ಶತಮಾನೋತ್ಸವದ ಯೋಜನೆಗಳಲ್ಲಿ ವಾಹನ ಪಾರ್ಕಿಂಗ್‌ಗಾಗಿಯೂ ಯೋಜನೆ ರೂಪಿಸಲಾಗಿದೆ ಎಂಬ ಮಾಹಿತಿ ಇದೆ. ನೆಲಕ್ಕೆ ಇಂಟರ್‌ಲಾಕ್ ಟೈಲ್ಸ್ ಅಳವಡಿಸಬೇಕು ಎಂದು ಮನವಿ ಮಾಡಿದ್ದೇವೆ
ಶೋಭಾ ಕೆ.ಆರ್ ಆಸ್ಪತ್ರೆಯ ಸೂಪರಿಂಟೆಂಡೆಂಟ್
ಸಿಬ್ಬಂದಿಗೂ ವ್ಯವಸ್ಥೆ ಇಲ್ಲ
ಆಸ್ಪತ್ರೆಯ ವೈದ್ಯರು ವೈದ್ಯಕೀಯ ವಿದ್ಯಾರ್ಥಿ ಹಾಗೂ ಸಿಬ್ಬಂದಿಯೂ ಆಸ್ಪತ್ರೆ ಆವರಣದ ಹೊರಗಡೆ ವಾಹನ ಬಿಟ್ಟು ತೆರಳುತ್ತಾರೆ. ಕೆಲಸ ಮುಗಿಸಿ ಬರುವವರೆಗೆ ಗಾಳಿ ಮಳೆ ಬಿಸಿಲಿಗೆ ವಾಹನಗಳು ಮೈಯೊಡ್ಡಿ ನಿಂತಿರಬೇಕು. ಅವರಿಗೆ ಉಚಿತ ಪಾರ್ಕಿಂಗ್ ವ್ಯವಸ್ಥೆ ಇದೆ ಎನ್ನುವುದಷ್ಟೇ ಸಮಾಧಾನ ತರುವ ವಿಚಾರ.