ಕಾಗಿ ಎಲ್ಲರನ್ನೂ ನಾಶಗೊಳಿಸುವ ಕೆಲಸ ಆಗುತ್ತಿದೆ’ ಎಂದು ಆರೋಪಿಸಿದರು.

ಕಾಂಗ್ರೆಸ್ ನೆರವು: ‘ಕಾಂಗ್ರೆಸ್ ಸರ್ಕಾರ ಶೋಷಿತರ ಪರವಾಗಿದ್ದು, ಮೀನುಗಾರರಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಿದೆ. ಆದರೆ, ಸರ್ಕಾರ ನೀಡುತ್ತಿರುವ ಬಲೆಗಳು, ದೋಣಿಗಳು ಉಳ್ಳವರ ಪಾಲಾಗುತ್ತಿವೆ. ಪ್ರಭಾವ ಬಳಸಿ ಬಡ ಮೀನುಗಾರರಿಗೆ ಮೋಸ ಮಾಡುತ್ತಿರುವುದರಿಂದ ಒಳನಾಡು ಮೀನುಗಾರಿಕೆಗೆ ಬಹಳ ಕಷ್ಟವಾಗಿದೆ. ಸ್ಥಳೀಯ ಶಾಸಕರ ಈ ಸಂಬಂಧ ಹೆಚ್ಚಿನ ಗಮನಹರಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಕೆಪಿಸಿಸಿ ಮೀನುಗಾರರ ವಿಭಾಗದ ಅಧ್ಯಕ್ಷ ಮಂಜುನಾಥ ಬಿ. ಸುಣಗಾರ ಮಾತನಾಡಿ, ‘ಮೀನುಗಾರಿಕೆ ದೇಶದ 2ನೇ ಬೆನ್ನೆಲುಬಾಗಿದೆ. ಮೀನುಗಾರರು ಆರ್ಥಿಕ ಹಾಗೂ ಸಾಮಾಜಿಕವಾಗಿ ತುಳಿತಕ್ಕೆ ಒಳಗಾಗಿದ್ದು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದೇ ನಮ್ಮ ವಿಭಾಗದ ಉದ್ದೇಶವಾಗಿದೆ’ ಎಂದು ತಿಳಿಸಿದರು.

‘ಮುಂದಿನ ಚುನಾವಣೆಗಳಲ್ಲಿ ಪಕ್ಷದಿಂದ ಮೀನುಗಾರ ಸಮುದಾಯದವರಿಗೆ ಹೆಚ್ಚಿನ ಅವಕಾಶ ಕೊಡಿಸಿಕೊಡಬೇಕು’ ಎಂದು ಕೋರಿದರು.

‘ಮೀನುಗಾರಿಕೆಯ ಹೆಚ್ಚಿನ ವ್ಯವಹಾರವು ಕರಾವಳಿ ಭಾಗಕ್ಕಿಂತಲೂ ಒಳನಾಡು ಪ್ರದೇಶದಲ್ಲಿ ಜಾಸ್ತಿ ನಡೆಯುತ್ತಿದೆ. ಆದರೆ, ಅಧಿಕಾರಿಗಳು ಸರ್ಕಾರಕ್ಕೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಅವೈಜ್ಞಾನಿಕ ಮೀನುಗಾರಿಕೆಯಿಂದ ಮತ್ಸ್ಯ ಕ್ಷಾಮ ಎದುರಾಗುತ್ತಿದೆ’ ಎಂದರು.

ಪಕ್ಷದ ಜಿಲ್ಲಾ ಮೀನುಗಾರರ ಘಟಕದ ಅಧ್ಯಕ್ಷ ಎಸ್. ಸಿದ್ದಯ್ಯ, ಡಿಸಿಸಿ ಉಪಾಧ್ಯಕ್ಷ ಹೆಡತಲೆ ಮಂಜುನಾಥ್, ಪ್ರಧಾನ ಕಾರ್ಯದರ್ಶಿಗಳಾದ ಎಂ.ಶಿವಪ್ರಸಾದ್ ಹಾಗೂ ಉತನಹಳ್ಳಿ ಶಿವಣ್ಣ, ಡಿಸಿಸಿ ಕಾರ್ಯದರ್ಶಿಗಳಾದ ಎನ್.ಲಕ್ಷ್ಮಣ್, ಎನ್.ಆರ್.ಎಂ. ಮಂಜು, ಸಾ.ಮಾ. ಯೋಗೇಶ್, ಜವರೇಗೌಡ, ಪ್ರವೀಣ್ ಸಿದ್ದಲಿಂಗಪುರ ಪಾಲ್ಗೊಂಡಿದ್ದರು.

ಜಿಲ್ಲೆಯಲ್ಲಿ ಮೀನುಗಾರರಿಗೆ ಹಲವು ಸಂಕಷ್ಟಗಳಿವೆ. ಮೀನುಗಾರಿಕೆ ಆಧುನೀಕರಣಗೊಂಡಂತೆ ವ್ಯಾಪ್ತಿಯೂ ಬೆಳೆಯುತ್ತಿದೆ. ಇದರ ಉಪಯೋಗವನ್ನು ಅರ್ಹರು ಪಡೆದುಕೊಳ್ಳಬೇಕು
ಬಿ.ಜೆ. ವಿಜಯ್ಕುಮಾರ್ ಅಧ್ಯಕ್ಷ ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಸಮಿತಿ

ಮಹಿಳಾ ಮೀನುಗಾರರಿಗೆ ₹3 ಲಕ್ಷದವರೆಗೆ ಬಡ್ಡಿ ರಹಿತ ಸಾಲವನ್ನು ನಮ್ಮ ಸರ್ಕಾರ ನೀಡುತ್ತಿದ್ದು ನೋಂದಾಯಿಸಿಕೊಂಡು ಗುರುತಿನ ಚೀಟಿ ಪಡೆದುಕೊಳ್ಳಬೇಕು
ಮಂಜುನಾಥ ಬಿ. ಸುಣಗಾರ ಅಧ್ಯಕ್ಷ ಕೆಪಿಸಿಸಿ ಮೀನುಗಾರರ ವಿಭಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.