ಮೈಸೂರು: ಮೈಸೂರು ರಂಗಾಯಣದಲ್ಲಿ ಆಯೋಜಿಸಿರುವ ‘ಬಹುರೂಪಿ’ ರಾಷ್ಟ್ರೀಯ ನಾಟಕೋತ್ಸವದ ಚಲನಚಿತ್ರೋತ್ಸವದಲ್ಲಿ ತಮ್ಮ ‘ಅಲ್ಲಮ’ ಚಿತ್ರ ಪ್ರದರ್ಶಿಸದಿರುವುದಕ್ಕೆ ನಿರ್ದೇಶಕ ಟಿ.ಎಸ್. ನಾಗಾಭರಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ರಂಗಾಯಣದ ಉಪ ನಿರ್ದೇಶಕರಿಗೆ ಶನಿವಾರ ಪತ್ರ ಬರೆದಿದ್ದಾರೆ. ‘ನಿಮ್ಮ ಕೋರಿಕೆ ಮೇರೆಗೆ ಪ್ರದರ್ಶನಕ್ಕೆ ಅನುಮತಿ ನೀಡಿದ್ದೆ. ಡಿಜಿಟಲ್ ಪ್ರತಿಯನ್ನೂ ಕಳುಹಿಸಿದ್ದೆ. ಆದರೆ, ಆಹ್ವಾನಪತ್ರಿಕೆಯಲ್ಲಿ ಉಲ್ಲೇಖವಿಲ್ಲ. ಈ ಬಗ್ಗೆ ಅಧಿಕೃತ ವಿವರಣೆ ನೀಡಬೇಕು’ ಎಂದು ಕೇಳಿದ್ದಾರೆ.

‘ಚಿತ್ರವು ಉತ್ಸವದ ಆಶಯವಾದ ‘ಇವ ನಮ್ಮವ ಇವ ನಮ್ಮವ’ ಎಂಬ ಪರಿಕಲ್ಪನೆಯದ್ದೇ ಆಗಿದೆ. ಇದರ ಆಶಯ ಹಾಗೂ ಉತ್ಕೃಷ್ಟತೆ ನೋಡಿ ‘ಇಂಡಿಯನ್ ಪನೋರಮಾ’ಗೆ ಅಧಿಕೃತ ಆಯ್ಕೆ ಮಾಡಿ ಗೋವಾ ಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗಿತ್ತು. ಯುಎನ್ನ ಗಾಂಧಿ ಮೆಡಲ್ಗಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ದೇಶದ ಪ್ರತಿನಿಧಿಯಾಗಿ ಆಯ್ಕೆಯಾಗಿತ್ತು. ಅತ್ಯುತ್ತಮ ಮೇಕಪ್, ಕಾಸ್ಟ್ಯೂಮ್ಗೆ ರಾಷ್ಟ್ರಪ್ರಶಸ್ತಿಯೂ ಪಡೆದಿದೆ’ ಎಂದು ತಿಳಿಸಿದ್ದಾರೆ.

‘ಪ್ರದರ್ಶನದಿಂದ ತೆಗೆದು ಹಾಕಿರುವುದು ಉತ್ಸವದ ಆಶಯಕ್ಕೆ ತದ್ವಿರುದ್ಧವಾಗಿ ‘ಇವನಾರವ, ಇವನಾರವ’ ಎನ್ನುವಂತೆ ಭಾಸವಾಗುತ್ತಿದೆ. ಆಶ್ಚರ್ಯವನ್ನೂ, ಆಘಾತವನ್ನೂ ಉಂಟು ಮಾಡಿದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಪತ್ರದ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಉಪ ನಿರ್ದೇಶಕಿ ನಿರ್ಮಲಾ ಮಠಪತಿ, ‘ಒಂದಿಷ್ಟು ಸಿನಿಮಾಗಳನ್ನು ತರಿಸಿಕೊಂಡಿದ್ದೆವು. ಅದರಲ್ಲಿ ‘ಅಲ್ಲಮ’ನೂ ಇತ್ತು. ಸಮಯದ ಅಭಾವದಿಂದ ಎಲ್ಲವನ್ನೂ ಪ್ರದರ್ಶಿಸಲು ಆಗಿಲ್ಲ ಎಂದು ಅವರಿಗೆ ತಿಳಿಸಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.