ರಾಯಚೂರು: ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪ್ರತ್ಯೇಕ ರಾಯಚೂರು ವಿಶ್ವವಿದ್ಯಾಲಯಕ್ಕೆ ದಾಖಲಾತಿಗಳ ಅಧಿಕೃತ ಹಸ್ತಾಂತರ ಗುರುವಾರ ನಡೆಯಿತು.

ಕುಲಪತಿ ಪ್ರೊ.ದಯಾನಂದ ಅಗಸರ ಅವರು ರಾಯಚೂರು ವಿಶ್ವವಿದ್ಯಾಲಯದ ಪ್ರಥಮ ಕುಲಪತಿ ಪ್ರೊ.ಹರೀಶ್ ರಾಮಸ್ವಾಮಿ ಅವರಿಗೆ ಆಸ್ತಿಪತ್ರಗಳಿರುವ ಕಡತವನ್ನು ಹಸ್ತಾಂತರಿಸಿದರು.

ಸ್ಥಿರಾಸ್ತಿ , ಚರಾಸ್ತಿ ದಾಖಲೆ , ಮಹಾವಿದ್ಯಾಲಯಗಳ ದಾಖಲೆ , ಸಿಬ್ಬಂದಿ ಪಟ್ಟಿ , ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳ ಪಟ್ಟಿ ಸೇರಿ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನೀಡಲಾಗಿದೆ.

ರಾಯಚೂರು 122 ಮತ್ತು ಯಾದಗಿರಿ ಜಿಲ್ಲೆಯ 102 ಸೇರಿದಂತೆ ಒಟ್ಟು 224 ಮಹಾವಿದ್ಯಾಲಯಗಳು ಈ ನೂತನ ರಾಯಚೂರು ವಿಶ್ವವಿದ್ಯಾಲಯ ವ್ಯಾಪ್ತಿಗೆ ಸೇರ್ಪಡೆಯಾಗಿವೆ.

'ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡಿದ್ದು, 2021-22ನೇ ಸಾಲಿನಿಂದ ಶೈಕ್ಷಣಿಕ ಚಟುವಟಿಕೆಗಳು ಅಧಿಕೃತವಾಗಿ ಶುರುವಾಗಲಿವೆ' ಎಂದು ಕುಲಪತಿ ಪ್ರೊ.ಹರೀಶ ರಾಮಸ್ವಾಮಿ ಹೇಳಿದರು.

ಗುಲ್ಬರ್ಗಾ ವಿಶ್ವವಿದ್ಯಾಲಯ ಕುಲಸಚಿವ ಡಾ.ಶರಣಬಸಪ್ಪ ಕೋಟಿಪ್ಪಗೊಳ , ಕುಲಸಚಿವ (ಮೌಲ್ಯಮಾಪನ) ಡಾ.ಸೋನಾರ ನಂದಪ್ಪ , ವಿತ್ತಾಧಿಕಾರಿ ಪ್ರೊ.ಬಿ.ವಿಜಯ ಹಾಗೂ ರಾಯಚೂರು ವಿಶ್ವವಿದ್ಯಾಲಯ ಕುಲಸಚಿವ ಪ್ರೊ.ವಿಶ್ವನಾಥ ಎಂ., ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕರು ಪ್ರೊ.ರಾಘವೇಂದ್ರ ಎಚ್.ಫತ್ತೇಪುರ , ಪ್ರೊ. ಪಾರ್ವತಿ ಸಿ.ಎಸ್ , ಪ್ರೊ.ಪಿ.ಭಾಸ್ಕರ್ , ಪ್ರೊನುಸ್ರತ್ ಫಾತೀಮಾ , ವಾಸುದೇವ ಜೇವರ್ಗಿ , ಡಾ.ಗುರುರಾಜ ಬಿರದಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.