ಮೈಸೂರು ಗ್ರಾಮಾಂತರ ವಲಯದ ಬಿಇಒ ಕಚೇರಿ ಹೊರತಂದಿರುವ ‘ಸಂಜೀವಿನಿ’ ಕೈಪಿಡಿ
ದಾನಿಗಳಿಂದ ಮುದ್ರಣ ವಿದ್ಯಾರ್ಥಿಗಳಿಗೆ ಇ–ಪ್ರತಿ ಎಲ್ಲರಿಗೂ ನೀಡಲು ಒತ್ತಾಯ
‘ಪುಸ್ತಕ ನೇರ ನೀಡಿದರೆ ಹೊರೆ’
‘ಎಲ್ಲ ಮಕ್ಕಳಿಗೆ ಪುಸ್ತಕ ನೀಡಿದರೆ ಅವರಿಗೆ ಅಭ್ಯಾಸ ಮಾಡಿಸುವುದು ಕಷ್ಟ. ಈಗಾಗಲೇ ಪಠ್ಯ ಬೋಧನೆಯನ್ನೂ ಮಾಡಲಾಗಿರುತ್ತದೆ. ಪುಸ್ತಕ ನೇರವಾಗಿ ನೀಡಿದರೆ ಹೊರೆಯಾಗುತ್ತದೆ. ಆದ್ದರಿಂದ ಶಿಕ್ಷಕರಿಗೆ ಮಾತ್ರ ಕೈಪಿಡಿ ನೀಡಿ ಅಭ್ಯಾಸ ಮಾಡಿಸಲಾಗುತ್ತದೆ. ಇಲಾಖೆಯ ಅನುದಾನದಿಂದ ಇವುಗಳನ್ನು ಮುದ್ರಿಸಿಲ್ಲ’ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಕೆ.ಪಾಂಡು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ಜಿಲ್ಲೆಯಲ್ಲಿ 40333 ಮಕ್ಕಳು ಮಾರ್ಚ್‌ನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದು ಕಲಿಕೆಯಲ್ಲಿ ಹಿಂದುಳಿದಿರುವ 9732 ಮಕ್ಕಳಿಗೆ ಕೈಪಿಡಿಯ ಸಹಾಯದಿಂದ ಅಭ್ಯಾಸ ಮಾಡಲಾಗುತ್ತಿದೆ. ಎಲ್ಲ ಶಿಕ್ಷಕರಿಗೂ ವಿಶೇಷ ಕಾಳಜಿ ವಹಿಸಲು ಸೂಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.