‘ಜೀವನಶೈಲಿ ಬದಲು; ಹಳೇ ಕಟ್ಟಡಗಳ ನಾಶ’
‘ಪೂರ್ವಿಕರು ಕಟ್ಟಿದ ಮನೆಗಳು ಈಗಿನ ಪೀಳಿಗೆಗೆ ಬೇಡವಾಗಿವೆ. ಬದಲಾದ ಜೀವನಶೈಲಿಯಿಂದಾಗಿ ಹಳೇ ಮನೆಗಳನ್ನು ಒಡೆದು ಕಟ್ಟುವ ಪರಿಪಾಠ ಆರಂಭವಾಗಿದೆ. ಮನೆ ವಿನ್ಯಾಸ ಬದಲಿಸಲಾಗುತ್ತಿದೆ. ಪಾಲಿಕೆಯ ಜೊತೆಗೆ ನಾಗರಿಕರಿಗೂ ಸುಸ್ಥಿರ ಮುನ್ನೋಟ ಇಲ್ಲವಾಗಿದೆ’ ಎಂದು ಪರಿಸರ ತಜ್ಞ ಕೆ.ಮನು ‘ಪ್ರಜಾವಾಣಿ’ಗೆ ತಿಳಿಸಿದರು. ‘ಹಳೆಯ ಮನೆಗಳು ಉತ್ತಮ ಮರಳು ಸಿಮೆಂಟ್ ಇಟ್ಟಿಗೆಯಿಂದ ಕಟ್ಟಿದವು. ಅವುಗಳಿಂದ ಉತ್ಕೃಷ್ಟ ಮರುಬಳಕೆಯ ಕಟ್ಟಡ ಪರಿಕರಗಳನ್ನು ಸೃಷ್ಟಿಸಬಹುದು. ಪಾಲಿಕೆ ಕೂಡಲೇ ಯೋಚಿಸಬೇಕು. ತ್ಯಾಜ್ಯ ಸಂಸ್ಕರಣೆ ಮಾಡಲು ಮುಂದಾಗುವವರಿಗೆ ಅನುಮತಿಯನ್ನೂ ನೀಡಬೇಕು’ ಎಂದರು.