ಪೊಲೀಸರೆಂದರೆ ಖಾಕಿ ಧರಿಸಿ ಜನಸೇವೆ ಮಾಡುವುದರಲ್ಲೇ ಮುಳುಗಬೇಕೆಂದಿಲ್ಲ. ಅರಿವು ಮೂಡಿಸುವುದೂ ಜನಸೇವೆಯೇ ಎಂದು ಭಾವಿಸಿದ ಐಜಿಪಿ ಡಿ.ರೂಪಾ ಫ್ಯಾಷನ್ ಉಡುಗೆ ಧರಿಸಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಆ ಮೂಲಕ ಮಹಿಳಾ ಸಬಲೀಕರಣಕ್ಕೆ ತಮ್ಮ ಕಾಣಿಕೆಯನ್ನೂ ನೀಡಿದ್ದಾರೆ.

ಡಿ.ರೂಪಾ ಅವರು ದಿಟ್ಟ ಪೊಲೀಸ್ ಅಧಿಕಾರಿಯಾಗಿ ಹೆಸರು ಮಾಡಿದವರು. ರಾಜ್ಯದ 5 ಜಿಲ್ಲೆಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಕೇಂದ್ರ ಕಾರಾಗೃಹದ ಡಿಐಜಿಯಾಗಿ ದಿಟ್ಟತನ ತೋರಿ, ಇದೀಗ ಐಜಿಪಿಯಾಗಿ ಗಮನ ಸೆಳೆಯುತ್ತಿರುವವರು. ಮಹಿಳಾ ಸಬಲೀಕರಣ ರೂಪಾ ಅವರ ಆಶಯ. ಇದಕ್ಕಾಗಿ ಇವರು ಸಾಕಷ್ಟು ದುಡಿದಿದ್ದಾರೆ ಸಹ. ಅನೇಕ ವೇದಿಕೆಗಳಲ್ಲಿ ಮಹಿಳೆಯರನ್ನು ಪ್ರೋತ್ಸಾಹಿಸಿದ್ದಾರೆ. ಇದೇ ಆಶಯವನ್ನು ಇರಿಸಿಕೊಂಡು ಇವರು ಇದೀಗ ಫೋಟ್ಶೂಟ್ ನಡೆಸಿದ್ದಾರೆ.

ಪ್ರಸಿದ್ಧ ವಸ್ತ್ರವಿನ್ಯಾಸಕಿ, ‘ಸಮುದ್ರಿಕಾ ಡಿಸೈನರ್ ಸ್ಟುಡಿಯೋ’ದ ಮೀನೂ ಸರವಣನ್ ಇದೇ ರೀತಿಯ ಜಾಗೃತಿ ಕಾರ್ಯದಲ್ಲಿ ತೊಡಗಿದ್ದವರು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಮಹಿಳೆಯರನ್ನು ಸಂಪರ್ಕಿಸಿ ಅವರಿಂದ ಫೋಟೊಶೂಟ್ ಮಾಡಿಸಿದವರು. ಐಜಿಪಿಯಾಗಿರುವ ರೂಪಾ ಅವರನ್ನೂ ಸಂಪರ್ಕಿಸಿ ಪೋಸ್ ಕೊಡುವಿರಾ ಎಂದು ಕೇಳಿದಾಗ ರೂಪಾ ಸಂತಸದಿಂದಲೇ ಒಪ್ಪಿದರು.

‘ಫೋಟೊಶೂಟ್ ಮಾಡಲು ಮಾಡೆಲ್ (ರೂಪದರ್ಶಿ) ಆಗಿರಲೇಬೇಕು ಎಂದೇನಿಲ್ಲ. ಎಲ್ಲ ಮಹಿಳೆಯರೂ ಕ್ಯಾಮೆರಾಗೆ ಪೋಸ್ ನೀಡಬಲ್ಲರು. ಅದೂ ಅಲ್ಲದೇ, ಮಹಿಳಾ ಸಬಲೀಕರಣಕ್ಕಾಗಿ ಈ ಫೋಟೊಗಳನ್ನು ಬಳಸಿಕೊಳ್ಳಲಾಗುತ್ತದೆ ಎಂದು ಮೀನೂ ಹೇಳಿದಾಗ ಸಂತೋಷದಿಂದ ಒಪ್ಪಿಕೊಂಡೆ’ ಎಂದು ರೂಪಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ನಾನೇನು ರ್ಯಾಂಪ್ ವಾಕ್ ಮಾಡಿಲ್ಲ. ಜಾಗೃತಿ ಮೂಡಿಸಲು ನನ್ನದು ಅಳಿಲು ಸೇವೆಯಷ್ಟೇ. ಅದೂ ಅಲ್ಲದೇ, ಈ ಫೋಟೊಗಳನ್ನು ಮಹಿಳಾ ಸಬಲೀಕರಣಕ್ಕೆ ಬಳಸಿಕೊಳ್ಳುತ್ತಿರುವುದು ಮೆಚ್ಚುಗೆಯ ವಿಚಾರ. ಮಹಿಳೆಯಾಗಿರುವುದು ಹೆಮ್ಮೆಯ ಸಂಗತಿ; ಮಹಿಳಾತನವನ್ನು ಸಂಭ್ರಮಿಸಬೇಕು. ಆತ್ಮನಂಬಿಕೆ ಹಾಗೂ ಹುಮ್ಮಸ್ಸಿನಿಂದ ಸಾಧನೆಯತ್ತ ಮಹಿಳೆಯರು ಮುಖ ಮಾಡಬೇಕು’ ಎನ್ನುತ್ತಾರೆ ರೂಪಾ.

ಮಹಿಳಾ ಸಾಧಕಿಯರನ್ನು ಗುರುತಿಸಿ ಅವರಿಂದ ಫೋಟೊ ಶೂಟ್ ಮಾಡಿಸಿದೆ. ಆ ಮೂಲಕ ಮಹಿಳಾ ಸಬಲೀಕರಣ ಜಾಗೃತಿಗೂ ಮುಂದಾದೆ ಎಂದರು ವಸ್ತ್ರವಿನ್ಯಾಸಕಿ ಮೀನೂ ಸರವಣನ್.

ಮಹಿಳಾ ಸಬಲೀಕರಣ ನನ್ನಿಷ್ಟದ ಕ್ಷೇತ್ರ. ಅದಕ್ಕಾಗಿ ಈ ಫೋಟೊಶೂಟ್. ಮಹಿಳೆಯರು ಧೈರ್ಯದಿಂದ ಸಮಾಜದಲ್ಲಿ ಬದುಕಬೇಕು ಎನ್ನುವುದು ನನ್ನ ಆಶಯ
– ಡಿ.ರೂಪಾ, ಐಜಿಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.