ಸೋಮಣ್ಣ ಅವರು ಬಾಮೈದುನನ ಮಗಳು ಪಲ್ಲವಿ ಅವರ ಪತಿ ಸುರೇಶ್ ಮತ್ತು ಕುಟುಂಬದೊಂದಿಗೆ ಎಚ್.ಡಿ. ಕೋಟೆಯಲ್ಲಿ ಬುಧವಾರ ಸಂತಸ ಹಂಚಿಕೊಂಡರು
‘ದೊಡ್ಡ ಪ್ರಶಸ್ತಿ ನಿರೀಕ್ಷಿಸಿರಲಿಲ್ಲ’
‘ಈ ರೀತಿಯ ದೊಡ್ಡ ಪ್ರಶಸ್ತಿ ಬರುತ್ತದೆ ಎನ್ನುವುದು ಗೊತ್ತಿರಲಿಲ್ಲ. ಖುಷಿಯಾಗಿದೆ. ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ. 1978ರಿಂದ ನನ್ನ ಜನರ ಪರವಾಗಿ ಹೋರಾಡುತ್ತಿದ್ದೇನೆ. ಒಂದು ಸಮುದಾಯಕ್ಕೆ ಸೀಮಿತವಾಗಲಿಲ್ಲ. ಎಲ್ಲರ ಪರವಾಗಿ ಹೋರಾಟ ಮಾಡುತ್ತಿದ್ದೇನೆ. ಈ ಸಂದರ್ಭದಲ್ಲಿ ದೇವನೂರ ಮಹಾದೇವ ಸಿದ್ದಲಿಂಗಯ್ಯ ಕೋಟಿಗಾನಹಳ್ಳಿ ರಾಮಯ್ಯ ಲಿಂಗದೇವರು ಹಳೆಮನೆ ಮೊದಲಾದವರನ್ನು ನೆನಪಿಸಿಕೊಳ್ಳುತ್ತೇನೆ’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.