ತುರ್ವಿಹಾಳ: ಮೇ 29ರಿಂದ 1ರಿಂದ 10ನೇ ತರಗತಿ ವರೆಗಿನ ಶಾಲೆಗಳ ಶೈಕ್ಷಣಿಕ ಚಟುವಟಿಕೆಗಳ ಆರಂಭಕ್ಕೆ ಮತ್ತು ಶಾಲೆ ಆರಂಭದ ದಿನವೇ ಕಾಯಂ ಶಿಕ್ಷಕರು ಶಾಲೆ ಅಲಂಕರಿಸಿ ವಿದ್ಯಾರ್ಥಿಗಳನ್ನು ಸ್ವಾಗತಿಸಿ ಪ್ರೋತ್ಸಾಹಿಸುವಂತೆ ಇಲಾಖೆ ಆದೇಶ ಹೊರಡಿಸಿದೆ. ಆದರೆ ಅತಿಥಿ ಶಿಕ್ಷಕರ ನೇಮಕಕ್ಕೆ ಇದುವರೆಗೂ ಯಾವುದೇ ಸೂಚನೆ ನೀಡಿಲ್ಲ.

ಜಿಲ್ಲೆಯ 1800 ಪ್ರಾಥಮಿಕ ಹಾಗೂ 450 ಪ್ರೌಢಶಾಲೆಗಳಲ್ಲಿ ಕಾಯಂ ಶಿಕ್ಷಕರ ಜತೆ ಕಳೆದ ಬಾರಿ 3,347 ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸಿದ್ದು. ಅತಿಥಿ ಶಿಕ್ಷಕರ ಸಂಖ್ಯೆ ಈ ವರ್ಷ ಇನ್ನೂ ಹೆಚ್ಚುವ ಸಾಧ್ಯತೆ ಇದೆ. ಇಲ್ಲಿಯವರೆಗೂ ಅತಿಥಿ ಶಿಕ್ಷಕರ ಮರು ನೇಮಕ ಕುರಿತಂತೆ ಯಾವುದೇ ರೀತಿಯ ಆದೇಶ ಹೊರಬಿದ್ದಿಲ್ಲ.

ಬಹಳಷ್ಟು ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದರೆ ಕೆಲ ಶಾಲೆಗಳು ಅತಿಥಿ ಶಿಕ್ಷಕರನ್ನೇ ಅವಲಂಭಿಸಿವೆ. ಸಕಾಲಕ್ಕೆ ಶಿಕ್ಷಕರ ನೇಮಕವಾಗದಿದ್ದರೆ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವುದಲ್ಲದೇ ಫಲಿತಾಂಶದ ಮೇಲೂ ಏರುಪೇರು ಉಂಟಾಗುತ್ತದೆ. ಹಾಗಾಗಿ ಇಲಾಖೆಯವರು ಆದಷ್ಟು ಬೇಗ ಅತಿಥಿ ಶಿಕ್ಷಕರನ್ನು ನೇಮಿಸಲು ಮುಂದಾಗಬೇಕು ಎಂದು ಪಾಲಕರೊಬ್ಬರು ಹೇಳುತ್ತಾರೆ.

ಸರ್ಕಾರಿ ಶಾಲೆಗಳಲ್ಲಿ ಶಿಕ್ಷರ ಕೊರತೆ ಇದೆ. ಅದಕ್ಕಾಗಿ ಜೂನ್ ತಿಂಗಳ ಒಳಗೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವುದಾಗಿ ಕಲ್ಯಾಣ ಕರ್ನಾಟಕ ವಿಭಾಗದ ಆಯುಕ್ತರು ಮಾಹಿತಿ ನೀಡಿದ್ದಾರೆ
ಸೋಮಶೇಖರಗೌಡ ಕ್ಷೇತ್ರ ಶಿಕ್ಷಣಾಧಿಕಾರಿ ಸಿಂಧನೂರು

ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ ಮೇರಿಟ್ ಪದ್ದತಿ ಕೈಬಿಟ್ಟು ಕಳೆದ ವರ್ಷ ಸೇವೆ ಸಲ್ಲಿಸಿದವರನ್ನು ಈ ಬಾರಿ ಶೈಕ್ಷಣಿಕ ಅವಧಿಗೆ ಮುಂದುವರಿಸಬೇಕು ಮತ್ತು ಸೇವಾ ಭದ್ರತೆ ನೀಡಬೇಕು
ಅಯ್ಯಪ್ಪ ನಾಯಕ ಅತಿಥಿ ಶಿಕ್ಷಕರ ಸಂಘದ ಅಧ್ಯಕ್ಷ ಸಿಂಧನೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.