ಮೈಸೂರು: ವಸ್ತುಪ್ರದರ್ಶನ ಪ್ರಾಧಿಕಾರ ಆವರಣದಲ್ಲಿ ಆಯೋಜಿಸಿರುವ ದಸರಾ ವಸ್ತುಪ್ರದರ್ಶನ ಮೇಳವು ಸೋಮವಾರ ಸಂಜೆ ಭಾರಿ ಮಳೆ–ಗಾಳಿಯ ಕಾರಣಕ್ಕೆ ಒಂದು ದಿನದ ಮಟ್ಟಿಗೆ ಸ್ಥಗಿತಗೊಂಡಿತು.

ಸಂಜೆ 5.30ರ ಸುಮಾರಿಗೆ ವಸ್ತುಪ್ರದರ್ಶನದಲ್ಲಿನ ‘ಮಲ್ಲಿಗೆ ಇಡ್ಲಿ’ ಮಳಿಗೆಯು ಮಳೆಯ ಕಾರಣಕ್ಕೆ ಕುಸಿಯಿತು. ಇನ್ನೂ ಕೆಲವು ಶೆಡ್ಗಳು ಹಾನಿಗೆ ಒಳಗಾಗಿದ್ದು, ವಿದ್ಯುತ್ ತಂತಿಗಳು ತುಂಡಾದವು. ಮುಂಜಾಗ್ರತಾ ಕ್ರಮವಾಗಿ ಇಡೀ ಮೈದಾನದಲ್ಲಿನ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಯಿತು. ಅದಾಗಲೇ ಪ್ರದರ್ಶನಕ್ಕೆ ಸಾವಿರಾರು ಜನರು ಬಂದಿದ್ದರು. ಎಲ್ಲರನ್ನೂ ಹೊರಗೆ ಕಳುಹಿಸಲಾಯಿತು.

ಈ ಮೈದಾನವು ಹಿಂದೊಮ್ಮೆ ಕೆರೆಯಾಗಿದ್ದು, ತಗ್ಗು ಇರುವುದರಿಂದ ಅಪಾರ ಪ್ರಮಾಣದಲ್ಲಿ ಮಳೆ ನೀರು ನುಗ್ಗಿತ್ತು. ಇದರಿಂದ ಇಲ್ಲಿನ ವರ್ತಕರು ಹಾಗೂ ಮೇಳಕ್ಕೆ ಬಂದವರು ತೊಂದರೆ ಅನುಭವಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.