ಕೆ.ಆರ್.ನಗರ: ಪಟ್ಟಣದ ಬಸ್ ನಿಲ್ದಾಣದಲ್ಲಿ ದ್ವಿಚಕ್ರ ವಾಹನ ನಿಲುಗಡೆಯ ಜಾಗವನ್ನು ಕಳೆದ ಮೂರು ತಿಂಗಳಿಂದ ಬಂದ್ ಮಾಡಿದ್ದು, ಸವಾರರಿಗೆ ತೊಂದರೆ ಉಂಟಾಗಿದೆ.

ಬಸ್ ನಿಲ್ದಾಣಕ್ಕೆ ಬಹುತೇಕ ಪ್ರಯಾಣಿಕರು ದ್ವಿಚಕ್ರ ವಾಹನದಲ್ಲಿ ಬರುತ್ತಾರೆ. ಬೈಕ್‌ಗಳನ್ನು ನಿಲ್ದಾಣದ ಮತ್ತೊಂದು ಬದಿಯಲ್ಲಿ ನಿಲುಗಡೆ ಮಾಡುತ್ತಿದ್ದಾರೆ. ಇದರಿಂದ ವಾಹನಗಳಿಗೆ ಸುರಕ್ಷತೆ ಇಲ್ಲವಾಗಿದೆ. ವಾಹನ ಕಳವು ಮಾಡುವ ಸಾಧ್ಯತೆ ಇದೆ. ಸವಾರರಿಗೆ ದ್ವಿಚಕ್ರ ವಾಹನಗಳ ಚಿಂತೆ ಕಾಡುವಂತಾಗಿದೆ.

ನಿಲ್ದಾಣದ ಮತ್ತೊಂದು ಬದಿಯಲ್ಲಿ ಬೈಕ್ ನಿಲ್ಲಿಸುವುದರಿಂದ ಬಸ್‌ಗಳನ್ನು ನಿಲ್ಲಿಸಲು, ಪ್ರಯಾಣಿಕರು ಹತ್ತಲು, ಇಳಿಯಲು ತೊಂದರೆಯಾಗುತ್ತಿದೆ.

ಇಲ್ಲಿ ಗಂಟೆ ಲೆಕ್ಕದ ಮೇಲೆ ದರ ನಿಗದಿಗೊಳಿಸಿ ದ್ವಿಚಕ್ರ ವಾಹನ ಗಳನ್ನು ನಿಲ್ಲಿಸ ಲಾಗುತ್ತಿತ್ತು. ಬೈಕ್‌ಗಳನ್ನು ನಿಲ್ಲಿಸಲು ಜಾಗ ಸಿಗದಷ್ಟು ಗ್ರಾಹಕರ ಸಂಖ್ಯೆ ಹೆಚ್ಚಾಗಿತ್ತು. ವಾಹನ ನಿಲುಗಡೆ ಜಾಗವನ್ನು ಬಂದ್ ಮಾಡಿರುವುದರಿಂದ ಕೆಎಸ್ ಆರ್‌ಟಿಸಿಗೆ ಬರುತ್ತಿದ್ದ ಆದಾಯವೂ ನಿಂತಿದೆ. ದ್ವಿಚಕ್ರವಾಹನ ಸವಾರರು ಪರದಾಡುವಂತಾಗಿದೆ.

‘ಟೆಂಡರ್ ಅವಧಿ ಮುಗಿದ ಹಿನ್ನೆಲೆಯಲ್ಲಿ ವಾಹನ ನಿಲುಗಡೆ ಸ್ಥಳವನ್ನು ಮುಚ್ಚಲಾಗಿದೆ. ಇದನ್ನು ಆರಂಭಿಸಲು ಇ-ಟೆಂಡರ್ ಪ್ರಕ್ರಿಯೆ ಮುಗಿದಿದೆ. ವ್ಯಕ್ತಿಯೊಬ್ಬರು ಟೆಂಡರ್ ಪಡೆದಿದ್ದಾರೆ. ಇಲಾಖೆ ಯಿಂದ ಅನುಮತಿ ದೊರೆಯುತ್ತಿದ್ದಂತೆ ಪ್ರಾರಂಭಿಸಲಾಗುತ್ತದೆ’ ಎಂದು ಕೆ.ಆರ್.ನಗರ ಬಸ್ ಡಿಪೊ ಘಟಕ ವ್ಯವಸ್ಥಾಪಕ ಪಿ.ಮಹೇಶ್ ತಿಳಿಸಿದರು.

ಬಸ್‌ಗಳು ಓಡಾಡುವ, ಸುರಕ್ಷಿತವಾಗಿಲ್ಲದ ಜಾಗದಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಅಧಿಕಾರಿಗಳು ಇತ್ತ ಗಮನಹರಿಸಬೇಕು.

–ಕೆ.ಎಚ್.ಯೋಗಣ್ಣ, ನಿವೃತ್ತ ಉಪನ್ಯಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.