ಮೈಸೂರು: ಇಲ್ಲಿನ ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ನ. 25 ರಂದು ಸಂಜೆ 6.30 ಕ್ಕೆ ಸುಬ್ಬಯ್ಯ ನಾಯ್ಡು ರಂಗಕಾರ್ಯಾಗಾರದ ಶಿಬಿರಾರ್ಥಿಗಳು ಸಾರಾ ಅಬೂಬಕರ್ ಅವರ ಚಂದ್ರಗಿರಿಯ ತೀರದಲ್ಲಿ ನಾಟಕವನ್ನು ಪ್ರದರ್ಶಿಸಲಿದ್ದಾರೆ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ತಿಳಿಸಿದರು.

ಎಸ್.ರಾಮು ನಿರ್ದೇಶನದಲ್ಲಿ ಪ್ರದರ್ಶನಗೊಳ್ಳುವ ಈ ನಾಟಕಕ್ಕೆ ಮುಖ್ಯ ಅತಿಥಿಯಾಗಿ ರಂಗಕರ್ಮಿ ನಂದಾ ಹಳೆಮನೆ ಭಾಗವಹಿಸುವರು ಎಂದು ಅವರು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನ.26ರಂದು ಸಂಜೆ 6.30ಕ್ಕೆ ಪದ್ಮಶ್ರೀ ಆರ್.ನಾಗರತ್ನಮ್ಮ ರಂಗ ಕಾರ್ಯಾಗಾರದ ಶಿಬಿರಾರ್ಥಿಗಳು ಎಚ್.ಎಸ್.ವೆಂಕಟೇಶಮೂರ್ತಿ ಅವರ ಚಿತ್ರಪಟ ನಟಕವನ್ನು ಜೀವನ್ ಕುಮಾರ್ ಬಿ ಹೆಗ್ಗೋಡು ನಿರ್ದೇಶನದಲ್ಲಿ ಪ್ರದರ್ಶಿಸಲಿದ್ದು, ನಟ ಶಿವಾಜಿರಾವ್ ಜಾದವ್ ಅತಿಥಿಯಾಗಿ ಭಾಗವಹಿಸುವರು ಎಂದು ಅವರು ಹೇಳಿದರು.

ರಂಗಾಯಣವು ಹವ್ಯಾಸಿ ಕಲಾವಿದರಿಗಾಗಿ ಸೆ. 1ರಿಂದ ಸುಬ್ಬಯ್ಯ ನಾಯ್ಡು ಮತ್ತು ಪದ್ಮಶ್ರೀ ಆರ್.ನಾಗರತ್ನಮ್ಮ ರಂಗಕಾರ್ಯಾಗಾರ ನಡೆಸಿದ್ದು, 35 ಮಂದಿ ಇದರಲ್ಲಿ ಭಾಗವಹಿಸಿದ್ದರು ಎಂದರು. ಡಿ.10ರಿಂದ ಆರಂಭವಾಗಲಿರುವ ಬಹೂರೂಪಿಯಲ್ಲಿನ ಮಳಿಗೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.