ಹುಣಸೂರು: ಇಲ್ಲಿನ ಎಸ್.ಎಸ್. ಸಾಮಿಲ್ ನಲ್ಲಿ ಜೂ. 22ರಂದು ನಡೆದಿದ್ದ ಜೋಡಿ ಕೊಲೆ ಪ್ರಕರಣದ ಆರೋಪಿ ಅಭಿಷೇಕ್ (23) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳಿಗಾಗಿ ಶೋಧ ನಡೆದಿದೆ.

ಹುಣಸೂರಿನ ಸರಸ್ವತಿಪುರಂ ಬಡಾವಣೆಯ ನಿವಾಸಿಯಾದ ಅಭಿಷೇಕ್ ಮತ್ತು ಸಹಚರರು ಸಾಮಿಲ್ ನ ಕಾವಲುಗಾರ ವೆಂಕಟೇಶ (65) ಹಾಗೂ ಮಾನಸಿಕ ಅಸ್ವಸ್ಥ ಷಣ್ಮುಗಂ (60) ಎಂಬುವರನ್ನು ಹಣಕ್ಕಾಗಿ ಹತ್ಯೆ ಮಾಡಿದ್ದರು. ಈ ವೇಳೆ ಹಂತಕರಿಗೆ ಕೇವಲ 488 ರೂಪಾಯಿ ಹಣ ಮಾತ್ರ ಸಿಕ್ಕಿತ್ತು.

ಈ ಹಣದೊಂದಿಗೆ ಆರೋಪಿಯನ್ನು ಹುಣಸೂರು ಸರ್ಕಲ್ ಇನ್ ಸ್ಪೆಕ್ಟರ್ ದೇವೇಂದ್ರ ನೇತೃತ್ವದ ತಂಡವು ಹತ್ಯೆ ನಡೆದ 36 ಗಂಟೆಗಳ ಒಳಗೆ ಬಂಧಿಸಿದೆ.

ಆರೋಪಿ ಅಭಿಷೇಕ್ ಈ ಹಿಂದೆ ಹುಣಸೂರು ಠಾಣೆ ವ್ಯಾಪ್ತಿಯಲ್ಲಿ ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.