ರಾಯಚೂರು: ಹೈದರಾಬಾದ್‌ನಲ್ಲಿ ಈಚೆಗೆ ನಡೆದ ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳು ಕರೆ ಮಾಡಿದ್ದ ಪಟ್ಟಿಯನ್ನು ಆಧರಿಸಿ ತನಿಖೆ ಮಾಡುತ್ತಿರುವ ತೆಲಂಗಾಣದ ಪೊಲೀಸರು, ಜಿಲ್ಲೆಯ ಮಾನ್ವಿ ಪಟ್ಟಣದ ಕೆಲವು ವ್ಯಾಪಾರಿಗಳನ್ನು ಬುಧವಾರ ಭೇಟಿ ಮಾಡಿ ಮಾಹಿತಿ ಪಡೆದಿದ್ದಾರೆ.

ಹೈದರಾಬಾದ್‌ನಿಂದ ಮಾನ್ವಿಗೆ ಲಾರಿಯಲ್ಲಿ ಇಟ್ಟಿಗೆ ಹಾಗೂ ಇತರೆ ಕಟ್ಟಡ ಸಾಮಗ್ರಿಗಳನ್ನು ತರಿಸಿಕೊಳ್ಳುತ್ತಿದ್ದ ಅಂಗಡಿಗಳ ಮಾಲೀಕರಿಂದ ಆರೋಪಿಗಳ ಬಗ್ಗೆ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ರಾಯಚೂರು, ದಾವಣಗೆರೆ ಹಾಗೂ ಹುಬ್ಬಳ್ಳಿವರೆಗೂ ಆರೋಪಿಗಳು ಓಡಾಡಿಕೊಂಡಿದ್ದನ್ನು ಪೊಲೀಸರಿಗೆ ತನಿಖೆ ವೇಳೆ ಆರೋಪಿಗಳು ತಿಳಿಸಿದ್ದರು. ಈ ಸುಳಿವು ಆಧರಿಸಿ ತೆಲಂಗಾಣ ರಾಜ್ಯದ ಸೈಬರ್ ಕ್ರೈಮ್ ಡಿವೈಎಸ್‌ಪಿ ಶಾಮ್‌ಬಾಬು ನೇತೃತ್ವದ ತಂಡವು ಮಾಹಿತಿ ಸಂಗ್ರಹಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.