ದೇವದುರ್ಗ: ಜುಲೈನಲ್ಲಿ ಸುರಿದ ಈ ವರ್ಷದ ಮೊದಲ ಅತಿವೃಷ್ಟಿಗಿಂತಲೂ ಅಕ್ಟೋಬರ್ನಲ್ಲಿ ಸುರಿದ ಎರಡನೇ ಅತಿವೃಷ್ಟಿಗೆ ತಾಲ್ಲೂಕಿನಲ್ಲಿ ಜನ ಜೀವನ ತತ್ತರಿಸಿ ಹೋಗಿದೆ. ಸಾವಿರಾರೂ ಹೇಕ್ಟೆರ್ ಪ್ರದೇಶದಲ್ಲಿ ಬೆಳೆಹಾನಿ ಆಗಿದೆ.

ದೇವದುರ್ಗ ಸೇರಿದಂತೆ ಗಬ್ಬೂರು, ಅರಕೇರಾ ಮತ್ತು ಜಾಲಹಳ್ಳಿ ಹೋಬಳಿಯಲ್ಲಿ ಮೂರು ತಿಂಗಳಲ್ಲಿ ಸಂಭವಿಸಿದ ಅತಿವೃಷ್ಟಿ ಮತ್ತು ಕೃಷ್ಣಾ ನದಿ ಪ್ರವಾಹದಿಂದಾಗಿ ಸುಮಾರು 3,207 ಹೇಕ್ಟರ್ ಪ್ರದೇಶದಲ್ಲಿ ಹತ್ತಿ, ತೊಗರಿ, ಭತ್ತ ಮತ್ತು ಕಬ್ಬು ಬೆಳೆಗಳಿಗೆ ಹಾನಿಯಾಗಿದೆ. ಆಂದಾಜು ₹3.43 ಕೋಟಿ ನಷ್ಟವಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಡಾ. ಪ್ರಿಯಾಂಕ ಪಾಟೀಲ ತಿಳಿಸಿದರು.

ತಾಲ್ಲೂಕಿನಲ್ಲಿ ಒಂದು ಸಾವಿರ ಹೇಕ್ಟರ್ ಪ್ರದೇಶದಲ್ಲಿ ಮೆಣಸಿನಕಾಯಿ ಮತ್ತು ಇತರ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿರುವ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.

ಅತಿವೃಷ್ಟಿಯಿಂದಾಗಿ ನಾಲ್ಕು ಹೋಬಳಿ ವ್ಯಾಪ್ತಿಯಲ್ಲಿ ಸುಮಾರು 71 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಈಗಾಗಲೇ ಬೆಳೆಹಾನಿ ಮತ್ತು ಇತರ ಹಾನಿಗಳ ಕುರಿತು ಸರ್ಕಾರಕ್ಕೆ ಆನ್ಲೈನ್ ಮೂಲಕ ವರದಿ ಸಲ್ಲಿಸಲಾಗಿದೆ. ಸರ್ಕಾರದ ನಿದೆರ್ಶನದಂತೆ ನೇರವಾಗಿ ಫಲಾನುಭವಿಗಳ ಖಾತೆಗೆ ನಷ್ಟ ಪರಿಹಾರ ದೊರುಕುತ್ತದೆ ಎಂದು ತಹಶೀಲ್ದಾರ್ ಮಧುರಾಜ ಯಾಳಗಿ ತಿಳಿಸಿದರು.

ಕೃಷ್ಣಾ ನದಿಯ ಪ್ರವಾಹ ಮತ್ತು ಭಾರೀ ಮಳೆಯಿಂದಾಗಿ ದೇವದುರ್ಗ ಮೂಲಕ ಕೊಪ್ಪರ ಮಾರ್ಗವಾಗಿ 25 ಕಿಲೋ ಮೀಟರ್ ಗೂಗಲ್ ಮತ್ತು ಮತ್ತು ಸುಂಕೇಶ್ವರಹಾಳ ಮೂಲಕ ಹಿರೇಬೂದೂರು ಮಾರ್ಗವಾಗಿ 25 ಕಿಲೋ ಮೀಟ್ ಗೂಗಲ್ ರಸ್ತೆ, ದೇವದುರ್ಗದಿಂದ ಅಂಜಳ, ಗೋಪಾಳಪುರ, ಕಮದಾಳ, ಯಾಟಗಲ್, ರಾಮದುರ್ಗ, ಮುಷ್ಟೂರುದಿಂದ ಅರಕೇರಾ ರಸ್ತೆಗಳು ಹದಗೆಟ್ಟಿವೆ. ಈ
ಭಾಗದಲ್ಲಿ ಸಂಚಾರಕ್ಕೆ ತೊಂದರೆ ಎದುರಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.