ಸಿದ್ದರಾಮಯ್ಯ ಹಿತಶತ್ರುಗಳ ಮಾತು ಕೇಳಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಕಾನೂನು ಸಲಹೆಗಾರರು ಸೂಕ್ತ ಸಲಹೆ ನೀಡಿಲ್ಲ. ಆರಂಭದಲ್ಲೇ 14 ನಿವೇಶನಗಳನ್ನು ಹಿಂತಿರುಗಿಸಿ ಮುಡಾ ಆಯುಕ್ತರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕಿತ್ತು
ಟಿ.ಎಸ್. ಶ್ರೀವತ್ಸ ಬಿಜೆಪಿ ಶಾಸಕ
ನಿವೇಶನಗಳನ್ನು ಹಿಂತಿರುಗಿಸುವಂತೆ ಆರಂಭದಲ್ಲೇ ಸಲಹೆ ನೀಡಿದ್ದೆ. ಬುದ್ಧಿ ಹೇಳುವವರಿಗಿಂತ ಅವರ ಸುತ್ತ ಕುಳಿತಿರುವ ಕೆಟ್ಟ ಸಲಹೆಗಾರರ ಕೈ ಮೇಲಾಗಿದೆ. ಕಾನೂನು ಓದಿದವರು ಕಾನೂನಿಗೆ ಬಗ್ಗಬೇಕು. ರಂಪ ಮಾಡಿಕೊಳ್ಳಬಾರದು
ಎಚ್. ವಿಶ್ವನಾಥ್ ವಿಧಾನ ಪರಿಷತ್ ಸದಸ್ಯ
ಸ್ವಗ್ರಾಮದಲ್ಲಿ ಬೇಸರದ ಛಾಯೆ
ಮೈಸೂರು: ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ್ದಕ್ಕೆ ಅವರ ಸ್ವಗ್ರಾಮವಾದ ಸಿದ್ದರಾಮನಹುಂಡಿಯಲ್ಲಿ ಬೇಸರದ ಛಾಯೆ ಆವರಿಸಿದೆ. ಹಳ್ಳಿಕಟ್ಟೆಗಳಲ್ಲಿ ಮನೆ ಮುಂದಿನ ಜಗಲಿಗಳಲ್ಲಿ ಸದ್ಯ ಈ ರಾಜಕೀಯದ ಚರ್ಚೆಯೇ ಜೋರಾಗಿದೆ. ‘ಸಾಹೇಬರು ಐದು ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಈಗಲೂ ನಂಬಿದ್ದೇವೆ. ಬಿಜೆಪಿ–ಜೆಡಿಎಸ್ ಕುತಂತ್ರದಿಂದ ಈ ಪರಿಸ್ಥಿತಿ ಬಂದಿದೆ. ಆದರೆ ಅವರಂತಹ ಪ್ರಾಮಾಣಿಕ ರಾಜಕಾರಣಿ ಇನ್ನೊಬ್ಬರಿಲ್ಲ. ಯಾವ ಕಾರಣಕ್ಕೂ ರಾಜೀನಾಮೆ ನೀಡದೇ ಎಲ್ಲವನ್ನೂ ಧೈರ್ಯದಿಂದ ಕಾನೂನಿನ ಬಲದಿಂದ ಎದುರಿಸಬೇಕು’ ಎಂದು ಗ್ರಾಮಸ್ಥರು ಹೇಳುತ್ತಾರೆ.