ಮೈಸೂರು: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಗರದ ಪೂರ್ಣಚೇತನ ಶಾಲೆಯ ಮಕ್ಕಳೇ ಬರೆದು, ಸಂಪಾದಿಸಿ, ಪ್ರಕಟಿಸಿರುವ ‘ಪಾಠ್ ಶಾಲಾ-ಜೀವನ್ ಯಾತ್ರಾ’ ಪುಸ್ತಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಅವರನ್ನು ಅಭಿನಂದಿಸಿದ್ದಾರೆ.

ಶಾಲೆಯ ಸಿಇಒ ಬಿ.ದರ್ಶನ್ ರಾಜ್ ಹಾಗೂ ಶಾಲೆಯ ಮುಖ್ಯ ಆಡಳಿತಾಧಿಕಾರಿ ಮಾಧುರ್ಯ ರಾಮಸ್ವಾಮಿ ಅವರು ಇತ್ತೀಚಿಗೆ ಸಚಿವರನ್ನು ನವದೆಹಲಿಯ ಕಚೇರಿಯಲ್ಲಿ ಭೇಟಿ ಮಾಡಿ ಪುಸ್ತಕವನ್ನು ನೀಡಿದರು. ಅದನ್ನು ಮೆಚ್ಚಿದ ಸಚಿವರು, ಮಕ್ಕಳ ಕ್ರಿಯಾಶೀಲತೆ ಹಾಗೂ ಸೃಜನಶೀಲತೆಯನ್ನು ಶ್ಲಾಘಿಸಿದರು.

ಶಾಲೆಯ 4ರಿಂದ 10ನೇ ತರಗತಿಯವರೆಗಿನ 104 ವಿದ್ಯಾರ್ಥಿಗಳು ತಮ್ಮ ಬದುಕಿನ ಸಣ್ಣ ಸಣ್ಣ ಅನುಭವಗಳು, ಪ್ರವಾಸ, ಸೃಜನಶೀಲ ಆಲೋಚನೆಗಳು, ತಮ್ಮನ್ನು ಪ್ರಭಾವಿಸಿದ ಸಂಗತಿಗಳು-ವ್ಯಕ್ತಿಗಳ ಬಗ್ಗೆ ಬರೆದಿರುವ 189 ಲೇಖನಗಳ ಗುಚ್ಛವೇ ಈ ಪುಸ್ತಕ. ವಿಶೇಷವೆಂದರೆ, ಐಎಸ್ಬಿಎನ್ ಸಂಖ್ಯೆಯೂ ಪುಸ್ತಕಕ್ಕೆ ದೊರೆತಿದೆ ಎಂದು ಶಾಲೆಯವರು ಮಾಹಿತಿ ನೀಡಿದರು.

‘ಕೇಂದ್ರ ಸಚಿವರ ಮೆಚ್ಚುಗೆ ನಮ್ಮ ಶಾಲೆಯ ಮಕ್ಕಳಿಗೆ ದೊರೆತ ಅತಿ ದೊಡ್ಡ ಬಹುಮಾನ. ಇದರೊಂದಿಗೆ ಶಾಲೆಯ ಜವಾಬ್ದಾರಿಯೂ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಮಕ್ಕಳ ಕ್ರಿಯಾಶೀಲತೆ, ಸೃಜನಶೀಲತೆಗೆ ಬೆಂಬಲ- ಅವಕಾಶ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದೆ’ ಎಂದು ದರ್ಶನ್ ರಾಜ್ ತಿಳಿಸಿದ್ದಾರೆ.

‘ಭಾರತೀಯ ಶಿಕ್ಷಣ ಕ್ರಮದ ಬಲವರ್ಧನೆ ನಿಟ್ಟಿನಲ್ಲಿ ನಾವು ಈ ಶಾಲೆಯನ್ನು ಬೆಳೆಸುತ್ತಿದ್ದೇವೆ. ಇದು ನಮ್ಮ ಕರ್ತವ್ಯವೂ ಹೌದು’ ಎಂದಿದ್ದಾರೆ.

ಶಾಲೆಯ ಹಿತೈಷಿಗಳಾದ ರಾಕೇಶ್ ಹಾಗೂ ನೀಲಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.