ಮೈಸೂರು:ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಇಲ್ಲಿನ ತಿಲಕ್‌ನಗರದಲ್ಲಿ ಶಿಥಿಲಗೊಂಡಿದ್ದ ಮನೆಯೊಂದು ಶುಕ್ರವಾರ ಬೆಳಿಗ್ಗೆ ಕುಸಿದಿದೆ. ಮನೆಯ ಹಿಂಭಾಗ ಸಿಲುಕಿದ್ದ ಐವರನ್ನು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ರಕ್ಷಿಸಿದ್ದಾರೆ.

ರಾತ್ರಿಯಿಡಿ ಜಿಟಿಜಿಟಿ ಮಳೆ ಸುರಿಯಿತು. ಬೆಳಿಗ್ಗೆ 5.30ರ ಸುಮಾರಿನಲ್ಲಿ ಮನೆಯು ಕುಸಿದು ಬಿದ್ದಿತು. ಸದ್ಯ ಈ ಮನೆಯಲ್ಲಿ ಯಾರೂ ವಾಸಿಸುತ್ತಿರಲಿಲ್ಲ. ಆದರೆ ಹಿಂಭಾಗದಲ್ಲಿ ವಾಸವಿದ್ದವರು ಹೊರಗೆ ಬರಲಾಗದೆ ಪರದಾಡಿದರು. ಸ್ಥಳಕ್ಕೆ ಬಂದ ಪಾಲಿಕೆಯ ಅಭಯ್ ರಕ್ಷಣಾ ಪಡೆ ಹಾಗೂ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಸಿಬ್ಬಂದಿ ನಿವಾಸಿಗಳನ್ನು ರಕ್ಷಿಸಿದರು.

ಮರಗಳು ಧರೆಗೆ:ಶುಕ್ರವಾರ ಬೆಳ್ಳಂಬೆಳಿಗ್ಗೆಯೇ ಮರಗಳು ಧರೆಗೆ ಉರುಳುತ್ತಿವೆ. ಇಲ್ಲಿನ ಬೃಂದಾವನ ಬಡಾವಣೆಯಲ್ಲಿ ಬೃಹತ್ ಗಾತ್ರದ ಮರವೊಂದು ಕಾರಿನ ಮೇಲೆ ಉರುಳಿ ಬಿದ್ದಿವೆ. ಹೊಸ ಜಿಲ್ಲಾಧಿಕಾರಿ ಸಮೀಪ ಎರಡು ಮರಗಳು ಬುಡ ಮೇಲಾಗಿವೆ. ನಗರದಲ್ಲಿ ದಟ್ಟ ಮೋಡ ಕವಿದ ವಾತಾವರಣ ಇದ್ದು, ಹವಾಮಾನ ಇಲಾಖೆ ಭಾರಿ ಮಳೆಯ ಮುನ್ಸೂಚನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.