ಪ್ರಜಾವಾಣಿ ವಾರ್ತೆ

ಮೈಸೂರು: ‘ಪತಂಗಗಳ ರಕ್ಷಣೆ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುದು ಅತ್ಯಗತ್ಯ’ ಎಂದು ಮೈಸೂರು ವಿಭಾಗ ಅಂಚೆ ಅಧೀಕ್ಷಕಿ ಏಂಜಲ್ ರಾಜ್ ಹೇಳಿದರು.

ಮೈಸೂರು ಸೈನ್ಸ್ ಫೌಂಡೇಶನ್, ಅರಣ್ಯ ಔಟ್ ರೀಚ್, ಮೈಸೂರು ಅಂಚೆ ವಿಭಾಗದಿಂದ ರಾಷ್ಟ್ರೀಯ ಪತಂಗ ಸಪ್ತಾಹ ಪ್ರಯುಕ್ತ ಹಮ್ಮಿಕೊಂಡಿರುವ ರಾಜ್ಯಮಟ್ಟದ ಪೋಸ್ಟ್ ಕಾರ್ಡ್ ಚಿತ್ರ ರಚನೆ ಸ್ಪರ್ಧೆಗೆ ಇಲ್ಲಿನ ಅಶೋಕ ರಸ್ತೆಯ ಪ್ರಧಾನ ಅಂಚೆ ಕಚೇರಿಯಲ್ಲಿ ಗುರುವಾರ ಪೋಸ್ಟರ್ ಬಿಡುಗಡೆ ಮೂಲಕ ಚಾಲನೆ ನೀಡಿ ಮಾತನಾಡಿದರು.

‘ಚಿತ್ರಕಲೆ ಮೂಲಕ ಪತಂಗಗಳ ಸೌಂದರ್ಯ, ಪ್ರಪಂಚದಲ್ಲಿ ಅದರ ಅಗತ್ಯವನ್ನು ಭವಿಷ್ಯದ ಪ್ರಜೆಗಳಲ್ಲಿ ಮನದಟ್ಟು ಮಾಡುವುದು ಈ ಯೋಜನೆಯ ಉದ್ದೇಶ’ ಎಂದರು.

‘ಕಳೆದ ಎರಡು ವರ್ಷಗಳಿಂದ ಸ್ಪರ್ಧೆ ನಡೆಸುತ್ತಿದ್ದು, ಮಕ್ಕಳು ಪೋಸ್ಟ್ ಕಾರ್ಡ್ನಲ್ಲಿ ಪತಂಗದ ಚಿತ್ರಗಳನ್ನು ಬರೆದು ಕಳುಹಿಸುತ್ತಿದ್ದಾರೆ. ಮೂವರು ವಿಜೇತರಿಗೆ ನಗದು ಬಹುಮಾನ ಲಭ್ಯವಿದ್ದು, ಅತ್ಯುತ್ತಮ ಚಿತ್ರವು ಪೋಸ್ಟಲ್ ಸ್ಟ್ಯಾಂಪ್ ಆಗಿ ಬಿಡುಗಡೆಗೊಳ್ಳಲಿದೆ. ಭಾಗವಹಿಸಿದ ಎಲ್ಲಿಗೂ ಪ್ರಮಾಣ ಪತ್ರ ಲಭ್ಯವಿದೆ’ ಎಂದು ಹೇಳಿದರು.

ಮೈಸೂರು ಸೈನ್ಸ್ ಫೌಂಡೇಶನ್ ಕಾರ್ಯದರ್ಶಿ ಜಿ.ಬಿ.ಸಂತೋಷ್ಕುಮಾರ್ ಮಾತನಾಡಿ, ‘ಕಳೆದ ವರ್ಷ 2,500 ಪೋಸ್ಟ್ ಕಾರ್ಡ್ಗಳು ಬಂದಿದ್ದವು. ವಿವಿಧ ರಾಜ್ಯದಿಂದಲೂ ಕಳುಹಿಸಿದ್ದರು. ಈ ಬಾರಿಯೂ ಅದೇ ಉತ್ಸಾಹವನ್ನು ನಿರೀಕ್ಷಿಸಿದ್ದೇವೆ’ ಎಂದರು.

ಕಚೇರಿ ಅಂಚೆ ಪಾಲಕ ವಿ.ಎಲ್.ನವೀನ್, ಫೌಂಡೇಶನ್ ಅಧ್ಯಕ್ಷ ಸಿ.ಕೃಷ್ಣೇಗೌಡ, ಜೆಎಸ್ಎಸ್ ವೈದ್ಯಕೀಯ ಕಾಲೇಜಿನ ಪ್ರೊ. ಎನ್.ಎಂ.ಶಾಮಸುಂದರ್, ಪರಿಸರವಾದಿ ಸಪ್ತ ಗಿರೀಶ್ ಭಾಗವಹಿಸಿದ್ದರು.

Cut-off box - ಸ್ಪರ್ಧೆಯ ಮಾಹಿತಿ ಪ್ರೈಮರಿಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಅಂಚೆ ಇಲಾಖೆಯ ‘ಇಂಡಿಯಾ ಪೋಸ್ಟ್’ ಎಂಬ ಕಾರ್ಡ್ ಅನ್ನು ಮಾತ್ರ ಬಳಸಿ ಅದರ ಒಂದು ಬದಿಯಲ್ಲಿ ಪತಂಗವನ್ನು ಥೀಮ್ ಆಗಿ ಇರಿಸಿಕೊಂಡು ಚಿತ್ರ ರಚನೆ ಮಾಡಬೇಕು. ವಿಳಾಸದಲ್ಲಿ– ಜಿ.ಬಿ.ಸಂತೋಷ್ಕುಮಾರ್ #621 ಸಂಗೀತಾ ಸಾತಗಳ್ಳಿ ಶಕ್ತಿನಗರ ಪೋಸ್ಟ್ ಮೈಸೂರು 570029 ಇಲ್ಲಿಗೆ ಜುಲೈ 15ರೊಳಗೆ ತಲುಪಿಸಬೇಕು. ಮಾಹಿತಿಗೆ https://bit.ly/4aPBaKK ವಾಟ್ಸ್ಆ್ಯಪ್ ಲಿಂಕ್ ಅಥವಾ ಮೊ.ಸಂ.81055 03863 ಸಂಪರ್ಕಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.