ಮೈಸೂರು: ‘ಅಬಕಾರಿ ಇಲಾಖೆಯಲ್ಲಿ ನೂರಾರು ಕೋಟಿ ರೂಪಾಯಿ ಲೆಕ್ಕದಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಸಚಿವ ಆರ್.ಬಿ. ತಿಮ್ಮಾಪುರ ಇದರ ಮೂಲ ಪುರುಷ. ಇಲಾಖೆಯ ಅಧಿಕಾರಿಗಳೇ ಈ ಮಾತು ಹೇಳುತ್ತಿದ್ದಾರೆ’ ಎಂದು ರಾಜ್ಯ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಗುರುಸ್ವಾಮಿ ದೂರಿದರು.

ಇಲ್ಲಿ ಮಂಗಳವಾರ ಮಾತನಾಡಿದ ಅವರು, ‘ಸಚಿವರಿಗೆ ಲಂಚ ಕೊಟ್ಟು ಬಂದಿದ್ದೇವೆ ಎಂದು ಅಧಿಕಾರಿಗಳೇ ನೇರವಾಗಿ ಹೇಳುತ್ತಿದ್ದಾರೆ. ಸಚಿವರಿಗೆ, ಆಯುಕ್ತರಿಗೆ, ಸೂಪರಿಂಟೆಂಡೆಂಟ್, ಸ್ಕ್ವಾಡ್, ಸಿಬ್ಬಂದಿಗೆ ಇಂತಿಷ್ಟು ಲಂಚ ನಿಗದಿ ಮಾಡಿಕೊಂಡಿದ್ದಾರೆ’ ಎಂದರು.

‘ಪ್ರತಿ ಅಂಗಡಿಯಿಂದ ಪ್ರತಿ ತಿಂಗಳಿಗೆ ಅಧಿಕಾರಿಗಳಿಗೆ ಇಂತಿಷ್ಟು ಎಂದು ಹಣ ಕೊಡಬೇಕಿದೆ. ಲೈಸನ್ಸ್ ನವೀಕರಣ ಇಲ್ಲವೇ ವರ್ಗಾವಣೆ, ಹೆಸರು ಬದಲಾವಣೆಗೂ ಹಣ ಪಡೆಯಲಾಗುತ್ತಿದೆ. ಇಲಾಖೆಯಲ್ಲಿ ಮೊದಲಿನಿಂದಲೂ ಭ್ರಷ್ಟಾಚಾರ ಇದೆಯಾದರೂ ಇತ್ತೀಚಿನ ದಿನಗಳಲ್ಲಿ ಇದು ವಿಪರೀತವಾಗಿದೆ. ಇದೆಲ್ಲದರ ಪರಿಣಾಮ ಪರವಾನಗಿದಾರರಿಗೆ ತೊಂದರೆ ಎದುರಾಗಿದೆ. ಸನ್ನದುದಾರರು ಯಾರೂ ಬದುಕುವ ಪರಿಸ್ಥಿತಿಯಲ್ಲಿ ಇಲ್ಲ’ ಎಂದು ದೂರಿದರು.

‘ಅಬಕಾರಿ ಇಲಾಖೆ ಭ್ರಷ್ಟಾಚಾರದ ಬಗ್ಗೆ ಅಜಿತ್ ಎಂಬುವರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಈ ಹಗರಣದಲ್ಲಿ ಸಚಿವರ ಪಿ.ಎ., ಪಿ.ಎಸ್.ಗಳೂ ಇದ್ದಾರೆ. ಎಲ್ಲರೂ ಒಂದೇ ಕಡೆ ಸೇರಿ ಇದನ್ನು ನಡೆಸುತ್ತಿದ್ದಾರೆ. ಸಚಿವರು ಲಂಚ ಪಡೆದ ಪರಿಣಾಮ, ಅಧಿಕಾರಿಗಳು ಸಚಿವರ ಹೆಸರು ಹೇಳಿಕೊಂಡು ಇನ್ನಷ್ಟು ಲಂಚ ಪಡೆಯುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ ಪರವಾನಗಿ ವಿಚಾರದಲ್ಲಿ, ಸ್ಟಾಕ್ ವಿಚಾರದಲ್ಲಿ ನಮಗೆ ತೊಂದರೆ ನೀಡುತ್ತಾರೆ’ ಎಂದರು.

20ರಂದು ಬಂದ್ಗೆ ಕರೆ: ‘ಇಲಾಖೆ ಯಲ್ಲಿನ ಭ್ರಷ್ಟಾಚಾರದ ಬಗ್ಗೆ ರಾಜ್ಯ ಸರ್ಕಾರಕ್ಕೆ ದೂರು ನೀಡಿದ್ದೇವೆ. ನ.20 ರಂದು ಮದ್ಯದಂಗಡಿಗಳ ಬಂದ್ಗೆ ತೀರ್ಮಾನಿಸಿದ್ದೇವೆ. ಅಷ್ಟರೊಳಗೆ ಸಿದ್ದರಾಮಯ್ಯ ನಮ್ಮ ಸಮಸ್ಯೆಗಳನ್ನು ಸರಿಪಡಿಸಬೇಕು. ಇಲ್ಲದಿದ್ದರೆ ಬಂದ್ ನಡೆಯಲಿದೆ. ಸಂಘವು ಮುಂದಿನ ದಿನಗಳಲ್ಲಿ ರಾಜ್ಯಪಾಲರು ಹಾಗೂ ಸಿಬಿಐಗೆ ದೂರು ನೀಡಲಿದೆ’ ಎಂದರು.

ವರ್ಗಾವಣೆ ಮಾಡಿಲ್ಲ: ತಿಮ್ಮಾಪುರ

ಹುಬ್ಬಳ್ಳಿ: ‘ಅಬಕಾರಿ ಇಲಾಖೆಯಲ್ಲಿ ಯಾವುದೇ ವರ್ಗಾವಣೆ ಮಾಡಿಲ್ಲ. ಅಧಿಕಾರಿಗಳಿಗೆ ಬಡ್ತಿ ನೀಡಲಾಗಿದೆ. ಅದು ಸಹಜ ಪ್ರಕ್ರಿಯೆ’ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.

ಇಲಾಖೆಯ ಹಿರಿಯ ಅಧಿಕಾರಿಗಳ ವರ್ಗಾವಣೆಗೆ ಕೋಟ್ಯಂತರ ರೂಪಾಯಿ ಹಣ ಪಡೆದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು,‘ನಾನು ಕೋಟ್ಯಂತರ ರೂಪಾಯಿ ಹಣ ನೋಡಿಲ್ಲ. ಯಾರಾದರೂ ಇದ್ದರೆ ತೋರಿಸಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.