ದಸರೆ ಸಮೀಪಿಸುತ್ತಿದ್ದು, ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕು. ಭಕ್ತರಿಗೆ ಅನುಕೂಲ ಮಾಡಿಕೊಡಬೇಕು
ಅರವಿಂದ ಶರ್ಮಾ, ಮೈಸೂರು
‘ಸಮಸ್ಯೆ ಬಗೆಹರಿಸಲು ಕ್ರಮ’
‘ವ್ಯಾಪಾರಿಗಳಿಗೆ 193 ಮಳಿಗೆಗಳನ್ನು ಹಸ್ತಾಂತರಿಸಲಾಗಿದೆ. ಆದರೂ ಯಾರು ಹೋಗುತ್ತಿಲ್ಲ. ಬೆಟ್ಟದ ದೇವಾಲಯದ ಆವರಣ ಹಾಗೂ ರಸ್ತೆ ಪಕ್ಕದಲ್ಲಿಯೇ ವ್ಯಾಪಾರ ಮಾಡುತ್ತಿದ್ದಾರೆ. ಅವರ ಸಮಸ್ಯೆಯನ್ನು ಆಲಿಸಿ ಬಗೆಹರಿಸಲಾಗುವುದು’ ಎಂದು ಚಾಮುಂಡೇಶ್ವರಿ ದೇವಾಲಯ ಇಒ ಕೃಷ್ಣ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ದೇವಾಲಯದ ಗರ್ಭಗುಡಿಯಲ್ಲಿ ಅಭಿಷೇಕದ ನೀರು ಹರಿಯಲು ತಡೆಯಾಗಿತ್ತು. ಅದನ್ನು ಪ್ರಾಚ್ಯ ಇತಿಹಾಸ, ವಸ್ತುಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಗಮನಕ್ಕೆ ತರಲಾಗಿತ್ತು. ಎಂಜಿನಿಯರ್ ಸಲಹೆ ಮೇರೆಗೆ ದುರಸ್ತಿಗೊಳಿಸಲಾಗಿದೆ’ ಎಂದರು.