ಮೈಸೂರು: ‘ಬಿಜೆಪಿ ಆಡಳಿತಾವಧಿಯಲ್ಲಿ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದ್ದ ವರುಣ ಕ್ಷೇತ್ರವನ್ನು ನಮ್ಮ ಅವಧಿಯಲ್ಲಿ ಮಾದರಿ ಕ್ಷೇತ್ರವಾಗಿ ರೂಪಿಸಲು ಶ್ರಮಿಸುತ್ತೇವೆ’ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಭರವಸೆ ನೀಡಿದರು.

ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮುನಿಯಮ್ಮ ದೇವಸ್ಥಾನದ ನೂತನ ಕಟ್ಟಡ ಹಾಗೂ ಪರಿವರ್ತನಾ ಸ್ವಯಂಸೇವಾ ಸಂಘವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

‘ಕ್ಷೇತ್ರದಲ್ಲಿ ಎಲ್ಲ ವರ್ಗದ ಜನರನ್ನೂ ಸಮಾನವಾಗಿ ನೋಡುತ್ತಿದ್ದು, ಅಭಿವೃದ್ಧಿಗೆ ಒತ್ತು ನೀಡುತ್ತಿದ್ದೇವೆ. ಶಿಕ್ಷಣ ಹಾಗೂ ಮೂಲ ಸೌಕರ್ಯ ಒದಗಿಸಲು ಆದ್ಯತೆ ನೀಡಿದ್ದೇವೆ. ಅಂಬೇಡ್ಕರ್ ಚಿಂತನೆಯಂತೆ ಎಲ್ಲರಿಗೂ ಶಿಕ್ಷಣ ಒದಗಿಸಲು ಶ್ರಮಿಸಲಾಗುತ್ತಿದೆ’ ಎಂದರು.

ಗ್ರಾಮದ ಗಣೇಶ್ ದೀಕ್ಷಿತ್, ಸೇನೆಯಲ್ಲಿ ಸೇವೆ ಸಲ್ಲಿಸಿದ ಮಾದೇವ ಅವರನ್ನು ಸನ್ಮಾನಿಸಲಾಯಿತು.

ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ‘ಗ್ರಾಮದ ಅಭಿವೃದ್ಧಿಗೆ ಶಿಕ್ಷಣ ಕೊಡುಗೆ ನೀಡುತ್ತದೆ. ಆದರೆ, ಪ್ರಸ್ತುತ ಅದು ವ್ಯಾವಹಾರಿಕವಾಗಿದ್ದು, ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಶಿಕ್ಷಣ ವ್ಯವಸ್ಥೆ ಅಳವಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯ್ ಕುಮಾರ್, ಪಾಲಿಕೆ ಮಾಜಿ ಸದಸ್ಯ ಬಿ.ಎಂ. ನಟರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌರಮ್ಮ ಪಾಪಣ್ಣ, ವರುಣ ಮಹೇಶ್, ನಾಡಿನಳ್ಳಿ ರವಿ, ಮುಖಂಡರಾದ ಭುಗತ್ಗಳ್ಳಿ ಮನೆಯಯ್ಯ, ರಾಯಣ್ಣ ಉಂಡಿ ರವಿ, ಚಿಕ್ಕದೇವಯ್ಯ, ಮುಖಂಡರಾದ ದೇವರಾಜು, ಗುರುಪ್ರಸಾದ್, ಕುಮಾರಸ್ವಾಮಿ, ಶಾಂತರಾಜು, ಮಹಾದೇವ ಪ್ರಸಾದ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.