ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ: ಬೆಂಕಿ ನಂದಿಸಲು ಸಂಚಾರಿ ತಂಡಗಳ ನಿಯೋಜನೆ
ಸತೀಶ್ ಬಿ. ಆರಾಧ್ಯ
Published : 5 ಜನವರಿ 2024, 7:10 IST
Last Updated : 5 ಜನವರಿ 2024, 7:10 IST
ಫಾಲೋ ಮಾಡಿ
Comments
ಬೆಂಕಿ ಅವಘಡ ಸಂಭವಿಸಿದಾಗ ಬೆಂಕಿ ನಂದಿಸುವ ಪ್ರಾಯೋಗಿಕ ಕಾರ್ಯಾಚರಣೆಯನ್ನು ಅರಣ್ಯ ಸಿಬ್ಬಂದಿ ನಡೆಸಿದರು
ಭರತ್ ತಳವಾರ್
700 ಕಿ.ಮೀ. ಬೆಂಕಿರೇಖೆ ನಿರ್ಮಾಣ
‘ಜ.14ರಿಂದ ಮಾರ್ಚ್‌ವರೆಗೆ ಅಂತರಸಂತೆ ವಲಯ ಅರಣ್ಯ ವ್ಯಾಪ್ತಿಗೆ 40 ಆದಿವಾಸಿ ಜನರನ್ನು ಕರ್ತವ್ಯಕ್ಕೆ ಆಯ್ಕೆ ಮಾಡಲಾಗುವುದು. ಅಂತರಸಂತೆ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ 230 ಕಿ.ಮೀ. ಮತ್ತು ಡಿ.ಬಿ.ಕುಪ್ಪೆ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ 470 ಕಿ.ಮೀ. ಬೆಂಕಿರೇಖೆಗಳನ್ನು ಈಗಾಗಲೇ ನಿರ್ಮಿಸಲಾಗಿದೆ’ ಎಂದು ಅಂತರಸಂತೆ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಭರತ್ ತಳವಾರ್ ತಿಳಿಸಿದರು.
ಪ್ರತಿ ವಲಯಕ್ಕೆ 2 ವೀಕ್ಷಣಾ ಗೋಪುರ
‘ಅರಣ್ಯದೊಳಗೆ ಆಯಾ ವಲಯಕ್ಕೆ 1 ಅಥವಾ 2 ವೀಕ್ಷಣಾ ಗೋಪುರಗಳನ್ನು ನಿರ್ಮಿಸಲಾಗಿದೆ. ಪ್ರತಿ ವಲಯದಲ್ಲೂ ಒಂದೊಂದು ವಾಹನ ನಿಯೋಜಿಸಲಾಗಿದೆ. ಸಿಬ್ಬಂದಿಯನ್ನು ಕರೆದೊಯ್ಯಲು ಆಹಾರ ನೀರು ಸೇರಿದಂತೆ ಅಗತ್ಯ ವಸ್ತುಗಳನ್ನು ಸಾಗಿಸಲು ಮೊಬೈಲ್ ಫೈರ್ ಪ್ರೊಟೆಕ್ಷನ್ ಕ್ಯಾಂಪ್ ಸಿದ್ಧವಾಗಿರುತ್ತದೆ. ಬೇಸಿಗೆಯಲ್ಲಿ ಕೆರೆಗಳಲ್ಲಿ ನೀರು ಬತ್ತುವ ಹಿನ್ನೆಲೆಯಲ್ಲಿ ನೀರು ತುಂಬಿಸಲಾಗುತ್ತಿದೆ’ ಎಂದು ಮೇಟಿಕುಪ್ಪೆ ವನ್ಯಜೀವಿ ವಲಯ ಅರಣ್ಯ ಅಧಿಕಾರಿ ಹರ್ಷಿತ್ ತಿಳಿಸಿದರು.