ಪಟಾಕಿ ಸಿಡಿದರೆ ಏನು ಮಾಡಬೇಕು?
-‘ಪಟಾಕಿ ಸಿಡಿದು ಕಣ್ಣಿನ ಭಾಗಕ್ಕೆ ಗಾಯವಾದರೆ ಹೆಚ್ಚು ಜಾಗ್ರತೆ ವಹಿಸಬೇಕು. ಕಣ್ಣು ಸೂಕ್ಷ್ಮವಾದ ಭಾಗವಾಗಿದ್ದು ಪಟಾಕಿ ಸಿಡಿಯುವಾಗ ಕಣ್ಣಿನೊಳಗೆ ಯಾವ ರೀತಿಯ ವಸ್ತು ಸೇರಿಕೊಂಡಿದೆ ಎಂಬುದು ತಿಳಿಯುವುದಿಲ್ಲ. ಹೀಗಾಗಿ ತಕ್ಷಣಕ್ಕೆ ಕೈಯಿಂದ ಉಜ್ಜಬಾರದು ಅದರಿಂದ ಗಾಯ ಉಲ್ಬಣವಾಗುತ್ತದೆ’ ಎಂದು ಕೆ.ಆರ್. ಆಸ್ಪತ್ರೆಯ ಕಣ್ಣಿನ ವಿಭಾಗದ ಮುಖ್ಯಸ್ಥ ಡಾ.ಮಧುಸೂದನ್ ತಿಳಿಸಿದರು. ‘ಪಟಾಕಿ ಸಿಡಿದರೆ ಕಣ್ಣನ್ನು ಸ್ವಚ್ಛವಾದ ನೀರಿನಿಂದ ತೊಳೆಯಬೇಕು. ಕಣ್ಣಿನ್ನು ಐ ಶೀಲ್ಡ್‌ನಿಂದ ಮುಚ್ಚುವುದು ಉತ್ತಮ. ಮಕ್ಕಳು ಪಟಾಕಿ ಸಿಡಿಸುವಾಗ ಹೆಚ್ಚು ಜಾಗರೂಕರಾಗಿರಬೇಕು. ದೊಡ್ಡ ಪ್ರಮಾಣದ ಪಟಾಕಿಗಳನ್ನು ಸಿಡಿಸಬಾರದು. ಹಸಿರು ಪಟಾಕಿ ಸಿಡಿಸುವುದಿದ್ದರೂ ಪೋಷಕರು ಜೊತೆಯಲ್ಲಿ ಇರಬೇಕು’ ಎಂದು ಸಲಹೆ ನೀಡಿದರು.