ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಚಿವ ಮಹದೇವಪ್ಪ ಸಹೋದರನ ಪುತ್ರನಿಗೂ ಮುಡಾ ನಿವೇಶನ

Published : 8 ಆಗಸ್ಟ್ 2024, 23:33 IST
Last Updated : 8 ಆಗಸ್ಟ್ 2024, 23:33 IST
ಫಾಲೋ ಮಾಡಿ
Comments

ಮೈಸೂರು: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ತಮಗೆ ಮುಡಾದಿಂದ ಮಂಜೂರಾದ ಬದಲಿ ನಿವೇಶನವನ್ನು ಎರಡೇ ತಿಂಗಳಲ್ಲಿ ಸಮಾಜ ಕಲ್ಯಾಣ ಸಚಿವ ಎಚ್‌.ಸಿ. ಮಹದೇವಪ್ಪ ಸಹೋದರನ ಪುತ್ರ ನವೀನ್‌ ಬೋಸ್ ಹೆಸರಿಗೆ ನೋಂದಣಿ ಮಾಡಿಕೊಟ್ಟಿದ್ದು, ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರಿನ ಡಾಲರ್ಸ್‌ ಕಾಲೊನಿ ನಿವಾಸಿ ಎನ್. ಮಂಜುನಾಥ್ ತಮಗೆ ಮುಡಾದಿಂದ ವಿಜಯನಗರ ನಾಲ್ಕನೇ ಹಂತದ ಎರಡನೇ ಫೇಸ್‌ನಲ್ಲಿ ಮಂಜೂರಾಗಿದ್ದ 15X24 ಚದರ ಮೀಟರ್ ಅಳತೆಯ ನಿವೇಶನವನ್ನು 2023ರ ಜೂನ್‌ 7ರಂದು ‘ಸೆಟ್ಲ್‌ಮೆಂಟ್ ಡೀಡ್‌’ ಹೆಸರಿನಲ್ಲಿ ನವೀನ್‌ ಬೋಸ್ ಅವರಿಗೆ ಮಾಡಿಕೊಟ್ಟಿದ್ದಾರೆ. ಅದಕ್ಕೆ ₹5.51 ಲಕ್ಷ ಶುಲ್ಕ ಪಾವತಿಸಿದ್ದು, ನಿವೇಶನದ ಖರೀದಿ ಮೌಲ್ಯವನ್ನು ಉಲ್ಲೇಖಿಸಿಲ್ಲ

ರಿಯಲ್‌ ಎಸ್ಟೇಟ್ ಉದ್ಯಮಿಯಾದ ಮಂಜುನಾಥ್‌ ಅವರಿಗೆ ಮುಡಾ ನ್ಯಾಯಾಲಯದ ಆದೇಶದಂತೆ ಸುಮಾರು 24 ಬದಲಿ ನಿವೇಶನಗಳನ್ನು 2023ರ ಏಪ್ರಿಲ್‌ನಲ್ಲಿ ನೋಂದಣಿ ಮಾಡಿಕೊಟ್ಟಿತ್ತು. ಅದರಲ್ಲಿ ಒಂದು ನಿವೇಶನವನ್ನು ಮಂಜುನಾಥ್‌, ನವೀನ್‌ ಅವರಿಗೆ ನೀಡಿದ್ದಾರೆ.

‘ಯಾವ ಉದ್ದೇಶದಿಂದ ನವೀನ್‌ ಅವರಿಗೆ ಮಂಜುನಾಥ್‌ ಈ ನಿವೇಶನವನ್ನು ಉಚಿತವಾಗಿ ಕೊಟ್ಟಿದ್ದಾರೆ. ಅವರಿಬ್ಬರ ನಡುವಿನ ಒಪ್ಪಂದವೇನು? ಬದಲಿ ನಿವೇಶನವನ್ನು ಅಷ್ಟು ತರಾತುರಿಯಲ್ಲಿ ನೋಂದಣಿ ಮಾಡಿಕೊಟ್ಟಿರುವುದು ಏಕೆ ಎಂಬುದಕ್ಕೆ ಸಚಿವರು ಉತ್ತರ ನೀಡಬೇಕು’ ಎಂದು ಒತ್ತಾಯಿಸುತ್ತಾರೆ ಆರ್‌ಟಿಐ ಕಾರ್ಯಕರ್ತ ಗಂಗರಾಜು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT