ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ಮುಡಾ ಪ್ರಕರಣ: ಲೋಕಾಯುಕ್ತ ವಿಚಾರಣೆ ಎದುರಿಸಿದ ಸಿಎಂ ಸಿದ್ದರಾಮಯ್ಯ

ತವರು ಮೈಸೂರಿನಲ್ಲಿ ಎರಡು ತಾಸು ವಿಚಾರಣೆಗೊಳಗಾದ ಸಿದ್ದರಾಮಯ್ಯ
Published : 6 ನವೆಂಬರ್ 2024, 23:43 IST
Last Updated : 6 ನವೆಂಬರ್ 2024, 23:43 IST
ಫಾಲೋ ಮಾಡಿ
Comments
ಮೈಸೂರಿನ ಲೋಕಾಯುಕ್ತ ಎಸ್.‍‍ಪಿ. ಕಚೇರಿ ಎದುರು ಪೊಲೀಸ್ ಬಂದೋಬಸ್ತ್‌ ಮಾಡಲಾಗಿತ್ತು– ಪ್ರಜಾವಾಣಿ ಚಿತ್ರ
ಮೈಸೂರಿನ ಲೋಕಾಯುಕ್ತ ಎಸ್.‍‍ಪಿ. ಕಚೇರಿ ಎದುರು ಪೊಲೀಸ್ ಬಂದೋಬಸ್ತ್‌ ಮಾಡಲಾಗಿತ್ತು– ಪ್ರಜಾವಾಣಿ ಚಿತ್ರ
ಹೇಗಿತ್ತು ಸಿದ್ದರಾಮಯ್ಯ ದಿನಚರಿ? ಬೆಳಿಗ್ಗೆ 7.30: ಬೆಂಗಳೂರಿನ ನಿವಾಸದಿಂದ ಮೈಸೂರಿಗೆ ಪ್ರಯಾಣ ಬೆಳಿಗ್ಗೆ 9.30: ಮೈಸೂರಿನ ಸರ್ಕಾರಿ ಅತಿಥಿಗೃಹಕ್ಕೆ ಸಿದ್ದರಾಮಯ್ಯ ಭೇಟಿ; ಉಪಾಹಾರ ಸೇವನೆ ಬೆಳಿಗ್ಗೆ 10.05: ಬೆಂಗಾವಲು ವಾಹನವಿಲ್ಲದೆ ಖಾಸಗಿ ಕಾರಿನಲ್ಲಿ ಲೋಕಾಯುಕ್ತ ಕಚೇರಿಯತ್ತ ಪ್ರಯಾಣ ಬೆಳಿಗ್ಗೆ 10.10: ಲೋಕಾಯುಕ್ತ ಕಚೇರಿಗೆ ಬಂದ ಮುಖ್ಯಮಂತ್ರಿ ಮಧ್ಯಾಹ್ನ 12.07: ವಿಚಾರಣೆ ಪೂರ್ಣ; ಲೋಕಾಯುಕ್ತ ಕಚೇರಿಯಿಂದ ನಿರ್ಗಮನ ಮಧ್ಯಾಹ್ನ 12.45: ಸರ್ಕಾರಿ ಅತಿಥಿಗೃಹದಿಂದ ಚನ್ನಪಟ್ಟಣದತ್ತ ಪ್ರಯಾಣ
ಮತ್ತೆ ವಿಚಾರಣೆ ಸಾಧ್ಯತೆ
‘ಪ್ರಕರಣದ ನಾಲ್ವರು ಆರೋಪಿಗಳಾದ ಸಿದ್ದರಾಮಯ್ಯ ಬಿ.ಎಂ. ಪಾರ್ವತಿ ಮಲ್ಲಿಕಾರ್ಜುನಸ್ವಾಮಿ ಹಾಗೂ ದೇವರಾಜು ಅವರ ವಿಚಾರಣೆ ಮುಗಿದಿದೆ. ನಾಲ್ವರು ನೀಡಿರುವ ಹೇಳಿಕೆಗಳನ್ನು ತನಿಖಾಧಿಕಾರಿಗಳ ತಂಡವು ದಾಖಲೆಗಳ ಸಮೇತ ತಾಳೆ ಹಾಕಲಿದೆ. ಒಂದು ವೇಳೆ ಎಲ್ಲರ ಹೇಳಿಕೆಗಳು ಭಿನ್ನವಾಗಿದ್ದಲ್ಲಿ ಸ್ಪಷ್ಟನೆಗಾಗಿ ಮತ್ತೊಮ್ಮೆ ಆರೋಪಿಗಳನ್ನು ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ’ ಎಂದು ಮೂಲಗಳು ತಿಳಿಸಿವೆ. ಪೂರ್ವನಿಗದಿಯಂತೆ ಎರಡೇ ಗಂಟೆ ವಿಚಾರಣೆ: ಸಿದ್ದರಾಮಯ್ಯ ಅವರ ಪ್ರವಾಸ ಕಾರ್ಯಕ್ರಮದಲ್ಲಿ ನಿಗದಿಯಾದಂತೆ ಸರಿಯಾಗಿ ಎರಡೇ ಗಂಟೆ ವಿಚಾರಣೆ ನಡೆಯಿತು. ಬೆಳಿಗ್ಗೆ 10ರಿಂದ 12ರವರೆಗೆ ವಿಚಾರಣೆಗೆ ಅವರು ಸಮಯ ಮೀಸಲಿಟ್ಟಿದ್ದರು. ಅದರಂತೆಯೇ ಅಧಿಕಾರಿಗಳೂ ವಿಚಾರಣೆ ಮುಗಿಸಿದರು.
ಇನ್ನಷ್ಟು ಮಂದಿ ವಿಚಾರಣೆ ಶೀಘ್ರ
ತನಿಖಾಧಿಕಾರಿಗಳು ಈವರೆಗೆ ನಾಲ್ವರು ಆರೋಪಿಗಳ ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿ 8–10 ನಿವೃತ್ತ ಹಾಲಿ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಸದ್ಯದಲ್ಲಿಯೇ ಪ್ರಕರಣದ ಉಳಿದ ಸಾಕ್ಷಿಗಳನ್ನೂ ವಿಚಾರಣೆಗೆ ಕರೆಯಲಿದ್ದಾರೆ. ಮೈಸೂರಿನ ಹಿಂದಿನ ಜಿಲ್ಲಾಧಿಕಾರಿ ಮುಡಾದ ಹಿಂದಿನ ಆಯುಕ್ತರು ಹಾಗೂ ಅಧ್ಯಕ್ಷರು ಮುಡಾದ ಕೆಲವು ಸಿಬ್ಬಂದಿ ಉಪ ನೋಂದಣಾಧಿಕಾರಿಗಳು ಈ ಪಟ್ಟಿಯಲ್ಲಿ ಇದ್ದಾರೆ.
ಸುಳ್ಳು ಆರೋಪಗಳಿಗೆ ತಕ್ಕ ಉತ್ತರ: ಸಿದ್ದರಾಮಯ್ಯ
ಮೈಸೂರು: ‘ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಮೇಲಿನ ಎಲ್ಲ ಸುಳ್ಳು ಆರೋಪಗಳಿಗೆ ಉತ್ತರಿಸಿದ್ದೇನೆ. ಲೋಕಾಯುಕ್ತ ಪೊಲೀಸರ ವಿಚಾರಣೆಯಿಂದ ನನಗೆ ಮುಜುಗರ ಆಗುವ ಪ್ರಶ್ನೆಯೇ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಇಲ್ಲಿ ಬುಧವಾರ ಲೋಕಾಯುಕ್ತ ವಿಚಾರಣೆ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು ‘ಲೋಕಾಯುಕ್ತ ಅಧಿಕಾರಿಗಳು ನನ್ನ ಹೇಳಿಕೆಯನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಅದನ್ನು ಇಟ್ಟುಕೊಂಡು ಮುಂದಿನ ತನಿಖೆ ನಡೆಸುತ್ತಾರೆ’ ಎಂದರು. ‘ನಾವು ಮುಡಾಕ್ಕೆ ನಿವೇಶನ ವಾಪಸ್‌ ನೀಡಿರುವುದು ತಪ್ಪು ಮಾಡಿದ್ದೇವೆ ಎಂದಲ್ಲ. ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದರಿಂದ ಬೇಸರಗೊಂಡು ನನ್ನ ಪತ್ನಿ ಆ ತೀರ್ಮಾನ ಮಾಡಿದ್ದಾರೆ. ನ್ಯಾಯಾಲಯದಲ್ಲಿ ಸಾಬೀತಾಗುವವರೆಗೆ ಇದೊಂದು ಆರೋಪವಷ್ಟೇ. ನನಗಿದು ಮಸಿಯಲ್ಲ’ ಎಂದು ಪ್ರತಿಕ್ರಿಯಿಸಿದರು. ಬಿಜೆಪಿಯಿಂದ ನಡೆದ ಗೋಬ್ಯಾಕ್‌ ಚಳವಳಿ ಕುರಿತು ಪ್ರತಿಕ್ರಿಯಿಸಿ ‘ಸ್ನೇಹಿಮಯಿ ಕೃಷ್ಣ ದೂರು ಆಧರಿಸಿ ಅಧಿಕಾರಿಗಳು ನನ್ನನ್ನು ವಿಚಾರಣೆ ನಡೆಸಿದ್ದಾರೆ. ಈಗ ಬಿಜೆಪಿಯವರು ಗೋಬ್ಯಾಕ್‌ ಎಂದರೆ ಏನರ್ಥ? ಹಾಗಿದ್ದರೆ ಬಿಜೆಪಿಯವರು ತನಿಖೆಯ ವಿರುದ್ಧ ಇದ್ದಾರೆಯೇ’ ಎಂದು ಕೇಳಿದರು. ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎನ್ನುವ ಆಗ್ರಹದ ಬಗ್ಗೆ ಪ್ರತಿಕ್ರಿಯಿಸಿ ‘ಸಿಬಿಐ ಯಾರ ಕೈಯಲ್ಲಿದೆ? ಬಿಜೆಪಿಯವರು ಯಾವ ಪ್ರಕರಣವನ್ನಾದರೂ ಸಿಬಿಐಗೆ ಕೊಟ್ಟಿದ್ದಾರೆಯೇ? ಲೋಕಾಯುಕ್ತ ಮಾಡಿರುವುದು ಯಾರು’ ಎಂದು ಪ್ರಶ್ನಿಸಿದರು. ‘ಲೋಕಾಯುಕ್ತ ಸ್ವತಂತ್ರವಾಗಿ ತನಿಖೆ ನಡೆಸುವ ಸಂಸ್ಥೆ. ರಾಜ್ಯಪಾಲರು ಲೋಕಾಯುಕ್ತದಿಂದಲೇ ತನಿಖೆ ಮಾಡಿ ಎಂದೇ ತಾನೇ ಹೇಳಿರುವುದು? ಬಿಜೆಪಿಯವರಿಗೆ ಕಾನೂನಿನ ಮೇಲೆ ಗೌರವವಿಲ್ಲ’ ಎಂದರು.
ಮುಡಾ ಸಾಮಾನ್ಯ ಸಭೆ ಇಂದು
ವಿವಾದದ ನಡುವೆಯೇ ಮುಡಾದ ಸಾಮಾನ್ಯ ಸಭೆಯು ಗುರುವಾರ (ನ.7) ಮುಡಾ ಸಭಾಂಗಣದಲ್ಲಿ ನಡೆಯಲಿದೆ. ಮುಡಾದ ಪ್ರಭಾರ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಕಾಂತ ರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಮೈಸೂರು ಹಾಗೂ ಮಂಡ್ಯ ಜಿಲ್ಲೆಯ 13 ಶಾಸಕರು ವಿಧಾನಪರಿಷತ್‌ ಸದಸ್ಯರ ಜೊತೆಗೆ ಮುಡಾ ಮಹಾನಗರ ಪಾಲಿಕೆ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳನ್ನು ಸಭೆಗೆ ಆಹ್ವಾನಿಸಲಾಗಿದೆ. 50:50 ಅನುಪಾತದಲ್ಲಿ ಮುಡಾದಲ್ಲಿ 2020ರಿಂದ ಈಚೆಗೆ ಹಂಚಿಕೆ ಆಗಿರುವ ಎಲ್ಲ ನಿವೇಶನಗಳನ್ನು ವಾಪಸ್ ಪಡೆಯಬೇಕು ಎಂಬ ಒತ್ತಾಯ ಕೇಳಿಬಂದಿದ್ದು ಈ ಸಂಬಂಧ ಚರ್ಚೆಯಾಗುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT