ಮೈಸೂರು: 'ಅಬಕಾರಿ ಇಲಾಖೆಯಲ್ಲಿ ಒಂದೇ ಒಂದು ಪೈಸೆ ಭ್ರಷ್ಟಾಚಾರ ಮಾಡಿದ್ದರೆ ನಾನು ರಾಜಕೀಯ ಬಿಡುತ್ತೇನೆ. ನಮ್ಮ ವಿರುದ್ಧ ಆರೋಪ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಬಿಡುತ್ತಾರೆಯೇ?' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.
.₹443.64 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ.
ಇಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ಬಿಜೆಪಿಯವರು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಪ್ರಧಾನಿಯೂ ಅದನ್ನೇ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್-19 ವೇಳೆ ನಡೆದ ಭ್ರಷ್ಟಾಚಾರದ ಬಗ್ಗೆ ಪ್ರಧಾನಿ ಏನು ಹೇಳುತ್ತಾರೆ?'ಎಂದು ಕೇಳಿದರು.

ಪ್ರಧಾನಿ ಮೋದಿಗೆ ಕರ್ನಾಟಕ ಮತ್ತು ಸಿದ್ದರಾಮಯ್ಯ ಟಾರ್ಗೆಟ್. ಕರ್ನಾಟಕ ಅತಿ ದೊಡ್ಡ ರಾಜ್ಯ. ಇಲ್ಲಿ ನಾವು 136 ಸ್ಥಾನ ಗೆದ್ದಿದ್ದೇವೆ. ಹೀಗಾಗಿ ನಮ್ಮನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ನಮ್ಮಲ್ಲಿ ಯಾವ ಭ್ರಷ್ಟಾಚಾರವೂ ಇಲ್ಲ. ಭ್ರಷ್ಟಾಚಾರ ನಡೆಯುವುದಕ್ಕೂ ಬಿಡುವುದಿಲ್ಲ ಎಂದರು.
.ಕೋವಿಡ್ ಅವ್ಯವಹಾರ | ಉಪಸಮಿತಿ ವರದಿ ಬಳಿಕ ಸತ್ಯ ಬಹಿರಂಗ: ಸಿಎಂ ಸಿದ್ದರಾಮಯ್ಯ.
ಕುಮಾರಸ್ವಾಮಿ ಅವರನ್ನು ಸಚಿವ ಜಮೀರ್ ಅಹಮದ್ ಅವರು ಕರಿಯ ಎಂದು ಕರೆದಿರುವುದನ್ನು ಸಮರ್ಥಿಸಿಕೊಂಡ ಸಿದ್ದರಾಮಯ್ಯ, ದೇವೇಗೌಡರು ಸಿದ್ದರಾಮಯ್ಯ ಸೊಕ್ಕು ಮುರಿಯುತ್ತೇನೆ; ಗರ್ವಭಂಗ ಮಾಡುತ್ತೇನೆ ಎಂದು ಹೇಳಿದ್ದು ಸರಿನಾ?

ಜಮೀರ್ ಮತ್ತು ಕುಮಾರಸ್ವಾಮಿ ಸ್ನೇಹಿತರು. ಅವರವರ ನಡುವೆ ಏನೇನೋ ನಡೆಯುತ್ತಿರುತ್ತದೆ. ಆ ವಿಚಾರವಾಗಿ ಜಮೀರ್ ಈಗಾಗಲೇ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಇದೆಲ್ಲವೂ ಉಪಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಪ್ರತಿಕ್ರಿಯಿಸಿದರು.
.ರಾಜಕೀಯ ವ್ಯವಸ್ಥೆಯನ್ನೇ ಭ್ರಷ್ಟ ಮಾಡಿದ ಪ್ರಧಾನಿ ಮೋದಿ: ಯತೀಂದ್ರ ಸಿದ್ದರಾಮಯ್ಯ.
ಬಂಡೀಪುರದಲ್ಲಿ ರಾತ್ರಿ ವಾಹನಗಳ ಸಂಚಾರ ನಿಷೇಧ ತೆಗೆಯುವ ವಿಚಾರವಾಗಿ ಪ್ರಸ್ತಾವವಿಲ್ಲ. ಮಾತುಕತೆಯೂ ಆಗಿಲ್ಲ. ಡಿಸಿಎಂ ಡಿ.ಕೆ. ಶಿವಕುಮಾರ್ ಯಾವ ಅರ್ಥದಲ್ಲಿ ಆ ಬಗ್ಗೆ ಹೇಳಿಕೆ ನೀಡಿದ್ದಾರೆಯೋ ಗೊತ್ತಿಲ್ಲ, ಹೆಚ್ಚಿನ ಮಾಹಿತಿ ಅವರನ್ನೇ ಕೇಳಿ ಎಂದರು.

ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿ ಕೊಡುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆ ಬಗ್ಗೆ ಕೆಲವರು ಕೇಳಿದ್ದಾರೆ, ಮನವಿಯನ್ನೂ ಕೊಟ್ಟಿದ್ದಾರೆ. ಆದರೆ ಈ ಬಗ್ಗೆ ಯಾವ ಚಿಂತನೆಯೂ ನಡೆದಿಲ್ಲ. ಬಿಜೆಪಿಯವರು ಸುಮ್ಮನೆ ಕೋಮುವಾದದ ಕಾರಣದಿಂದ ವಿವಾದ ಮಾಡುತ್ತಿದೆ. ಅವರಿಗೆ ಶಾಂತಿ, ಸೌಹಾರ್ದ ಕಡೆಸುವುದೇ ಕೆಲಸ. ಹೀಗಾಗಿ ಇದು ವಿವಾದವಾಗುತ್ತಿದೆ ಅಷ್ಟೇ ಎಂದರು.
.ಒಕ್ಕಲಿಗ ನಾಯಕರನ್ನು ಮುಗಿಸಿದ ಗೌಡರು: ಮುಖ್ಯಮಂತ್ರಿ ಸಿದ್ದರಾಮಯ್ಯ .
ಮುಡಾ ಪ್ರಕರಣದಲ್ಲಿ ಇ.ಡಿ. ತನಿಖೆ ನಡೆಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಇ.ಡಿ.ಯವರು ಅವರ ಕೆಲಸ ಮಾಡುತ್ತಿದ್ದಾರೆ. ನಾನು ಆ ಬಗ್ಗೆ ಪ್ರತಿಕ್ರಿಯೆ ಕೊಡುವುದಿಲ್ಲ. ಅವರು ಯಾರನ್ನಾದರೂ ಕರೆಸಲಿ, ವಿಚಾರಣೆ ನಡೆಸಲಿ; ಅದು ಅವರ ತನಿಖಾ ಕ್ರಮ. ಇ.ಡಿ. ಲೋಕಾಯುಕ್ತದ ತನಿಖೆಗಳು ಸುಳ್ಳು ಕೇಸಿನ ಮೇಲೆ ನಡೆಯುತ್ತಿವೆ. ಅದರ ಬಗ್ಗೆ ನಾನೇಕೆ ಪ್ರತಿಕ್ರಿಯೆ ಕೊಡಲಿ ಎಂದು ಪ್ರಶ್ನಿಸಿದರು.

ನಿಮ್ಮ ಪತ್ನಿಗೆ ಇ.ಡಿ ನೋಟಿಸ್ ಬಂದಿದ್ಯಾ ಎಂಬ ಪ್ರಶ್ನೆಗೆ ಗರಂ ಅದ ಅವರು, ನಿಮಗೆ ಏನಾದರೂ ಹೇಳಿದ್ದಾರಾ? ನೋಟಿಸ್ ಕೊಡಲಿ ಎಂಬ ಬಯಕೆಯೇ ನಿಮಗೆ ಎಂದು ಗರಂ ಆದರು.

ಸಚಿವ ಸಂಪುಟ ಪುನಾರಚನೆ ಏನೂ ಇಲ್ಲ. ಬಿ.ನಾಗೇಂದ್ರ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಕೇಳಿದ್ದಾರೆ. ಉಪಚುನಾವಣೆ ಬಳಿಕ ನೋಡೋಣ ಎಂದು ಹೇಳಿದ್ದೇನೆ. ಅದನ್ನೇ ಪುನಾರಚನೆ ಎಂದು ಹೇಳಬೇಡಿ. ಅಂತಹ ಪ್ರಸ್ತಾವ ಇಲ್ಲ ಎಂದರು.

ಮಾಧ್ಯಮದವರ ಜೊತೆ ಮಾತಾಡುವಾಗ ಗದ್ದಲ ಮಾಡಿದವರ ಮೇಲೆ ಮುಖ್ಯಮಂತ್ರಿ ಕೈ ಎತ್ತಿ ಹೊಡೆಯಲು ಮುಂದಾದರು. ಕಾರ್ಯಕರ್ತ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದಾಗ, ಏರು ಧ್ವನಿಯಲ್ಲಿ ಗದರಿದರು.
.ಕೋವಿಡ್ ಅಕ್ರಮ | ವರದಿ ಕೈಸೇರಿದ ಬಳಿಕ ತನಿಖೆ ನಿರ್ಧಾರ: ಸಿಎಂ ಸಿದ್ದರಾಮಯ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.