ಮಸ್ಕಿ: ಕಳೆದ ವರ್ಷ ಕಾರ್ಯಕ್ರಮ ನೀಡಿದ್ದ ಐದು ಕಲಾ ತಂಡಗಳಿಗೆ ಮಂಜೂರಾಗಿದ್ದ ₹ 3.30 ಲಕ್ಷ ಗೌರವಧನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ನಿಯಮ ಉಲ್ಲಂಘಿಸಿ ಬೇರೆ ಕಲಾ ತಂಡಗಳಿಗೆ ಪಾವತಿಸಿದ್ದಾರೆ. ಅಧಿಕಾರಿಗಳು ಮಾಡಿದ ಪ್ರಮಾದಕ್ಕೆ ಗೌರವಧನ ಪಡೆಯಲು ಕಲಾವಿದರು ಪರದಾಡುವಂತಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಶಿಫಾರಸಿನ ಮೇರೆಗೆ ಮಸ್ಕಿಯ ಭ್ರಮರಾಂಬ ದೇವಸ್ಥಾನದಲ್ಲಿ 2023ರ ಅಕ್ಟೋಬರ್‌ನಲ್ಲಿ ನಡೆದ ನವರಾತ್ರಿ ಉತ್ಸವದ ಮೆರವಣಿಗೆಗೆ ಇಲಾಖೆಯು ಐದು ಜನಪದ ಕಲಾ ತಂಡಗಳನ್ನು ಕಳುಹಿಸಿಕೊಟ್ಟಿತ್ತು. 2024ರ ಮಾರ್ಚ್‌ನಲ್ಲಿ ಇಲಾಖೆಯ ನಿರ್ದೇಶಕರು ₹3.30 ಲಕ್ಷ ಅನುದಾನ ಬಿಡುಗಡೆ ಮಾಡಿ, 2023ರ ಅಕ್ಟೋಬರ್ 28ರಂದು ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಐದು ತಂಡಗಳಿಗೆ ಗೌರವಧನ ಪಾವತಿಸುವಂತೆ ಆದೇಶಿಸಿದ್ದರು. ಆದರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಂದಿನ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ ಅವರು ಈ ಆದೇಶವನ್ನು ಉಲ್ಲಂಘಿಸಿ, 2024ರಲ್ಲಿ ಪಾಲ್ಗೊಂಡಿದ್ದ ಕಲಾ ತಂಡಗಳಿಗೆ ಈ ಹಣವನ್ನು ಪಾವತಿಸಿದ್ದಾರೆ.

2023ರಲ್ಲಿ ಕಾರ್ಯಕ್ರಮ ನೀಡಿದ್ದ ಐದು ತಂಡಗಳ ಮುಖ್ಯಸ್ಥರು ಹಲವು ಬಾರಿ ಮಂಗಳಾ ನಾಯಕ ಅವರನ್ನು ಭೇಟಿ ಮಾಡಿ ವಿಚಾರಿಸಿದರೂ ಅನುದಾನ ಬಿಡುಗಡೆಯಾಗಿಲ್ಲ ಎಂದು ಮಾಹಿತಿ ನೀಡುತ್ತಿದ್ದರು. ತಮಗೆ ಪಾವತಿಸಬೇಕಾಗಿದ್ದ ಹಣವನ್ನು ಹಿಂದಿನ ಸಹಾಯಕ ನಿರ್ದೇಶಕರು ಬೇರೆ ಕಲಾ ತಂಡಗಳಿಗೆ ವರ್ಗಾವಣೆ ಮಾಡಿರುವ ವಿಚಾರ ಇದೀಗ ಬೆಳಕಿಗೆ ಬಂದಿದ್ದು, ಅಧಿಕಾರಿಗಳ ವಿರುದ್ಧ ಕಲಾವಿದರು ಅಸಮಾಧಾನ ಹೊರಹಾಕಿದ್ದಾರೆ.

‘ಇಲಾಖೆಯ ಆದೇಶದ ಮೇರೆಗೆ ಮಸ್ಕಿಯಲ್ಲಿ ಕಲಾ ಪ್ರದರ್ಶನ ನೀಡಿದ್ದೇವೆ. ಕೇಂದ್ರ ಕಚೇರಿಯಿಂದ ಹಣ ಬಂದಿದ್ದರೂ ನಮಗೆ ನೀಡಿಲ್ಲ. 2024ರಲ್ಲಿ ಕಾರ್ಯಕ್ರಮ ನೀಡಿದ ಕಲಾ ತಂಡಗಳಿಗೆ ಪಾವತಿಸುವ ಮೂಲಕ ಅಧಿಕಾರಿಗಳು ನಮ್ಮನ್ನು ವಂಚಿಸಿದ್ದಾರೆ’ ಎಂದು ಜನಪದ ಕಲಾ ತಂಡದ ಮುಖ್ಯಸ್ಥ ತಿಪ್ಪೇಸ್ವಾಮಿ ದೂರಿದ್ದಾರೆ.

ನಿರ್ದೇಶಕರಿಗೆ ವರದಿ ಸಲ್ಲಿಕೆ: 2023ರಲ್ಲಿ ಇಲಾಖೆ ಸಚಿವರು ಹಾಗೂ ಶಾಸಕರ ಶಿಫಾರಸಿನ ಮೇಲೆ ಬಂದ ತಂಡಗಳಿಗೆ ಪಾವತಿಸಬೇಕಾದ ಸಂಭಾವನೆಯನ್ನು 2024ರಲ್ಲಿ ಕಾರ್ಯಕ್ರಮ ಕೊಟ್ಟ ತಂಡಗಳಿಗೆ ಪಾವತಿಯಾಗಿರುವ ಬಗ್ಗೆ ಇಲಾಖೆಯ ಈಗಿನ ಸಹಾಯಕ ನಿರ್ದೇಶಕ ದತ್ತಣ್ಣ ಅವರು ಇಲಾಖೆಯ ನಿರ್ದೇಶಕರಿಗೆ ವರದಿ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.