ಮೈಸೂರು: ದಸರಾ ಉದ್ಘಾಟಕರಾದ ಎಸ್.ಎಂ.ಕೃಷ್ಣ ಅವರು ಬುಧವಾರ ಮೈಸೂರಿಗೆ ಬಂದಾಗ ಅದ್ದೂರಿ ಸ್ವಾಗತ ಲಭಿಸಿತು.

ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 3 ಕ್ಕೆ ಅವರು ಮೈಸೂರು ತಲುಪಿದರು. ಮೈಸೂರಿನ ಹೊರವಲಯದ ಕೊಲಂಬಿಯಾ ಏಷ್ಯಾ ಆಸ್ಪತ್ರೆ ವೃತ್ತದ ಬಳಿ ಜಿಲ್ಲಾಡಳಿತ ಹಾಗೂ ದಸರಾ ಸ್ವಾಗತ ಸಮಿತಿ ವತಿಯಿಂದ ಅವರನ್ನು ಬರಮಾಡಿಕೊಳ್ಳಲಾಯಿತು.

ಸಚಿವರಾದ ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್, ಶಾಸಕರಾದ ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪಂಚಾಯಿತಿ ಸಿಇಒ ಎ.ಎಂ.ಯೋಗೀಶ್, ಮೇಯರ್ ಸುನಂದಾ ಫಾಲನೇತ್ರ ಇದ್ದರು.

ಕಂಸಾಳೆ, ಡೊಳ್ಳುಕುಣಿತ, ಗಾರುಡಿ ಕುಣಿತದ ಕಲಾವಿದರು ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು.

ಚಾಮುಂಡಿ ಬೆಟ್ಟದಲ್ಲಿ ಗುರುವಾರ ಬೆಳಿಗ್ಗೆ 8.15 ರಿಂದ ದಸರಾ ಉದ್ಘಾಟನೆ ಸಮಾರಂಭ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.