ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು: ಉಪ ಮುಖ್ಯಸ್ಥ, ಸ್ಕ್ವಾಡ್ ಇಲ್ಲದೆ ಪದವಿ ಪರೀಕ್ಷೆ

Published : 19 ಜನವರಿ 2024, 7:35 IST
Last Updated : 19 ಜನವರಿ 2024, 7:35 IST
ಫಾಲೋ ಮಾಡಿ
Comments
ಪ್ರೊ.ಕೆ.ಎಂ. ಮಹದೇವನ್‌
ಪ್ರೊ.ಕೆ.ಎಂ. ಮಹದೇವನ್‌
ತರಗತಿ ಪರೀಕ್ಷೆಯಂತಾದ ಮುಖ್ಯ ಪರೀಕ್ಷೆ ಮಾಯವಾದ ಪರೀಕ್ಷಾ ಗಂಭೀರತೆ ಕಾಣೆಯಾದ ಪಾರದರ್ಶಕತೆ
ಪ್ರಾಂಶುಪಾಲರೇ ಮುಖ್ಯಸ್ಥರು: ಕುಲಸಚಿವ
‘ನಿಯಮಗಳಂತೆಯೇ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಸ್ಕ್ವಾಡ್‌ಗಳನ್ನು ರಚಿಸಲಾಗಿದೆ. ಉನ್ನತ ಶಿಕ್ಷಣ ಇಲಾಖೆಯ ಸೂಚನೆಯಂತೆಯೇ ಪರೀಕ್ಷಾ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಸುತ್ತೋಲೆ ಹೊರಡಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಪ್ರಾಂಶುಪಾಲರೇ ಮುಖ್ಯಸ್ಥರು’ ಎಂದು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ‍ಪ್ರೊ.ಕೆ.ಎಂ.ಮಹದೇವನ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.  ‘ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಕ್ರಮವಹಿಸುವುದು ವಿಡಿಯೊ ರೆಕಾರ್ಡ್‌ಗಳನ್ನು ಸಂರಕ್ಷಿಸುವುದು ಹಾಗೂ ವಿಶ್ವವಿದ್ಯಾಲಯ ಸೂಚಿಸಿದಾಗ ಹಾಜರು ಪಡಿಸಲು ತಿಳಿಸಲಾಗಿದೆ. ಅಳವಡಿಕೆಯ ಬಗ್ಗೆ ಮಾಹಿತಿ ನೀಡುವಂತೆ ಹೇಳಲಾಗಿದೆ. ಪರೀಕ್ಷಾ ಸಿಬ್ಬಂದಿಗೆ ಭತ್ಯೆಯನ್ನು ನೀಡಲಾಗಿದೆ’ ಎಂದರು. ಈ ಬಗ್ಗೆ ಪರೀಕ್ಷಾ ಕೇಂದ್ರಗಳಿರುವ ಕಾಲೇಜುಗಳಿಗೆ ‘ಪ್ರಜಾವಾಣಿ’ ಕರೆ ಮಾಡಿದಾಗ ಯಾರೂ ಹಾಗೂ ಯಾವ ತಂಡವೂ ಬಂದಿಲ್ಲವೆಂದು ಅಧ್ಯಾಪಕರು ತಿಳಿಸಿದರು. ಅದರ ಸ್ಪಷ್ಟನೆಗೆ ಕುಲಪತಿ ಹಾಗೂ ಕುಲಸಚಿವರಿಗೆ ಕರೆ ಮಾಡಿದಾಗ ಸ್ವೀಕರಿಸಲಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT