ಮೈಸೂರು: '13' ಚಲನಚಿತ್ರವು ಯಾವುದೇ ಹೀರೊಯಿಸಂಗಳಿಲ್ಲದ ಕುತೂಹಲಕಾರಿ ಕೌಟುಂಬಿಕ ಚಿತ್ರವಾಗಿದ್ದು, ಕನ್ನಡದ ಪ್ರೇಕ್ಷಕರಿಗೆ ಖಂಡಿತ ಹಿಡಿಸಲಿದೆ’ ಎಂದು ನಟ ರಾಘವೇಂದ್ರ ರಾಜಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ಚಿತ್ರದ ಪ್ರಚಾರರ್ಥ ನಗರದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು ‘ನಾನು ಮತ್ತು ಶ್ರುತಿ 25 ವರ್ಷಗಳ ನಂತರ ಮತ್ತೆ ಒಟ್ಟಾಗಿ ನಟಿಸಿದ್ದೇವೆ. ಹಿಂದೂ–ಮುಸ್ಲಿಂ ಪತಿ–ಪತ್ನಿ ಜೋಡಿಯ ಬದುಕಿನ ಚಿತ್ರಣವನ್ನು ಒಳಗೊಂಡ ಈ ಸಿನಿಮಾ ಕ್ಷಣಕ್ಷಣಕ್ಕೂ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುತ್ತ ಕ್ಲೈಮ್ಯಾಕ್ಸ್‌ವರೆಗೂ ಒಯ್ಯುತ್ತದೆ. ಸಂಭಾಷಣೆ ಮತ್ತು ಚಿತ್ರಕಥೆ ಈ ಚಿತ್ರದ ಜೀವಾಳ’ ಎಂದು ವಿವರಿಸಿದರು. ‘ಮೈಸೂರು ಎಂದರೆ ಅಪ್ಪಾಜಿಗೆ ಅಚ್ಚುಮೆಚ್ಚು. ನನಗೂ ಇಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವುದು ಎಂದರೆ ಸಡಗರ. ಈ ಊರಿಗೊಂದು ಪಾರಂಪರಿಕ ಗರಿಮೆ ಇದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಚಿತ್ರದ ನಿರ್ದೇಶಕ ಕೆ. ನರೇಂದ್ರ ಬಾಬು ಮಾತನಾಡಿ ‘ಪಾಲಳ್ಳಿ ಗ್ರಾಮದ ಸುತ್ತಮುತ್ತ ಶೇ 40ರಷ್ಟು ಚಿತ್ರೀಕರಣ ನಡೆಸಿದ್ದೇವೆ. ನನ್ನ ನಿರ್ದೇಶನದ ಎಂಟನೇ ಚಿತ್ರ ಇದಾಗಿದ್ದು, ವಿಭಿನ್ನ ಪರಿಕಲ್ಪನೆಯೊಂದಿಗೆ ಮೂಡಿಬಂದಿದೆ. ಈಗಾಗಲೇ ಚಿತ್ರದ ಟೀಸರ್, ಟ್ರೈಲರ್ ಹಾಗೂ ಹಾಡುಗಳನ್ನು ಕನ್ನಡದ ಪ್ರೇಕ್ಷಕರು ಮೆಚ್ಚಿದ್ದಾರೆ’ ಎಂದರು.

‘ಸೆ.15ರಂದು ರಾಜ್ಯದ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಆಗಲಿದೆ. ರಾಘಣ್ಣ, ಶ್ರುತಿ ಜೊತೆಗೆ ಪ್ರಮೋದ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ’ ಎಂದು ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಕೆ. ಸಂಪತ್‌ಕುಮಾರ್ ತಿಳಿಸಿದರು.

ಚಿತ್ರದ ನಿರ್ಮಾಪಕರಾದ ಮಂಜುನಾಥ್ ಗೌಡ, ಎಚ್.ಎಸ್. ಮಂಜುನಾಥ್, ಸಿ. ಕೇಶವ ಮೂರ್ತಿ, ಸಹ ನಿರ್ದೇಶಕ ಲಕ್ಷ್ಮಿ ದಿನೇಶ್, ಬಾಲನಟ ವೇದಾಂತ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.